Site icon Vistara News

ವಿಸ್ತಾರ Money Guide : 15 ವರ್ಷದ ಷೇರು ಇನ್ವೆಸ್ಟ್‌ಮೆಂಟ್‌ನಲ್ಲಿ ಲಾಭ ಗ್ಯಾರಂಟಿ: ಜೆರೋಧಾದ ನಿಖಿಲ್‌ ಕಾಮತ್

zerodha nilkhil kamat

ಬೆಂಗಳೂರು: ಷೇರು, ಮ್ಯೂಚುವಲ್‌ ಫಂಡ್‌ ಇತ್ಯಾದಿ ಈಕ್ವಿಟಿ ಸಾಧನಗಳಲ್ಲಿ ದೀರ್ಘಕಾಲೀನ ಹೂಡಿಕೆ ಅತ್ಯುತ್ತಮ ಎಂದು ಆನ್‌ಲೈನ್‌ ಷೇರು ಬ್ರೋಕರೇಜ್‌ ವಲಯದ ನಿಖಿಲ್‌ ಕಾಮತ್‌ ಫೇಸ್‌ಬುಕ್‌ ಪೋಸ್ಟ್‌ ಮೂಲಕ ಹೂಡಿಕೆದಾರರಿಗೆ ಸಲಹೆ ನೀಡಿದ್ದಾರೆ. (Nikhil Kamath) ಇದಕ್ಕಾಗಿ ಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್‌ ಅವರ ಸೂಕ್ತಿಯೊಂದನ್ನೂ ತಿಳಿಸಿದ್ದಾರೆ.

someonés sitting in the shade today because someone planted a tree a long time ago – ಯಾರಾದರೂ ನೆರಳಿನಲ್ಲಿ ಇವತ್ತು ಕುಳಿತಿದ್ದರೆ ಯಾರೋ, ಬಹು ಕಾಲದ ಹಿಂದೆ ಗಿಡ ನೆಟ್ಟಿದ್ದರ ಫಲ- ವಾರೆನ್‌ ಬಫೆಟ್‌ ಅವರ ಈ ಸೂಕ್ತಿಯನ್ನು ನಿಖಿಲ್‌ ಕಾಮತ್‌ ಅವರು ತಮ್ಮ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ನೀವು ಏಕೆ ದೀರ್ಘಕಾಲೀನವಾಗಿ ಹೂಡಿಕೆ ಮಾಡಬೇಕು? ಎಂಬ ಶೀರ್ಷಿಕೆಯ ಗ್ರಾಫಿಕ್ಸ್‌ನಲ್ಲಿ ನಿಫ್ಟಿ 50 ಟೋಟಲ್‌ ರಿಟರ್ನ್ಸ್‌ ಇಂಡೆಕ್ಸ್‌ನಲ್ಲಿ ಲಾಂಗ್‌ ಟರ್ಮ್‌ ಇನ್ವೆಸ್ಟ್‌ಮೆಂಟ್‌ನ ಪ್ರಯೋಜನ ಸಕಾರಾತ್ಮಕವಾಗಿರುವುದನ್ನು ಬಿಂಬಿಸಲಾಗಿದೆ.

ಈ ಇಂಡೆಕ್ಸ್‌ನಲ್ಲಿ ಒಂದು ತಿಂಗಳು ಮಾತ್ರ ಹೂಡಿಕೆಗೆ ನೆಗೆಟಿವ್‌ ರಿಟರ್ನ್‌ ಬರುವ ಅಪಾಯ 39% ಇತ್ತು. ಇದು ಒಂದು ವರ್ಷದ ಹೂಡಿಕೆಯಕಲ್ಲಿ 24%, 3 ವರ್ಷದ ಹೂಡಿಕೆಗೆ 7%ಕ್ಕೆ ಇಳಿದಿದೆ. 5 ಮತ್ತು 15 ವರ್ಷದ ದೀರ್ಘಾವಧಿ ಹೂಡಿಕೆಯಲ್ಲಿ ನೆಗೆಟಿವ್‌ ರಿಟರ್ನ್‌ ಅಥವಾ ನಷ್ಟ ಇರುವುದಿಲ್ಲ. 15 ವರ್ಷದ ಹೂಡಿಕೆಯಲ್ಲಿ ನೆಗೆಟಿವ್‌ ರಿಟರ್ನ್‌ ಬಂದಿರುವ ಉದಾಹರಣೆಯೇ ಇಲ್ಲ ಎನ್ನುತ್ತಾರೆ ನಿಖಿಲ್‌ ಕಾಮತ್.‌‌

ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಜೆರೋಧಾ (Zerodha) ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ಇತ್ತೀಚೆಗೆ ದಿ ಗಿವಿಂಗ್‌ ಪ್ಲೆಡ್ಜ್‌ (The Giving Pledge) ಸಂಘಟನೆಗೆ ಸೇರಿದ್ದಾರೆ. ಇದೊಂದು ಅಭಿಯಾನವಾಗಿದ್ದು, ತಮ್ಮ ಸಂಪತ್ತಿನ ಬಹುಪಾಲನ್ನು ಸಮಾಜ ಸೇವೆಗೆ ನೀಡುವ ವಾಗ್ದಾನ ನೀಡುವವರ ಪಡೆಯನ್ನೇ ಹೊಂದಿದೆ. ಬಿಲ್‌ ಗೇಟ್ಸ್‌, ವಾರೆನ್‌ ಬಫೆಟ್‌ 2010ರಲ್ಲಿ ಸ್ಥಾಪಿಸಿದ ಅಭಿಯಾನದಲ್ಲಿ ಹಲವಾರು ಗಣ್ಯರಿದ್ದಾರೆ. ಭಾರತದಿಂದ ಅಜೀಂ ಪ್ರೇಮ್‌ಜೀ, ಕಿರಣ್‌ ಮಜುಂದಾರ್‌ ಷಾ, ರೋಹಿಣಿ ಮತ್ತು ನಂದನ್‌ ನಿಲೇಕಣಿ ದಂಪತಿ ಇದ್ದಾರೆ. ನಾಲ್ಕನೆಯವರಾಗಿ ನಿಖಿಲ್‌ ಕಾಮತ್‌ ಸೇರಿದ್ದಾರೆ. ತಮ್ಮ ಸಂಪತ್ತಿನಲ್ಲಿ 50% ಅನ್ನು ದೇಣಿಗೆ ನೀಡಲಿದ್ದಾರೆ.

ನಿಖಿಲ್‌ ಕಾಮತ್‌ ಅವರು ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, ಗಿವಿಂಗ್‌ ಪ್ಲೆಡ್ಜ್‌ ಅಭಿಯಾನಕ್ಕೆ ಸೇರಿದ್ದಕ್ಕೆ ಸಾರ್ಥಕತೆಯ ಭಾವ ಉಂಟಾಗಿದೆ. ಯುವ ಉದ್ಯಮಿಯಾಗಿದ್ದರೂ, ಸಮಾಜದಲ್ಲಿ ಒಳಿತಿಗೋಸ್ಕರ ಏನಾದರೂ ಮಾಡುವ ಹಂಬಲ ಇದೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಗಿವಿಂಗ್‌ ಪ್ಲೆಡ್ಜ್‌ ಅಭಿಯಾನ ಸಹಕರಿಸುವ ವಿಶ್ವಾಸ ಇಎ ಎಂದು ಹೇಳಿದ್ದಾರೆ.

ಫೋರ್ಬ್ಸ್‌ ಪಟ್ಟಿಯ ಪ್ರಕಾರ ನಿತಿನ್‌ ಕಾಮತ್‌ ಅವರ ಸಂಪತ್ತು 2.7 ಶತಕೋಟಿ ಡಾಲರ್‌ (22,140 ಕೋಟಿ ರೂ.) ಹಾಗೂ ನಿಖಿಲ್‌ ಕಾಮತ್‌ ಅವರ ಸಂಪತ್ತು 1.1 ಶತಕೋಟಿ ಡಾಲರ್‌ (9,020 ಕೋಟಿ ರೂ.) 2010ರಲ್ಲಿ ನಿತಿನ್‌ ಕಾಮತ್‌ ಅವರು ತಮ್ಮ ಸೋದರ ನಿಖಿಲ್‌ ಕಾಮತ್‌ ಅವರೊಡನೆ ಜೆರೋಧಾ ಬ್ರೋಕರೇಜ್‌ ಅನ್ನು ಸ್ಥಾಪಿಸಿದ್ದರು. ಕಡಿಮೆ ವೆಚ್ಚದಲ್ಲಿ ಷೇರು ಬ್ರೋಕರೇಜ್‌ ಒದಗಿಸುವ ನಿಟ್ಟಿನಲ್ಲಿ ಜೆರೋಧಾ ಜನಪ್ರಿಯತೆ ಗಳಿಸಿದೆ.

ಇದನ್ನೂ ಓದಿ: Zerodha : ಅರ್ಧ ಆಸ್ತಿಯನ್ನೇ ದೇಣಿಗೆ ನೀಡಲು ಜೆರೋಧಾ ಸ್ಥಾಪಕ ನಿಖಿಲ್‌ ಕಾಮತ್‌ ವಾಗ್ದಾನ

Exit mobile version