ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸಲು ಅದರ ಒಂದು ವಿಭಾಗವಾಗಿರುವ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್ ಉತ್ತಮ ಆಯ್ಕೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ರಿಸ್ಕ್ ಕಡಿಮೆ. (Money plus) ಅದೇ ವೇಳೆ ಉತ್ತಮ ಎನ್ನಿಸುವ ಆದಾಯವನ್ನೂ ನೀಡುತ್ತದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಲಾರ್ಹ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಎಂಬ ವಿಧಗಳಿವೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ಹೆಚ್ಚಿನ ಮಾರುಕಟ್ಟೆ ಮೌಲ್ಯವಿರುವ ಕಂಪನಿಗಳ (Large cap mutual funds) ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಸ್ಥಿರ ಬೆಳವಣಿಗೆಯನ್ನು ಈ ಮ್ಯೂಚುವಲ್ ಫಂಡ್‌ಗಳು ದಾಖಲಿಸುತ್ತವೆ. ದೀರ್ಘಕಾಲೀನವಾಗಿ ಬಂಡವಾಳದ ಉತ್ತಮ ಮೌಲ್ಯ ವರ್ಧನೆಯಾಗುತ್ತದೆ.
ಫಂಡ್ ಹೌಸ್‌ಗಳು ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ನಿಮ್ಮ ಹೂಡಿಕೆಯನ್ನು ಮೇಲುಸ್ತುವಾರಿ ಮಾಡಲು ಶುಲ್ಕವನ್ನು ಸಂಗ್ರಹಿಸುತ್ತವೆ. ಈ ವೆಚ್ಚವನ್ನು ಎಕ್ಸ್‌ಪೆನ್ಸ್ ರೇಶಿಯೊ ಎನ್ನುತ್ತಾರೆ. ಫಂಡ್‌ನ ಒಟ್ಟು ಆಸ್ತಿಯಲ್ಲಿ ನಿರ್ದಿಷ್ಟ ಪಾಲನ್ನು ಪಡೆಯಲಾಗುತ್ತದೆ. ಸೆಬಿಯು ಇದಕ್ಕೆ 2.5% ರ ಮಿತಿಯನ್ನು ಹಾಕಿದೆ. ಇದರ ಅರ್ಥ ಏನೆಂದರೆ ಯಾವುದೇ ಮ್ಯೂಚುವಲ್ ಫಂಡ್ ಸಂಸ್ಥೆಯು ನಿಮ್ಮ ಪೋರ್ಟ್ ಫೋಲಿಯೊ ನಿರ್ವಹಣೆಗೆ 2.5% ಕ್ಕಿಂತ ಹೆಚ್ಚು ಪಡೆಯುವಂತಿಲ್ಲ. ಹೀಗಿದ್ದರೂ ಹೆಚ್ಚು ಆದಾಯ ಗಳಿಸುವ ದೃಷ್ಟಿಯಿಂದ ಎಕ್ಸ್‌ಪೆನ್ಸ್ ರೇಶಿಯೊ ಎಷ್ಟಿದೆ ಎಂಬುದನ್ನು ಗಮನಿಸಿ.
ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡಗಳಿಗೆ ಅನ್ವಯವಾಗುವ ತೆರಿಗೆಯನ್ನು ಗಮನಿಸೋಣ. ಲಾರ್ಜ್ ಕ್ಯಾಪ್ ಫಂಡ್‌ಗಳು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟ್ಯಾಕ್ಸ್ ( DDT- Dividend distribution tax) ಅನ್ನು ಒಳಗೊಂಡಿರುತ್ತವೆ. ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಕೂಡ ( capital gains tax) ಇರುತ್ತದೆ. ನೀವು ಫಂಡ್ ಅನ್ನು ವಿತ್ ಡ್ರಾವಲ್ ಮಾಡುವ ಸಂದರ್ಭ ಕ್ಯಾಪಿಟಲ್ ಗೇನ್ಸ್ ಟ್ಯಾಕ್ಸ್ ಅನ್ನು ಕಳೆಯಲಾಗುತ್ತದೆ.
ಲಾರ್ಜ್ ಕ್ಯಾಪ್ ಫಂಡ್‌ಗಳೂ ಇತರ ಯಾವುದೇ ಈಕ್ವಿಟಿ ಫಂಡ್‌ನಂತೆ ಮಾರುಕಟ್ಟೆಯ ಏರಿಳಿತಗಳ ಅಪಾಯವನ್ನು ಎದುರಿಸುತ್ತವೆ. ಲಾರ್ಜ್ ಕ್ಯಾಪ್ ಫಂಡ್‌ಗಳು ದೀರ್ಘಕಾಲೀನ ದೃಷ್ಟಿಯಿಂದ ಉತ್ತಮ ಸಂಪತ್ತು ಸೃಷ್ಟಿಗೆ ಸಹಾಯಕ. ಕೋಟಕ್ ಬ್ಲೂಚಿಪ್ ಫಂಡ್-ಡೈರೆಕ್ಟ್ ಗ್ರೋತ್, ಐಸಿಐಸಿಐ ಪ್ರು ಬ್ಲೂಚಿಪ್ ಫಂಡ್-ಡೈರೆಕ್ಟ್ ಗ್ರೋತ್, ಯುಟಿಐ ಲಾರ್ಜ್ ಕ್ಯಾಪ್ ಫಂಡ್ -ಡೈರೆಕ್ಟ್ ಗ್ರೋತ್ ಲಾರ್ಜ್ ಕ್ಯಾಪ್ ಫಂಡ್‌ಗೆ ಉದಾಹರಣೆಗಳಾಗಿವೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳು ತೆರಿಗೆ ರಹಿತ ಮ್ಯೂಚುವಲ್ ಫಂಡ್ ಅಲ್ಲ ಎಂಬುದನ್ನು ಮರೆಯಬಾರದು. ಈ ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ 12 ತಿಂಗಳಿಗಿಂತ ಹೆಚ್ಚು ಕಾಲ ಹೂಡಿದ್ದರೆ ಆಗ ಸಿಗುವ ಆಆಯದ ಮೇಲೆ 12% ತೆರಿಗೆ ಅನ್ವಯವಾಗುತ್ತದೆ.
ಇದನ್ನೂ ಓದಿ: Money plus : ಸ್ಟಾಕ್ ಮಾರ್ಕೆಟ್‌ನಲ್ಲಿ ದುಡ್ಡು ಕಳೆದುಕೊಳ್ಳದೆ ಲಾಭ ಮಾಡೋದು ಹೇಗೆ?
20,000 ಕೋಟಿ ರೂ.ಗೂ ಹೆಚ್ಚು ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳಲ್ಲಿ ಲಾರ್ಜ್ ಕ್ಯಾಫ್ ಫಂಡ್‌ಗಳು ಹೂಡಿಕೆಯಾಗುತ್ತಿವೆ, ಸರಾಸರಿ ರಿಸ್ಕ್ ಮಾತ್ರ ಬಯಸುವವರು ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಇನ್ವೆಸ್ಟ್ ಮೆಂಟ್ ಪೋರ್ಟ್ ಫೋಲಿಯೊಗೆ ಸ್ಥಿರತೆ ನೀಡುತ್ತದೆ. ಇತರ ಮ್ಯೂಚುವಲ್ ಫಂಡ್‌ಗಳಂತೆ ಇಲ್ಲೂ ವೃತ್ತಿಪರ ಗಳು ಮ್ಯಾನೇಜರ್ ಫಂಡ್ ಅನ್ನು ನಿರ್ವಹಿಸುತ್ತಾರೆ.