ಪ್ರತಿಯೊಬ್ಬರಿಗೂ ದೊಡ್ಡ ಪ್ರಮಾಣದಲ್ಲಿ ಹಣವನ್ನು ಹೂಡಿಕೆ (investment) ಮಾಡುವುದು ಸಾಧ್ಯವಿಲ್ಲ. ವಿಶೇಷವಾಗಿ ಉದ್ಯೋಗಕ್ಕೆ ಇತ್ತೀಚೆಗಷ್ಟೇ ಸೇರಿದವರು, ಸಣ್ಣ ಹೂಡಿಕೆದಾರರು ಅಥವಾ ಆರಂಭಿಕರಿಗಾಗಿ (small investors or beginners) ಸಹಾಯ ಮಾಡಲು ಕೇಂದ್ರ ಸರ್ಕಾರವು (Indian Govt) ಉಳಿತಾಯ ಯೋಜನೆಯೊಂದನ್ನು (Recurring Deposit) ಪರಿಚಯಿಸಿದೆ.
ಇದು ಕೇಂದ್ರ ಸರ್ಕಾರದಿಂದ ನಿಯಂತ್ರಿಸಲ್ಪಟ್ಟಿರುವುದರಿಂದ ಹೂಡಿಕೆ ಮಾಡಲು ಸುರಕ್ಷಿತ ಆಯ್ಕೆಯಾಗಿದೆ. ಹಾಗಾದರೆ ಈ ಉಳಿತಾಯ ಯೋಜನೆ ಯಾವುದು, ಅದರ ವಿಶೇಷತೆಗಳು ಏನು ಎಂಬುದನ್ನು ನೋಡೋಣ.
ಪೋಸ್ಟ್ ಆಫೀಸ್‌ನಲ್ಲಿರುವ ಆರ್ ಡಿ ಸಣ್ಣ ಹೂಡಿಕೆದಾರರು ಅಥವಾ ಆರಂಭಿಕರು ತೆರೆಯಬಹುದಾದ ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆಯಾಗಿದೆ.
ಆರ್ ಡಿ ಯೋಜನೆ
ಈ ಉಳಿತಾಯ ಯೋಜನೆಯು ನಿರ್ದಿಷ್ಟವಾಗಿ ಸಣ್ಣ ಹೂಡಿಕೆದಾರರಿಗಾಗಿ ಮಾಡಲ್ಪಟ್ಟಿದೆ. ಇದರಿಂದ ಅವರು ತಮ್ಮ ಹಣಕಾಸಿನ ಅವಶ್ಯಕತೆಗಳಿಗೆ ಸಾಕಷ್ಟು ಹಣವನ್ನು ಸಂಗ್ರಹಿಸಬಹುದು. ಇದಲ್ಲದೆ, ಠೇವಣಿಯ ಮೇಲೆ ಯಾವುದೇ ಗರಿಷ್ಠ ಮಿತಿಯಿಲ್ಲ.
ಯೋಜನೆ ಅವಧಿ ಎಷ್ಟು?
ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಖಾತೆಯು 5 ವರ್ಷಗಳ ಮೆಚುರಿಟಿ ಅವಧಿಯ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಉಳಿತಾಯ ಯೋಜನೆಯೊಂದಿಗೆ ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಬಹುದು. ಇದಲ್ಲದೆ ಈ ಯೋಜನೆಯು ಒಬ್ಬ ವ್ಯಕ್ತಿಗೆ ಏಕ ಮತ್ತು ಜಂಟಿ ಖಾತೆಯನ್ನು ತೆರೆಯಲು ಅನುಮತಿಸುತ್ತದೆ.
ಹೂಡಿಕೆ ಹೇಗೆ?
ತಿಂಗಳಿಗೆ ಕನಿಷ್ಠ 100 ರೂ.ನಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಯಾವುದೇ ಗರಿಷ್ಠ ಮಿತಿ ಇಲ್ಲದಿರುವುದರಿಂದ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬಹುದು. ಆದರೆ ಕ್ಯಾಲೆಂಡರ್ ತಿಂಗಳ 15ರಂದು ಖಾತೆಯನ್ನು ತೆರೆದರೆ ತಿಂಗಳ 15ನೇ ದಿನದವರೆಗೆ ಠೇವಣಿ ಮಾಡಬೇಕು ಎಂಬುದನ್ನು ಗಮನಿಸಬೇಕು. ಕ್ಯಾಲೆಂಡರ್ ತಿಂಗಳ 16ನೇ ದಿನ ಮತ್ತು ಕೊನೆಯ ಕೆಲಸದ ದಿನದ ನಡುವೆ ಖಾತೆಯನ್ನು ತೆರೆದರೆ, ಅನಂತರದ ಠೇವಣಿ ತಿಂಗಳ ಕೊನೆಯ ಕೆಲಸದ ದಿನದವರೆಗೆ ಮಾಡಲಾಗುತ್ತದೆ.
ಖಾತೆಯ ಬಡ್ಡಿ ದರ
ಈ ಉಳಿತಾಯ ಯೋಜನೆಯು ವಾರ್ಷಿಕ ಶೇ. 6.7ರಷ್ಟು ಬಡ್ಡಿ ದರವನ್ನು ನೀಡುತ್ತದೆ. ಐದು ವರ್ಷಗಳವರೆಗೆ 10,000 ರೂ. ಮಾಸಿಕ ಹೂಡಿಕೆಯೊಂದಿಗೆ 7 ಲಕ್ಷ ರೂ.ಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದು.
ಇದನ್ನೂ ಓದಿ: Anil Ambani: ಅನಿಲ್ ಅಂಬಾನಿಗೆ ಸೆಬಿ ಶಾಕ್; 5 ವರ್ಷ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ ನಿಷೇಧ, 25 ಕೋಟಿ ರೂ. ದಂಡ
ಯಾರು ಅರ್ಜಿ ಸಲ್ಲಿಸಬಹುದು?
ಯಾವುದೇ ಒಬ್ಬ ವಯಸ್ಕ, ಅಪ್ರಾಪ್ತ ವಯಸ್ಕ, ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರು, 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ತಮ್ಮ ಹೆಸರಿನಲ್ಲಿ ಈ ಖಾತೆಯನ್ನು ತೆರೆಯಬಹುದು. ಇದರ ಹೊರತಾಗಿ ಈ ಯೋಜನೆಯು ಹೂಡಿಕೆದಾರರಿಗೆ ಜಂಟಿ ಖಾತೆಯನ್ನು ತೆರೆಯಲು ಅವಕಾಶವಿದೆ. ಇದಲ್ಲದೆ ಬಹು ಖಾತೆಗಳನ್ನು ತೆರೆಯಲು ಅವಕಾಶವಿದೆ.