Site icon Vistara News

Raja Marga Column : ಗೆದ್ದವರ ಕಥೆಗಿಂತಲೂ ಸೋತವರ ಕಥೆಗಳೇ ಹೆಚ್ಚು ಕುತೂಹಲಕಾರಿ!

Raja Marga Column : From faliure to success

1. ಅಮೆರಿಕಾದ ಅತ್ಯಂತ ಯಶಸ್ವೀ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ (Abraham Lincoln) ಆ ಸ್ಥಾನಕ್ಕೆ ಏರುವ ಮೊದಲು 7 ಚುನಾವಣೆಗಳಲ್ಲಿ ಸೋತಿದ್ದರು. ಮೂರು ಬೇರೆ ಬೇರೆ ಉದ್ಯಮಗಳನ್ನು ಮಾಡಿ ಕೈ ಸುಟ್ಟುಕೊಂಡಿದ್ದರು. ಒಂದು ಹಂತದಲ್ಲಿ ಅವರು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿದ್ದರು (Raja Marga Column).

2. ಬಿಲ್ ಗೇಟ್ಸ್ ಯಾರಿಗೆ ಗೊತ್ತಿಲ್ಲ ಹೇಳಿ? ಅವರು ಹಾರ್ವರ್ಡ್ ವಿವಿಯ ಡ್ರಾಪ್ ಔಟ್ ವಿದ್ಯಾರ್ಥಿ ಎನ್ನುವುದು ಬಹಳ ಮಂದಿಗೆ ಗೊತ್ತಿಲ್ಲ. ಅವರು ಆರಂಭದಲ್ಲಿ ಮಾಡಿದ್ದ ಸಾಫ್ಟ್‌ವೇರ್ ಕಂಪೆನಿಯು ಶೋಚನೀಯವಾಗಿ ಸೋತಿತ್ತು ಅನ್ನುವುದೂ ಅಷ್ಟೇ ನಿಜ!

Raja Marga Column Bhagat

3. ಜಗತ್ತಿನ ಮಹಾನ್ ವಿಜ್ಞಾನಿ ಐನ್‌ಸ್ಟೀನ್ ತನ್ನ ನಾಲ್ಕನೇ ವರ್ಷದ ವರೆಗೆ ಮಾತೇ ಆಡುತ್ತಿರಲಿಲ್ಲ! ಹೆತ್ತವರು ಆ ಮಗುವಿನ ಬಗ್ಗೆ ವಿಪರೀತ ಆತಂಕ ಪಟ್ಟುಕೊಂಡು ಹಲವು ಆಸ್ಪತ್ರೆಗಳಿಗೆ ಅಲೆದರು. ಆ ಮಗುವನ್ನು ಪರೀಕ್ಷೆ ಮಾಡಿದ ವೈದ್ಯರು ಅದು ಸರಾಸರಿಗಿಂತ ಕಡಿಮೆ ಬುದ್ಧಿಮತ್ತೆಯನ್ನು ಹೊಂದಿದೆ ಮತ್ತು ಕಲಿಕೆಯಲ್ಲಿ ಅತ್ಯಂತ ನಿಧಾನಗತಿ ಹೊಂದಿದೆ ಎಂದು ಪ್ರಮಾಣಪತ್ರ ನೀಡಿದ್ದರು!

Raja Marga Column Bhagat

4. ಇನ್ನೊಬ್ಬ ಜಗತ್ತಿನ ಮಹಾ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್ ಬಾಲ್ಯದಲ್ಲಿ ಅಧ್ಯಾಪಕರಿಂದ ‘ಯಾವುದನ್ನೂ ಕಲಿಯಲಾಗದ ಮೂರ್ಖ’ ಎಂದು ಬೈಸಿಕೊಂಡಿದ್ದನು. ಆತನ ಅಂಕಪಟ್ಟಿಯಲ್ಲಿ ಶಿಕ್ಷಕರು ‘GOOD FOR NOTHING’ ಎಂದು ಒಕ್ಕಣೆ ಬರೆದಿದ್ದರು!

Raja Marga Column Bhagat

5. ಕನ್ನಡದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹತ್ತನೇ ತರಗತಿಯಲ್ಲಿ ಫೇಲ್ ಆದರು. ಆ ಕಾರಣಕ್ಕೆ ಅವರು ಹಲವು ಸಣ್ಣ ಪುಟ್ಟ ಉದ್ಯೋಗವನ್ನು ಮಾಡಬೇಕಾಯಿತು. ಮುಂದೆ ಅದರಿಂದ ಪಾಠ ಕಲಿತ ಅವರು ಪತ್ರಿಕೋದ್ಯಮದ ಸ್ನಾತಕೋತ್ತರ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದು ಮುಂದೆ ಕರ್ನಾಟಕದ ನಂಬರ್ ಒನ್ ಪತ್ರಕರ್ತ ಆದರು.

6. ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ವಿಜ್ಞಾನಿ ಆಗುವ ಮೊದಲು ಪೈಲಟ್ ಪರೀಕ್ಷೆ ಬರೆದು ಫೇಲ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ಆತ್ಮಹತ್ಯೆ ಮಾಡುವ ಪ್ರಯತ್ನ ಕೂಡ ಮಾಡಿದ್ದರು. ಮುಂದೆ ಅವರ ಬದುಕಿನಲ್ಲಿ ಮಹಾನ್ ತಿರುವುಗಳು ಬಂದು ಮಹಾನ್ ವಿಜ್ಞಾನಿ ಆದರು. ರಾಷ್ಟ್ರಪತಿ ಕೂಡ ಆದರು. ಭಾರತವನ್ನು ಗೆಲ್ಲಿಸಿದರು.

Raja Marga Column Bhagat

7. ಖ್ಯಾತ ಮೋಟಾರ್ ಉದ್ಯಮಿ ಹೆನ್ರಿ ಫೋರ್ಡ್ ಆರಂಭದಲ್ಲಿ ಸ್ಥಾಪನೆ ಮಾಡಿದ್ದ ಮೂರು ವಾಹನ ಕಂಪನಿಗಳು ಪೂರ್ತಿಯಾಗಿ ನಷ್ಟ ಅನುಭವಿಸಿದ್ದವು. ಮುಂದೆ ಅವರು ಫೋರ್ಡ್ ಕಂಪನಿ ಸ್ಟಾರ್ಟ್ ಮಾಡಿ ಯಶಸ್ವೀ ಆಗುವಾಗ 53 ವರ್ಷ ದಾಟಿದ್ದರು!

Raja Marga Column Bhagat

8. ಜಗತ್ತಿನ ಮಹಾನ್ ಬಾಸ್ಕೆಟ್ ಬಾಲ್ ಆಟಗಾರ ಮೈಕೆಲ್ ಜೋರ್ಡಾನ್ ವಿದ್ಯಾರ್ಥಿ ಆಗಿದ್ದಾಗ ತನ್ನ ಕಾಲೇಜಿನ ಬಾಸ್ಕೆಟ್ ಬಾಲ್ ತಂಡದಿಂದ ಹೊರ ದೂಡಲ್ಪಟ್ಟಿದ್ದರು! ಅದಕ್ಕೆ ಅವರ ಕಾಲೇಜು ಕೊಟ್ಟ ಕಾರಣ – ಬಾಸ್ಕೆಟ್ ಬಾಲ್ ಕೌಶಲಗಳ ಕೊರತೆ!

9. ಜಗತ್ತಿನ ಅತ್ಯಂತ ಸ್ಫುರದ್ರೂಪಿ ನಟಿ ಎಂದು ಮುಂದೆ ಕರೆಸಿಕೊಂಡ ಮರ್ಲಿನ್‌ ಮನ್ರೋ ಖ್ಯಾತ ಸಿನಿಮಾ ನಿರ್ಮಾಣ ಕಂಪನಿಯಾದ 20th Century Foxನಿಂದ ಒಂದು ವರ್ಷದ ಕೆಲಸದ ನಂತರ ಹೊರ ತಳ್ಳಲ್ಪಟ್ಟರು! ಅದಕ್ಕೆ ಕಂಪೆನಿಯು ಕೊಟ್ಟ ಕಾರಣ – She is not pretty and talented.

Raja Marga Column Bhagat

10. KFC ಇಂದು ಜಾಗತಿಕ ಮಟ್ಟದ ಚಿಕನ್ ಮಾರಾಟ ಸಂಸ್ಥೆ. ಅದರ ಸ್ಥಾಪಕರಾದ ಕರ್ನಲ್ ಡೇವಿಡ್ ಸ್ಯಾಂಡರ್ಸ್ ಆರಂಭದ ಹಲವು ವರ್ಷ ಒಂದು ಪೀಸ್ ಚಿಕನ್ ಕೂಡ ಮಾರಾಟ ಮಾಡಲಾಗದೆ ಕಷ್ಟ ಪಟ್ಟಿದ್ದರು. 1000ಕ್ಕಿಂತ ಅಧಿಕ ರೆಸ್ಟಾರೆಂಟ್‌ಗಳು ಅವರ ಚಿಕನ್ ತೆಗೆದುಕೊಳ್ಳಲು ಆಗ ಒಪ್ಪಿರಲಿಲ್ಲ!

Raja Marga Column Bhagat

11. ಜಗತ್ತಿನ ಅತ್ಯಂತ ಜನಪ್ರಿಯ ಕಾದಂಬರಿ Harry Potter ಬರೆಯುವಾಗ ಅದರ ಲೇಖಕಿಯಾದ ಜೆ. ಕೆ. ರಾಲಿಂಗ್ ಅತ್ಯಂತ ಸಂಕಷ್ಟಮಯ ಬದುಕನ್ನು ಸಾಗಿಸುತ್ತಿದ್ದರು. ಆಕೆ ನಿರುದ್ಯೋಗಿ ಆಗಿದ್ದರು ಮತ್ತು ವಿವಾಹ ವಿಚ್ಛೇದನ ಪಡೆದಿದ್ದರು. ಎತ್ತರಕ್ಕೆ ಬೆಳೆಯುತ್ತಿದ್ದ ಮಗಳನ್ನು ಅವರು ಬಡತನದಲ್ಲಿ ಬೆಳೆಸುವ ದರ್ದು ಇತ್ತು. ಅದೇ ಹೊತ್ತಿಗೆ ಅವರು ಬರೆದ HARRY POTTER ಜಗತ್ತಿನ ಅತ್ಯಂತ ಹೆಚ್ಚು ಓದುಗರನ್ನು ಪಡೆದ ಪುಸ್ತಕ ಆಯಿತು!

12. ಆ ಯುವಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಅದೇ ಹೊತ್ತಿಗೆ ಆತ ಉತ್ಕಟವಾಗಿ ಪ್ರೀತಿ ಮಾಡಿದ ಹುಡುಗಿ ಕೈ ಕೊಟ್ಟು ಹೋಗಿದ್ದಳು. ಅಂತಹ ಯುವಕ ಮುಂದೆ ಜಗತ್ತು ಮೆಚ್ಚುವ ಸಿನಿಮಾಗಳನ್ನು ನೀಡಿದ. ಆತನ ಹೆಸರು ಆಮೀರ್ ಖಾನ್!

Raja Marga Column Bhagat

13. ಖ್ಯಾತ ಗಾಯಕರಾದ ಯೇಸುದಾಸ್ ತನ್ನ ಆರಂಭಿಕ ದಿನಗಳಲ್ಲಿ ಆಕಾಶವಾಣಿ ಸಂಗೀತ ಸ್ಪರ್ಧೆಯಲ್ಲಿ ವಿಫಲ ಆಗಿದ್ದರು. ಅವರಿಗೆ ಯಾವ ಬಹುಮಾನವೂ ಸಿಕ್ಕಿರಲಿಲ್ಲ!

Raja Marga Column Bhagat

14. ಇಂದು ಭಾರತದ ಅತ್ಯಂತ ಜನಪ್ರಿಯ ಲೇಖಕ ಚೇತನ್ ಭಗತ್ ಬರೆದ ಮೊದಲ ಪುಸ್ತಕ ‘ FIVE POINT SOME ONE ‘ ಹಲವು ವರ್ಷಗಳ ಕಾಲ ಒಂದು ಪುಸ್ತಕವೂ ಮಾರಾಟ ಕಂಡಿರಲಿಲ್ಲ. ಮುಂದೆ ಅದೇ ಕಥೆ ಹಿಂದಿ ಸಿನೆಮಾ ‘3 ಈಡಿಯಟ್ಸ್’ ಆಗಿ ಜನಪ್ರಿಯತೆಯ ಶಿಖರವನ್ನು ತಲುಪಿತು! ಪುಸ್ತಕವೂ ಗೆದ್ದಿತು.

Raja Marga Column Bhagat

ಇದನ್ನೂ ಓದಿ : Raja Marga Column : ಗಾತಾ ರಹೇ ಮೇರಾ ದಿಲ್; ಲತಾ ಮಂಗೇಶ್ಕರ್ ಮಧುರ ಧ್ವನಿ ಎಂದೆಂದೂ ಅಮರ

ಇಂತಹ ಸಾವಿರಾರು ಕಥೆಗಳು ನನ್ನ ವ್ಯಕ್ತಿತ್ವ ವಿಕಸನದ ತರಬೇತಿಗಳಲ್ಲಿ ಸ್ಥಾನ ಪಡೆಯುತ್ತವೆ ಮತ್ತು ಸೋತವರನ್ನು ಗೆಲ್ಲಿಸುತ್ತವೆ.

Exit mobile version