ಮುಂಬಯಿ: ಭಾರತದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (state bank of India-SBI) ತನ್ನ ಲಾಕರ್‌ಗಳನ್ನು ಬಳಸುತ್ತಿರುವ ಬಳಕೆದಾರರಿಗೆ ಹೊಸ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಹಾಗಾದರೆ ಹೊಸ ಮಾರ್ಗದರ್ಶಿಯಲ್ಲಿ ಏನೇನಿದೆ? ಇಲ್ಲಿದೆ ವಿವರ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಕರ್ ಅಗ್ರಿಮೆಂಟ್ ಕುರಿತ ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಹಾಲಿ ಬಳಕೆದಾರರು ಲಾಕರ್ ಹೋಲ್ಡಿಂಗ್ ಬ್ರಾಂಚ್ ಅನ್ನು ಸಂಪರ್ಕಿಸಿ ಒಪ್ಪಂದವನ್ನು ಪರಿಷ್ಕರಿಸಿಕೊಳ್ಳಲು ಬ್ಯಾಂಕ್ ಮನವಿ ಮಾಡಿದೆ. ಕನಿಷ್ಠ 50% ಲಾಕರ್‌ಗಳು ಹೊಸ ಅಗ್ರಿಮೆಂಟ್ ವ್ಯಾಪ್ತಿಗೆ ಬರಬೇಕು ಎಂದು ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಿದೆ. ಸೆಪ್ಟೆಂಬರ್ 30ರ ವೇಳೆಗೆ 30%, ಡಿಸೆಂಬರ್ 30 ವೇಳೆಗೆ 100% ಆಗಬೇಕು ಎಂದು ಆರ್‌ಬಿಐ ತಿಳಿಸಿದೆ.
We request our esteemed customers to contact their locker holding branch and execute the revised/supplementary locker agreement as applicable.#SBI pic.twitter.com/e7Gk5b3Unu
— State Bank of India (@TheOfficialSBI) June 5, 2023
ಎಸ್‌ಬಿಐ ಲಾಕರ್ ಸೇವೆಯ ನೋಂದಣಿ ಶುಲ್ಕ ಪರಿಷ್ಕರಣೆಯಾಗಿದ್ದು, ಸಣ್ಣ ಮತ್ತು ಮಧ್ಯಮ ಸೈಜ್ ಲಾಕರ್‌ಗೆ 500 ರೂ, ದೊಡ್ಡ ಲಾಕರ್‌ಗೆ 1,000 ರೂ. ನೋಂದಣಿ ಶುಲ್ಕ ಅನ್ವಯಿಸಲಿದೆ. ಸ್ಥಳ ಮತ್ತು ಗಾತ್ರವನ್ನು ಆಧರಿಸಿ ಲಾಕರ್ ಬಾಡಿಗೆ ಶುಲ್ಕ ವ್ಯತ್ಯಾಸವಾಗುತ್ತದೆ. ವಿವರ ಇಲ್ಲಿದೆ.
ಇದನ್ನೂ ಓದಿ: PAN- Aadhaar deadline expired : ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು?
ಎಸ್‌ಬಿಐ ಗ್ರಾಹಕರು ನಗರ ಮತ್ತು ಮೆಟ್ರೊ ನಗರಗಳಲ್ಲಿ ಸಣ್ಣ ಲಾಕರ್‌ಗೆ 2000 ರೂ. ಮತ್ತು ಜಿಸ್‌ಟಿ ಸೇರಿಸಿ ಬಾಡಿಗೆ ನೀಡಬೇಕು. ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಲಾಕರ್ ಗೆ 1500 ರೂ. ಬಾಡಿಗೆ ಶುಲ್ಕ ಇದೆ. ನಗರ ಅಥವಾ ಮೆಟ್ರೊ ನಗರಗಳಲ್ಲಿ ಮಧ್ಯಮ ಗಾತ್ರದ ಲಾಕರ್‌ಗೆ 4,000 ರೂ, ಗ್ರಾಮೀಣ ಪ್ರದೇಶದಲ್ಲಿ 3,000 ರೂ. ಶುಲ್ಕವಾಗುತ್ತದೆ. ನಗರಗಳಲ್ಲಿ ದೊಡ್ಡ ಗಾತ್ರದ ಲಾಕರ್‌ಗಳಿಗೆ 8,000 ರೂ. ಅನ್ವಯಿಸುತ್ತದೆ. ಎಸ್‌ಬಿಐ ದೊಡ್ಡ ನಗರಗಳಲ್ಲಿ ಅತಿ ದೊಡ್ಡ ಲಾಕರ್‌ಗೆ 12,000 ರೂ. ಬಾಡಿಗೆ ನಿಗದಿಪಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಇದು 9,000 ರೂ.ಗಳಾಗಿದೆ.
ಎಸ್‌ಬಿಐ ತನ್ನ ಯುನೊ ಮೊನೈಲ್ ಅಪ್ಲಿಕೇಶನ್ ಅನ್ನೂ ಪರಿಷ್ಕರಿಸಿದೆ. (YONO) ಮುಖ್ಯವಾಗಿ ಯುಪಿಐ ಆಧರಿತ ಫೀಚರ್‌ಗಳನ್ನೂ ಅಳವಡಿಸಿದೆ. ಸ್ಕ್ಯಾನ್ ಮತ್ತು ಪೇ ಸಾಧ್ಯವಾಗಲಿದೆ.