Site icon Vistara News

BJP Meeting | ಬಿಜೆಪಿ ಕಾರ್ಯಕಾರಿಣಿ; 2024ರ ಲೋಕಸಭೆ, 9 ವಿಧಾನಸಭೆ ಚುನಾವಣೆಗೆ ಪಕ್ಷ ರಣತಂತ್ರ, ರವಿಶಂಕರ್‌ ಪ್ರಸಾದ್ ಮಾಹಿತಿ

BJP National Executive Meeting

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪ್ರಸಕ್ತ ವರ್ಷದಲ್ಲಿ ನಡೆಯುವ 9 ವಿಧಾನಸಭೆ ಚುನಾವಣೆಗಳಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ (BJP Meeting) ಕಮಲ ಪಾಳಯವು ರಣತಂತ್ರ ರೂಪಿಸಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚುನಾವಣೆಗಳಿಗೆ ಸಂಪೂರ್ಣ ಸಿದ್ಧತೆ ಕೈಗೊಳ್ಳುವ ಚರ್ಚೆ ನಡೆದಿದೆ.

ಕಾರ್ಯಕಾರಿಣಿ ಕುರಿತು ಸುದ್ದಿಗೋಷ್ಠಿ ನಡೆಸಿದ ಪಕ್ಷದ ನಾಯಕ ನಾಯಕ ರವಿಶಂಕರ್‌ ಪ್ರಸಾದ್‌, “ಲೋಕಸಭೆ ಚುನಾವಣೆ ದೃಷ್ಟಿಯಿಂದ 2023ನೇ ಇಸವಿಯು ನಮಗೆ ಪ್ರಮುಖವಾಗಿದೆ. ಲೋಕಸಭೆ ಚುನಾವಣೆ ಹಾಗೂ 9 ರಾಜ್ಯಗಳ ವಿಧಾನಸಭೆ ಚುನಾವಣೆಗಳ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ. ಒಂದೇ ಒಂದು ಚುನಾವಣೆಯಲ್ಲಿ ಸೋಲು ಕಾಣಬಾರದು. ಈ ದಿಸೆಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ” ಎಂದರು.

1.3 ಲಕ್ಷ ಬೂತ್‌ ಗುರುತು
ಪಕ್ಷವನ್ನು ಸ್ಥಳೀಯ ಮಟ್ಟದಿಂದಲೇ ಬಲಿಷ್ಠಗೊಳಿಸುವ ದಿಸೆಯಲ್ಲಿ ಚರ್ಚಿಸಲಾಗಿದೆ. “ದೇಶಾದ್ಯಂತ 1.3 ಲಕ್ಷ ಬೂತ್‌ಗಳಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿದೆ. ಹಾಗಾಗಿ, ಗುರುತಿಸಿದ ಇಷ್ಟೂ ಬೂತ್‌ಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಗಿದೆ” ಎಂದು ಮಾಹಿತಿ ನೀಡಿದರು.

ಚುನಾವಣೆಗಳ ಅವಲೋಕನ
“ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆ ಚುನಾವಣೆಗಳ ಕುರಿತು ಸಹ ಕಾರ್ಯಕಾರಿಣಿಯಲ್ಲಿ ಅವಲೋಕನ ಮಾಡಿಕೊಳ್ಳಲಾಯಿತು. ಗುಜರಾತ್‌ನಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಹಾಗೂ ಹಿಮಾಚಲ ಪ್ರದೇಶದಲ್ಲಿ ಉಂಟಾದ ಹಿನ್ನಡೆ, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು” ಎಂದರು.

ಇದನ್ನೂ ಓದಿ | BJP Meeting | ಕಾರ್ಯಕಾರಿಣಿಯಲ್ಲಿ ಭಾಗವಹಿಸುವವರಿಗೆ ಮೋದಿ ಇಷ್ಟದ ತಿನಿಸು, ಮೈಸೂರು ಪಾಕ್‌, ಜೋಳದ ರೊಟ್ಟಿ ಭೋಜನ

Exit mobile version