Site icon Vistara News

National Pension Scheme: ಎನ್‌ಪಿಎಸ್‌ನಲ್ಲಿ ದಿನಕ್ಕೆ 200 ರೂ. ಹೂಡಿಕೆ ಮಾಡಿದರೆ ಸಿಗುವ ಮಾಸಿಕ ಪಿಂಚಣಿ ಎಷ್ಟು ಗೊತ್ತೇ?

National Pension Scheme

ದಿನಕ್ಕೆ 200 ರೂ. ಪಾವತಿಸಿ ಮಾಸಿಕ ಪಿಂಚಣಿಯಾಗಿ (monthly pension) ಲಕ್ಷಾಂತರ ರೂಪಾಯಿ ಮಾತ್ರವಲ್ಲದೆ ಕೋಟ್ಯಂತರ ರೂಪಾಯಿ ನಿವೃತ್ತಿ ಪಿಂಚಣಿಯನ್ನು (Retirement Pension) ಪಡೆಯಲು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (National Pension Scheme) ಅತ್ಯುತ್ತಮ ದಾರಿ ಇದೆ. ಭವಿಷ್ಯದ ದೃಷ್ಟಿಯಿಂದ ಉಳಿತಾಯ ಯೋಜನೆಯನ್ನು ಯೋಚಿಸುತ್ತಿದ್ದರೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ನಿವೃತ್ತಿ ಮತ್ತು ಮಾಸಿಕ ಪಿಂಚಣಿ ಎರಡಕ್ಕೂ ಏಕಕಾಲದಲ್ಲಿ ಪಾವತಿ ವ್ಯವಸ್ಥೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಕಲ್ಪಿಸಿದೆ. ವಿಶ್ವಾಸಾರ್ಹ ಪಿಂಚಣಿ ಯೋಜನೆಗಾಗಿ ಹುಡುಕುತ್ತಿದ್ದರೆ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ.

ದಿನಕ್ಕೆ ಕೇವಲ 167 ರೂ.

18 ವರ್ಷ ತುಂಬಿದ ಅನಂತರ ಮೊದಲ ತಿಂಗಳಿನಿಂದ ಹೂಡಿಕೆಯನ್ನು ಪ್ರಾರಂಭಿಸಿದರೆ 57 ವರ್ಷಗಳ ಅವಧಿಯವರೆಗೆ ಅಂದರೆ 75 ವಯಸ್ಸಿನವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ದಿನಕ್ಕೆ 167 ರೂಪಾಯಿಯಂತೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಪಿಂಚಣಿ ಮತ್ತು ನಿವೃತ್ತಿ ಪಾವತಿ ಮೊತ್ತ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡಬಹುದು.

ಹೂಡಿಕೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಿದರೆ ಚಂದಾದಾರರು 3,51,978 ರೂ.ಗಿಂತ ಕಡಿಮೆಯಿಲ್ಲದ ಮಾಸಿಕ ಪಿಂಚಣಿ ಮತ್ತು 10.55 ಕೋಟಿ ರೂ.ಗಳ ಒಂದು ಬಾರಿ ಪಾವತಿಗೆ ಅರ್ಹರಾಗಿರುತ್ತಾರೆ. ಪಿಂಚಣಿಯು 60ನೇ ವಯಸ್ಸಿನಿಂದ ಪ್ರಾರಂಭವಾಗುತ್ತದೆ. ಆ ವಯಸ್ಸಿನಲ್ಲಿ ಒಟ್ಟು ಮೊತ್ತವನ್ನು ಪಡೆಯಬಹುದು.

ವರ್ಷಾಶನ ಶೇ. 40ರಷ್ಟು ಇರುವುದನ್ನು ಶೇ. 50ರಷ್ಟು ಏರಿಕೆ ಮಾಡಿದರೆ ಮಾಸಿಕ ಪಿಂಚಣಿಯಾಗಿ 4,39,973 ರೂ. ಆಗುತ್ತದೆ. ಆದರೆ ಒಂದು ಬಾರಿ ಪಾವತಿ 8,79,94,588 ರೂ.ಗೆ ಇಳಿಯಲಿದೆ.

ದಿನಕ್ಕೆ 200 ರೂ.

ದಿನಕ್ಕೆ 167 ರೂ. ಅನ್ನು 200 ರೂ.ಗೆ ಹೆಚ್ಚಿಸಿದರೆ ಎನ್‌ಪಿಎಸ್ 4,22,374 ರೂ. ಪಿಂಚಣಿ ನೀಡುತ್ತದೆ ಮತ್ತು 12.67 ಕೋಟಿ ರೂ. ಗಳ ಒಂದು ಬಾರಿ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರ ದರದಂತೆ ವರ್ಷಾಶನವನ್ನು ನಿರೀಕ್ಷಿಸಬಹುದು ಮತ್ತು ಉಳಿದ ಶೇ. 60 ಅನ್ನು ಒಂದು ಬಾರಿ ಪಾವತಿಯಾಗಿ ತೆಗೆದುಕೊಳ್ಳಬಹುದು.

ಇದನ್ನೂ ಓದಿ: UPI Payment: ಡಿಜಿಟಲ್ ಪಾವತಿಯಲ್ಲಿ ತಪ್ಪಾಗಿ ಬೇರೆಯವರಿಗೆ ಹಣ ವರ್ಗಾವಣೆಯಾದರೆ ಏನು ಮಾಡಬೇಕು?

National Pension Scheme


30 ವರ್ಷದಿಂದ ಪ್ರಾರಂಭಿಸಿದರೆ

ಒಬ್ಬನು 30 ವರ್ಷದಿಂದ ಪ್ರಾರಂಭಿಸಿ ಪೂರ್ಣ ಅವಧಿಗೆ ತಿಂಗಳಿಗೆ 5,000 ರೂ. ಹೂಡಿಕೆ ಮಾಡಿದರೆ ಎನ್‌ಪಿಎಸ್ 1,29,260 ರೂಪಾಯಿಗಳ ಪಿಂಚಣಿ ಮತ್ತು 3.87 ಕೋಟಿ ರೂಪಾಯಿಗಳ ಒಂದು ಬಾರಿಯ ಪಾವತಿಯನ್ನು ನೀಡುತ್ತದೆ. ಇದು ಕಾರ್ಪಸ್‌ನ ಶೇ. 40ರಷ್ಟು ವರ್ಷಾಶನ ಖರೀದಿ ಮಾಡಬಹುದು.

ಒಬ್ಬ ವ್ಯಕ್ತಿಯು ತಿಂಗಳಿಗೆ 6,000 ರೂ. ಹೂಡಿಕೆ ಮಾಡಿದರೆ 1,55,112 ರೂ. ಪಿಂಚಣಿಯಾಗಿ ಮತ್ತು 4.65 ಕೋಟಿ ರೂ. ಅನ್ನು ಒಂದು ಬಾರಿ ಪಾವತಿಯಾಗಿ ಪಡೆಯಬಹುದು. ಇದು ಕಾರ್ಪಸ್‌ನ ಶೇ. 40ರಷ್ಟನ್ನು ವರ್ಷಾಶನದ ಖರೀದಿ ಮಾಡಬಹುದು. ಹೂಡಿಕೆದಾರರು ಮಾಡಿದ ಮಾಸಿಕ ಕೊಡುಗೆಗಳಿಗೆ ಹೂಡಿಕೆಯ ಮೇಲಿನ ಲಾಭವು ಶೇ. 10ರಷ್ಟನ್ನು ಆಗಿರುತ್ತದೆ. ವರ್ಷಾಶನದ ಆದಾಯ ದರವು ಶೇ. 6 ಆಗಿದೆ.

Exit mobile version