ಜಿಎಸ್‌ಟಿ ಸಂಗ್ರಹದಲ್ಲಿ ಕಳೆದ ಜನವರಿಯಲ್ಲಿ ಗಣನೀಯ ಚೇತರಿಕೆ ( 1.72 ಲಕ್ಷ ಕೋಟಿ ರೂ.) ಆಗಿರುವ ಹಿನ್ನೆಲೆಯಲ್ಲಿ ಹಲವಾರು ಕ್ಷೇತ್ರಗಳಲ್ಲಿ ಉದ್ಯಮ ಚಟುವಟಿಕೆಗಳು ಚುರುಕಾಗಿದೆ ಎಂದು ಗ್ರಹಿಸಿಕೊಳ್ಳಬಹುದು ( Money plus) ಎನ್ನುತ್ತಾರೆ ಹೂಡಿಕೆ ತಜ್ಞ ನರಸಿಂಹ ಕುಮಾರ್. ಜಿಎಸ್‌ಟಿ ಸಂಗ್ರಹ ಗರಿಷ್ಠ ಮಟ್ಟದಲ್ಲಿದ್ದರೆ ಮಾರುಕಟ್ಟೆಗೆ ಏನು ಸಂಬಂಧ ಅಂತ ನೀವು ಕೇಳಬಹುದು? ಜಿಎಸ್‌ಟಿ ಕಲೆಕ್ಷನ್ ಜಾಸ್ತಿಯಾಗಿದ್ದರೆ, ಬಿಸಿನೆಸ್ ಮತ್ತು ಸೇಲ್ಸ್ ಹೆಚ್ಚಳವಾಗಿದ್ದು, ಹೆಚ್ಚಿನ ಜಿಎಸ್‌ಟಿ ಕಟ್ಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
ಲಾರ್ಜ್ ಕ್ಯಾಪ್ ವಲಯದಲ್ಲಿ ಐಸಿಐಸಿಐ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಮೈಂಡ್ ಟ್ರೀ, ಪೊಲಿಕ್ಯಾಬ್, ಕೋಟಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ನಾಲಜೀಸ್ ಉತ್ತಮ ಪ್ರದರ್ಶನ ದಾಖಲಿಸಿದೆ. ಮಿಡ್ ಕ್ಯಾಪ್‌ನಲ್ಲಿ ಭಾರತ್ ಫೋರ್ಜ್, ಒರಾಕಲ್ ಫೈನಾನ್ಸ್, ಆಸ್ಟ್ರಾಲ್ ಲಿಮಿಟೆಡ್ ಉತ್ತಮ ರಿಟರ್ನ್ ಗಳಿಸಿವೆ. ಸ್ಮಾಲ್ ಕ್ಯಾಪ್‌ನಲ್ಲಿ ಅರವಿಂದ್ ಫ್ಯಾಷನ್ಸ್, ಪಿಸಿ ಜ್ಯುವೆಲರ್ಸ್ ಉತ್ತಮ ಬೆಳವಣಿಗೆ ಗಳಿಸಿದೆ.
ಒಟ್ಟಾರೆಯಾಗಿ ಮುಂದಿನ ಎರಡು-ಮೂರು ವರ್ಷಗಳ ಭವಿಷ್ಯ ಚೆನ್ನಾಗಿ ಇರುವ ಲಕ್ಷಣ ಕಾಣಿಸುತ್ತಿದೆ. ಹೀಗಾಗಿ ಹೂಡಿಕೆದಾರರು ತಮ್ಮ ಹೂಡಿಕೆಯನ್ನು ಮುಂದುವರಿಸಿದರೆ ಉತ್ತಮ ಲಾಭ ಪಡೆಯಬಹುದು. ರಿಯಲ್ ಎಸ್ಟೇಟ್, ವಿದ್ಯುತ್, ಟೂರಿಸಂ, ಹೋಟೆಲ್, ಟ್ರಾವೆಲ್, ಆಟೊಮೊಬೈಲ್ ಸೆಕ್ಟರ್ ಲಾಭದಾಯಕವಾಗಬಹುದು. ಹೆಚ್ಚಿನ ವಿವರಗಳಿಗೆ ಮನಿ ಪ್ಲಸ್ ವಿಡಿಯೊ ವೀಕ್ಷಿಸಿ.