ನವ ದೆಹಲಿ: ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ( capital markets regulator Sebi) ಎಲ್ಲ ಮ್ಯೂಚುವಲ್ ಫಂಡ್ಗಳಿಗೆ ಏಕರೂಪದ ಒಟ್ಟು ವೆಚ್ಚ ಅನುಪಾತವನ್ನು (Toatal expense ratio) ಅನ್ನು ಜಾರಿಗೊಳಿಸಲು ಉದ್ದೇಶಿಸಿದೆ. ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಒಟ್ಟು ವೆಚ್ಚದ ಅನುಪಾತದ ವಿಷಯದಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ಹೂಡಿಕೆದಾರರಿಗೆ ವಿಧಿಸುವ ಶುಲ್ಕದಲ್ಲಿ ಏಕರೂಪತೆ ತರುವುದು ಇದರ ಉದ್ದೇಶವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.
ಪ್ರಸ್ತುತ ಸೆಬಿಯು ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿಗೆ (asset management companies) ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ನಾಲ್ಕು ಹೆಚ್ಚುವರಿ ವಿಧದ ವೆಚ್ಚ ಅನುಪಾತದ ಶುಲ್ಕ ವಿಧಿಸಲು ಅನುಮತಿ ನೀಡಿದೆ. (TER limit) ಬ್ರೋಕರೇಜ್ ಮತ್ತು ಟ್ರಾನ್ಸಕ್ಷನ್ ವೆಚ್ಚ, ಬಿ-30 ನಗರಗಳಲ್ಲಿ ಹೆಚುವರಿ TER, ಜಿಎಸ್ಟಿ ಮತ್ತು ಎಕ್ಸಿಟ್ ಲೋಡ್ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಅನುಮತಿ ನೀಡಿದೆ.
ಇದನ್ನೂ ಓದಿ: SIP : ಮ್ಯೂಚುವಲ್ ಫಂಡ್ ಮೂಲಕ ಮೊದಲ ಬಾರಿಗೆ ಮಾರ್ಚ್ನಲ್ಲಿ 14,000 ಕೋಟಿ ರೂ. ಸಿಪ್ ಹೂಡಿಕೆಯ ಪ್ರವಾಹ
ಏನಿದು ಒಟ್ಟು ವೆಚ್ಚ ಅನುಪಾತ (Total Expense Ratio) ?
ಮ್ಯೂಚುವಲ್ ಫಂಡ್ಗಳ ನಿರ್ವಹಣೆಗೆ ತಗಲುವ ಒಟ್ಟಾರೆ ವೆಚ್ಚದ ಅನುಪಾತವನ್ನು ಟೋಟಲ್ ಎಕ್ಸ್ಪೆನ್ಸ್ ರೇಶಿಯೊ ಎನ್ನುತ್ತಾರೆ. ನಿರ್ವಹಣಾ ಶುಲ್ಕ ಹಾಗೂ ಹೆಚ್ಚುವರಿ ವೆಚ್ಚವನ್ನು ಇದು ಅಧರಿಸಿದೆ. ( ಟ್ರೇಡಿಂಗ್, ಕಾನೂನು, ಆಡಿಟರ್ ಶುಲ್ಕ ಇತ್ಯಾದಿ)
ಸೆಬಿ ಹೇಳಿದ್ದೇನು? : ಟಿಇಆರ್ ಅಡಿಯಲ್ಲಿ ಮ್ಯೂಚುವಲ್ ಫಂಡ್ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ವೆಚ್ಚಗಳೂ ಸೇರುತ್ತವೆ. ಅದನ್ನು ಹೂಡಿಕೆದಾರ ಪಾವತಿಸಬೇಕಾಗುತ್ತದೆ. ಆದರೆ ನಿಗದಿತ ಟಿಇಆರ್ ಮಿತಿಗಿಂತ ಹೆಚ್ಚಿನದ್ದನ್ನು ಹೂಡಿಕೆದಾರರಿಗೆ ವಿಧಿಸಕೂಡದು ಎಂದು ಸೆಬಿ ತಿಳಿಸಿದೆ.
ಮ್ಯೂಚುವಲ್ ಫಂಡ್ ಹೂಡಿಕೆದಾರರು ತಮ್ಮ ನಾಮಿನಿ ವಿವರಗಳನ್ನು (mutual fund nomination) ಸಲ್ಲಿಸಲು ನಿಗದಿಯಾಗಿದ್ದ ಗಡುವುದು 2023ರ ಮಾರ್ಚ್ 31ರಿಂದ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಣೆಯಾಗಿದೆ. ಮ್ಯೂಚುವಲ್ ಫಂಡ್ ಸಂಸ್ಥೆಗಳು ನಾಮಿನೇಶನ್ ಪ್ರಕ್ರಿಯೆಯನ್ನು ಇದುವರೆಗೆ ಮಾಡದಿರುವ ಹೂಡಿಕೆದಾರರಿಗೆ, ಪೂರ್ಣಗೊಳಿಸಲು ಉತ್ತೇಜನ ನೀಡಬೇಕು. ಇ-ಮೇಲ್, ಎಸ್ಸೆಮ್ಮೆಸ್ಗಳನ್ನು ಕಳಿಸಬೇಕು ಎಂದು ಸೆಬಿ ತಿಳಿಸಿದೆ.
2022ರ ಜೂನ್ 15ರ ಸುತ್ತೋಲೆಯಲ್ಲಿ ಸೆಬಿಯು ಮ್ಯೂಚುವಲ್ ಫಂಡ್ ಹೂಡಿಕೆಗೆ ನಾಮಿನೇಶನ್ ಕಡ್ಡಾಯ ಎಂದು ತಿಳಿಸಿತ್ತು. ಬಳಿಕ ಗಡುವನ್ನು 2022ರ ಅಕ್ಟೋಬರ್ 1ಕ್ಕೆ ವಿಸ್ತರಿಸಲಾಯಿತು. ಬಳಿಕ 2023ರ ಮಾರ್ಚ್ 31ಕ್ಕೆ ಹಾಗೂ ಇದೀಗ 2023ರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗಿದೆ.
ನಾಮಿನೇಶನ್ ಏಕೆ? ಮ್ಯೂಚುವಲ್ ಫಂಡ್ ಹೂಡಿಕೆದಾರರು ಮೃತಪಟ್ಟ ಸಂದರ್ಭದಲ್ಲಿ ಅವರ ಉತ್ತರಾಧಿಕಾರಿ ಯಾರು ಎಂಬುದನ್ನು ನಾಮಿನೇಶನ್ ಮೂಲಕ ತಿಳಿಸಲಾಗುತ್ತದೆ. ಇದರಿಂದ ಹೂಡಿಕೆಯ ಹಿಂತೆಗೆತ ಪ್ರಕ್ರಿಯೆ ಸುಗಮವಾಗುತ್ತದೆ. ಆದ್ದರಿಂದ ನಾಮಿನೇಶನ್ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ. ನಿಮ್ಮ ಮ್ಯೂಚುವಲ್ ಫಂಡ್ ಸಂಸ್ಥೆಯ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲೂ ನಾಮಿನೇಶನ್ ಪ್ರಕ್ರಿಯೆ ಪೂರ್ಣಗೊಳಿಸಬಹುದು.