-ನೀವು ಯಾರಿಗಾದರೂ ಧನ್ಯವಾದ ಹೇಳಲು (Say thanks) ಬಾಕಿ ಇದ್ದರೆ ಇವತ್ತೇ ಹೇಳಿಬಿಡಿ. ಯಾರಿಗೆ ಗೊತ್ತು ನಾಳೆ ಅವರು ಮಾಡಿದ ಒಳ್ಳೆಯ ಕೆಲಸವು ಅವರಿಗೇ ಮರೆತು ಹೋಗಿರಬಹುದು! (ರಾಜ ಮಾರ್ಗ ಅಂಕಣ)
–ನೀವು ಯಾರ ಮನಸ್ಸನ್ನಾದರೂ ನೋಯಿಸಿದ್ದರೆ ಇಂದೇ ಕ್ಷಮೆ ಕೇಳಿಬಿಡಿ (Ask Excuse). ಏಕೆಂದರೆ ಅವರು ನಿಮ್ಮ ಹಾಗೆ ಕಣ್ಣೀರು ಸುರಿಸುತ್ತಾ ದೂರದಲ್ಲಿ ಕುಳಿತಿರಬಹುದು!
-ನೀವು ಯಾರಿಗಾದರೂ ಬೆನ್ನು ತಟ್ಟಲು (Pat someone) ಬಾಕಿ ಇದ್ದರೆ ಈಗಲೇ ತಟ್ಟಿ ಬಿಡಿ. ಯಾಕೆಂದರೆ ಮುಂದೆ ಒಂದು ದಿನ ಅವರಿಗೆ ನಿಮ್ಮ ಮೆಚ್ಚುಗೆ ಬೇಡವಾಗಿ ಹೋಗಬಹುದು!
–ನೀವು ಯಾರಿಗಾದರೂ ಆಲ್ ದ ಬೆಸ್ಟ್ (All the Best) ಹೇಳಲು ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದರೆ ಅವರು ಗೆದ್ದ ಮೇಲೆ ಅವರಿಗೆ ಸಾವಿರ ಜನ ಶಾಭಾಷ್ ಹೇಳಲು ಕಾಯುತ್ತಿರಬಹುದು!
-ನೀವು ಯಾರಿಗಾದರೂ ನಿಮ್ಮ ಪ್ರೀತಿಪಾತ್ರರಿಗೆ ಗುಟ್ಟುಗಳನ್ನು ಶೇರ್ ಮಾಡಲು (Sharing Secrets) ಬಾಕಿ ಇದ್ದರೆ ಈಗಲೇ ಹೇಳಿಬಿಡಿ. ಯಾಕೆಂದ್ರೆ ಮುಂದೆ ಅದು ಬೇರೆಯವರ ಮೂಲಕ ಗೊತ್ತಾದರೆ ಅವರಿಗೆ ನೋವಾಗಬಹುದು!
–ನಿಮ್ಮ ತಲೆಯಲ್ಲಿ ಏನಾದರೂ ಹೊಸ ಐಡಿಯಾ (New Idea) ಫ್ಲಾಶ್ ಆದರೆ ಅದನ್ನು ಬರೆದಿಡಿ ಮತ್ತು ತಕ್ಷಣ ಅನುಷ್ಠಾನಿಸಿ. ಏಕೆಂದರೆ ನಿಮ್ಮ ಐಡಿಯಾಗಳಿಗೆ ಕಾಪಿ ರೈಟ್ ಇರುವುದಿಲ್ಲ!
-ನಿಮಗೆ ಯಾರಿಗಾದರೂ ಸಾರಿ ಹೇಳಲು (Say sorry) ಬಾಕಿ ಇದ್ದರೆ ಇಂದೇ ಹೇಳಿಬಿಡಿ, ಯಾಕೆಂದರೆ ಆ ನಾಳೆಯು ಬಾರದೆ ಹೋಗಬಹುದು. ಬಂದರೂ ಅವರು ನಿಮಗೆ ಸಿಗದೇ ಹೋಗಬಹುದು!
-ನಿಮಗೆ ಯಾರ ಬಗ್ಗೆಯಾದರೂ ಪ್ರಾರ್ಥನೆ (Praying for some one) ಮಾಡಲು ಬಾಕಿ ಇದ್ದರೆ ಈಗಲೇ ಮಾಡಿಬಿಡಿ. ಏಕೆಂದರೆ ನಾಳೆ ನಿಮ್ಮ ಪ್ರಾರ್ಥನೆಯನ್ನು ಸ್ವೀಕಾರ ಮಾಡಲು ದೇವರಿಗೆ ಸಮಯ ದೊರೆಯದೆ ಹೋಗಬಹುದು!
ನೀವು ಯಾರಿಗಾದರೂ ಏನನ್ನಾದರೂ ಕೊಡಲು ಯೋಚನೆ (to gift someone) ಮಾಡಿದರೆ ಈಗಲೇ ಕೊಟ್ಟುಬಿಡಿ. ಯಾಕೆಂದ್ರೆ ಭೂಮಿ ಗುಂಡಗೆ ಇದ್ದರೂ ಅವರು ನಿಮಗೆ ಮುಂದೆ ಸಿಗದೇ ಹೋಗಬಹುದು!
–ನೀವು ಯಾರಿಗಾದರೂ ಕಣ್ಣೀರು ಒರೆಸಲು ಬಾಕಿ (wiping the tears) ಇದ್ದರೆ ಇಂದೇ ಒರೆಸಿಬಿಡಿ. ಏಕೆಂದರೆ ಮುಂದೆ ಅವರ ಕಣ್ಣೀರು ಒರೆಸಲು ಬಹಳ ಕೈಗಳು ದೊರೆಯಬಹುದು!
-ನಿಮಗೆ ಯಾವುದೇ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಏಕೆಂದರೆ ಆ ವಸ್ತುವಿನ ಮೇಲೆ ನಿಮಗೆ ನಾಳೆ ಇನ್ನಷ್ಟು ಮೋಹವು ಹೆಚ್ಚಾಗಬಹುದು!
–ಯಾರದಾದರೂ ಅಳುವ ಕಣ್ಣೀರಿಗೆ ನಿಮ್ಮ ಹೆಗಲು (become sholuder for someones tears) ಕೊಡಲು ಆಸೆ ಇದ್ದರೆ ಈಗಲೇ ಕೊಟ್ಟುಬಿಡಿ. ಯಾಕೆಂದರೆ ಮುಂದೆ ನಿಮ್ಮ ಕಣ್ಣೀರಿಗೆ ಯಾವುದೇ ಹೆಗಲು ದೊರೆಯದೆ ಹೋಗಬಹುದು!
-ನೀವು ಯಾರಿಗಾದರೂ ಬೆಸ್ಟ್ ಫ್ರೆಂಡಿಗೆ (Best friend) ಸಾಲ ಕೊಡುವ ಪ್ರಸಂಗ ಬಂದರೆ ಸಾಲ ಎಂದು ಕೊಡಬೇಡಿ. ಹಾಗೆ ಕೊಟ್ಟುಬಿಡಿ. ಯಾಕೆಂದರೆ ಆ ದುಡ್ಡು ಹೇಗೂ ಹಿಂದೆ ಬರುವುದಿಲ್ಲ!
-ನೀವು ಯಾರದೇ ತಪ್ಪನ್ನು ನೇರವಾಗಿ ಹೇಳುವ ಮೊದಲು ನೂರು ಬಾರಿ ಯೋಚನೆ ಮಾಡಿ. ಏಕೆಂದರೆ ಅದರಲ್ಲಿ ನಿಮ್ಮ ತಪ್ಪಿನ ಪಾಲು ಕೂಡ ಇರಬಹುದು!
-ನೀವು ಒಂದು ಬಾರಿ ಸಾರಿ ಹೇಳುವುದರಿಂದ ಹತ್ತಾರು ಮಂದಿಗೆ ನಿರಾಳ ಆಗುವುದಾದರೆ ನಿಮ್ಮ ತಪ್ಪು ಇಲ್ಲದಿದ್ದರೂ ಸಾರಿ ಕೇಳಿ.
–ನೀವು ಯಾವುದೇ ಹುಡುಗಿಗೆ ಪ್ರಪೋಸ್ (proposing a girl) ಮಾಡುವ ಅವಕಾಶ ದೊರೆತಾಗ ತಕ್ಷಣ ಪ್ರಪೋಸ್ ಮಾಡಿಬಿಡಿ. ಏಕೆಂದರೆ ಅದೇ ಹುಡುಗಿಯು ಮುಂದೆ ಬೇರೆ ಯಾರನ್ನಾದರೂ ಮದುವೆಯಾಗಿ ನಿಮ್ಮ ನೆರೆಮನೆಗೆ ಬಾಡಿಗೆಗೆ ಬಂದು ‘ನೀನು ಯಾಕೋ ಪ್ರೊಪೋಸ್ ಮಾಡಿಲ್ಲ, ನಾನು ಕಾಯ್ತಾ ಇದ್ದೆ ಕಣೋ’ ಎಂದು ಹೇಳಬಹುದು!
-ನಿಮಗೆ ಕ್ಲಾಸನಲ್ಲಿ ಪಾಠ ಕೇಳುವಾಗ ಡೌಟ್ ಬಂದರೆ ತಕ್ಷಣ ಎದ್ದುನಿಂತು ಡೌಟ್ ಕ್ಲಿಯರ್ (clear the doubts) ಮಾಡಿ. ಅದರಿಂದ ನೀವು ದಡ್ಡ ಎಂದು ಪ್ರೊಜೆಕ್ಟ್ ಆಗುವುದಿಲ್ಲ. ಏಕೆಂದರೆ ಆ ಡೌಟ್ ತರಗತಿಯಲ್ಲಿ ಎಲ್ಲರಿಗೂ ಬಂದಿರುತ್ತದೆ!
–ಬೇರೆಯವರ ತಪ್ಪುಗಳ ಬಗ್ಗೆ ನಿಮಗೆ ಆಡಿ ನಗಬೇಕು ಅಂತ ಅನ್ನಿಸಿದರೆ ನಿಮ್ಮನ್ನು ನಿಯಂತ್ರಣ ಮಾಡಿಕೊಳ್ಳಿ. (Contol your emotions) ಏಕೆಂದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ತಪ್ಪುಗಳನ್ನು ಬೇರೆ ಯಾರಾದರೂ ಆಡಿ ನಗುತ್ತಿರಬಹುದು.
-ಯಾರದಾದರೂ ಬದುಕಿನಲ್ಲಿ ಒಂದು ಪ್ರೇರಣೆ ಕೊಡುವ (Motivating someone) ಅವಕಾಶ ನಿಮಗೆ ದೊರೆತರೆ ಒಂದು ಕ್ಷಣ ವಿಳಂಬ ಮಾಡಬೇಡಿ. ಯಾಕೆಂದರೆ ಮುಂದೆ ಅವರ ಆತ್ಮಚರಿತ್ರೆಯ ಪುಸ್ತಕದ ಮೊದಲ ಪುಟದಲ್ಲಿ ನಿಮ್ಮ ಹೆಸರು ಉಲ್ಲೇಖ ಪಡೆಯಬಹುದು!
————————-
ಯಾರ ಬಗ್ಗೆ ಆದರೂ ಪ್ರಾರ್ಥಿಸುವ ಅವಕಾಶ ನಿಮಗೆ ದೊರೆತರೆ ಎರಡನೇ ಯೋಚನೆ ಮಾಡದೆ ಅದನ್ನು ಮಾಡಿ ಮುಗಿಸಿ. ಏಕೆಂದರೆ ಜಗತ್ತಿನಲ್ಲಿ ನಾವು ಬೇರೆಯವರಿಗೆ ಸಲ್ಲಿಸುವ ಪ್ರಾರ್ಥನೆಗಳು ಬಡ್ಡಿ ಸಮೇತ ನಮಗೇ ಹಿಂದೆ ಬರುತ್ತವೆ! ಏಕೆಂದರೆ ಜಗತ್ತಿನಲ್ಲಿ ಸದಾಶಯ ಮತ್ತು ಭರವಸೆಗಳು ಸದಾ ಜೀವಂತವಾಗಿ ಇರುವ ಮೌಲ್ಯಗಳು ಎಂದು ನನಗೆ ಅರಿವಾಗಿದೆ.
ಬೂಮರಾಂಗ್ ಎಂಬ ಆಟದ (Boomerang) ವಸ್ತು ಇದೆ. ಅದನ್ನು ನೀವು ಎಷ್ಟು ವೇಗವಾಗಿ ಮೇಲೆ ಬಿಸಾಡುತ್ತೇವೆಯೋ ಅದು ಅಷ್ಟೇ ವೇಗವಾಗಿ ಹಿಂದೆ ಬಂದು ನಮ್ಮ ಮುಖಕ್ಕೆ ಅಪ್ಪಳಿಸುತ್ತದೆ!
ನಾವು ಮಾಡಿದ ಒಳ್ಳೆಯ ಸಂಗತಿ ಮತ್ತು ಕೆಟ್ಟ ಸಂಗತಿ ಎರಡೂ ನಮಗೆ ಅಷ್ಟೇ ವೇಗವಾಗಿ ಹಿಂದೆ ಬರುತ್ತದೆ!
ಅದು ಬೂಮರಾಂಗ್ ಥಿಯರಿ!
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಡೀ ಭಾರತಕ್ಕೆ ರಾಮ ಮಂದಿರದ ಕನಸು ಹಂಚಿದ ಅಶೋಕ್ ಸಿಂಘಾಲ್