Site icon Vistara News

Shocking News : ನೀವು ಖರೀದಿಸಿದ ಬಾಟಲಿ ನೀರು ಶುದ್ಧವೇ? ಇಲ್ಲ ವಿಷಕಾರಿ ಪ್ಲಾಸ್ಟಿಕ್​ ಉಂಟು!

drinking water

ಬೆಂಗಳೂರು: ಬಾಟಲಿಗಳಲ್ಲಿ ದೊರೆಯುವ ಕುಡಿಯುವ ನೀರಿನಲ್ಲಿ (Drinking Water) ಶುದ್ಧತೆ ಇಲ್ಲದಿರುವುದು ಆತಂಕಕಾರಿ ವಿಷಯ. ನೀರು ಚೆನ್ನಾಗಿಲ್ಲದ ಕಾರಣ ಆರೋಗ್ಯ ಹದಗೆಡುತ್ತಿದೆ ಎಂಬ ವಾದ ಬಲಗೊಳ್ಳುತ್ತಿರುವ ನಡುವೆ ನಾವು ದುಡ್ಡು ಕೊಟ್ಟು ಕುಡಿಯುವ ನೀರಿನ ಬಗ್ಗೆ ನಡೆದ ಸಂಶೋಧನೆಯೊಂದು ಆಘಾತಕಾರಿ ಮಾಹಿತಿಯೊಂದನ್ನು (Shocking News) ಬಹಿರಂಗ ಮಾಡಿದೆ. ನಾವು ಸೇವಿಸುವ ಒಂದು ಲೀಟರ್ ನೀರಿನಲ್ಲಿ ಸರಾಸರಿ 2,40,000 ನ್ಯಾನೊ ಪ್ಲಾಸ್ಟಿಕ್ ಕಣಗಳಿರುತ್ತವೆ ಎಂದು ಅಧ್ಯಯನ ತಿಳಿಸಿದೆ. ಆ ತುಣುಕುಗಳಲ್ಲಿ ಅನೇಕವು ಪತ್ತೆಯಾಗಿಲ್ಲ ಎಂಬುದಾಗಿಯೂ ಸಂಶೋಧಕರು ಹೇಳಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದಿಂದಾಗಿ ನಮ್ಮ ನೀರು ಕಲುಷಿತಗೊಳ್ಳುತ್ತಿದೆ ಎಂಬುದು ಸಂಶೋಧಕರ ಅಭಿಪ್ರಾಯ.

ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಜರ್ನಲ್​ನಲ್ಲಿ ಸೋಮವಾರ ಪ್ರಕಟವಾದ ಪೀರ್-ರಿವ್ಯೂಡ್ ಅಧ್ಯಯನವು ನೀರಿನಲ್ಲಿರುವ “ನ್ಯಾನೊಪ್ಲಾಸ್ಟಿಕ್ಸ್” (ಪ್ಲಾಸ್ಟಿಕ್​ ಕಣಗಳು) ಬಗ್ಗೆ ಮೌಲ್ಯಮಾಪನ ಮಾಡಿದೆ. 1 ಮೈಕ್ರೋಮೀಟರ್ ಉದ್ದಕ್ಕಿಂತ ಕಡಿಮೆ ಅಥವಾ ಮಾನವ ಕೂದಲಿನ ಎಪ್ಪತ್ತನೇ ಒಂದು ಭಾಗದಷ್ಟು ಅಗಲದ ಪ್ಲಾಸ್ಟಿಕ್ ಕಣಗಳು ಬಾಟಲಿ ನೀರಿನಲ್ಲಿ ಸೇರಿಕೊಂಡಿವೆ ಎಂದು ಸಂಶೋಧನೆ ಹೇಳಿದೆ. ಬಾಟಲಿ ನೀರು ಈ ಹಿಂದೆ ಅಂದಾಜಿಸಿದ್ದಕ್ಕಿಂತ 100 ಪಟ್ಟು ಹೆಚ್ಚು ಪ್ಲಾಸ್ಟಿಕ್ ಕಣಗಳನ್ನು ಹೊಂದಿದೆ ಎಂದು ಸಂಶೋಧನೆ ಎತ್ತಿ ತೋರಿಸಿದೆ. ಹಿಂದಿನ ಅಧ್ಯಯನಗಳು 1ರಿಂದ 5,000 ಮೈಕ್ರೋಮೀಟರ್​​ಗಳನ್ನು ಮಾತ್ರ ಪತ್ತೆ ಮಾಡಿದ್ದವು.

ದೊಡ್ಡ ಅಪಾಯ

ನ್ಯಾನೊಪ್ಲಾಸ್ಟಿಕ್ ಗಳು ಮೈಕ್ರೋಪ್ಲಾಸ್ಟಿಕ್ ಗಳಿಗಿಂತ ಮಾನವನ ಆರೋಗ್ಯಕ್ಕೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತವೆ ಏಕೆಂದರೆ ಅವು ಮಾನವ ಜೀವಕೋಶಗಳನ್ನು ಭೇದಿಸಲು, ರಕ್ತಪ್ರವಾಹವನ್ನು ಪ್ರವೇಶಿಸಲು ಮತ್ತು ಅಂಗಗಳ ಮೇಲೆ ಪರಿಣಾಮ ಬೀರುವಷ್ಟು ಚಿಕ್ಕದಾಗಿರುತ್ತವೆ. ನ್ಯಾನೊಪ್ಲಾಸ್ಟಿಕ್ ಗಳು ಹುಟ್ಟಲಿರುವ ಶಿಶುಗಳ ದೇಹಕ್ಕೂ ಆಘಾತ ಉಂಟು ಮಾಡುತ್ತಿವೆ. ಬಾಟಲಿ ನೀರಿನಲ್ಲಿ ಅವುಗಳ ಇರುವಿಕೆಯನ್ನು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಶಂಕಿಸಿದ್ದರು. ಇದೀಗ ಸತ್ಯಾಂಶ ಹೊರಕ್ಕೆ ಬಂದಿದೆ.

ಅಧ್ಯಯನಕ್ಕೆ ಹೊಸ ತಂತ್ರ

ನೀರಿನಲ್ಲಿರುವ ನ್ಯಾನೊಪ್ಲಾಸ್ಟಿಕ್​ಗಳ ಅಧ್ಯಯನಕ್ಕಾಗಿ ಹೊಸ ಮೈಕ್ರೋಸ್ಕೋಪಿ ತಂತ್ರವನ್ನು ಕಂಡು ಹಿಡಿಯಲಾಗಿದೆ. ಡೇಟಾ-ಚಾಲಿತ ಕ್ರಮಾವಳಿಯನ್ನು ಪ್ರೋಗ್ರಾಮ್ ಸಿದ್ದಪಡಿಸಲಾಗಿದೆ. ಅಂತೆಯೇ ಅಮೆರಿಕದ ಮೂರು ಜನಪ್ರಿಯ ಬ್ರಾಂಡ್​ಗಳಿಂದ ಖರೀದಿಸಿದ ಸುಮಾರು 1 ಲೀಟರ್​ನ 25 ಬಾಟಲಿಗಳನ್ನು ವಿಶ್ಲೇಷಿಸಲಾಗಿದೆ. ಈ ವೇಳೆ ಪ್ರತಿ ಲೀಟರ್ಗೆ 110,000 ರಿಂದ 370,000 ಸಣ್ಣ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿದ್ದವು. ಅವರುಗಳಲ್ಲಿ 90% ನ್ಯಾನೊಪ್ಲಾಸ್ಟಿಕ್​ಗಳಾಗಿವೆ.

ಅಧ್ಯಯನವು ತಳಮಟ್ಟದಲ್ಲಿ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಪ್ರಸ್ತುತ ಅರಿವಿನ ಕೊರತೆಯನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಪದವೀಧರ ವಿದ್ಯಾರ್ಥಿ ನೈಕ್ಸಿನ್ ಕಿಯಾನ್ ಹೇಳಿದ್ದಾರೆ.

ಸಂಶೋಧಕರು ಏಳು ಮಾದರಿಯ ಸಾಮಾನ್ಯ ಪ್ಲಾಸ್ಟಿಕ್ ಪ್ರಕಾರಗಳಿಗಾಗಿ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಅನೇಕ ನೀರಿನ ಬಾಟಲಿಗಳ್ಲಿ ಪಾಲಿಥಿಲೀನ್ ಟೆರೆಫ್ಥಾಲೇಟ್ (ಪಿಇಟಿ) ಮತ್ತು ನೀರನ್ನು ಶುದ್ಧೀಕರಿಸಲು ಫಿಲ್ಟರ್​ಗಳಲ್ಲಿ ಬಳಸುವ ಪಾಲಿಅಮೈಡ್ ಪ್ರಮುಖವಾಗಿ ಸೇರಿಕೊಂಡಿವೆ. ಜತೆಗೆ ನೀರಿನಲ್ಲಿ ಅನೇಕ ಗುರುತಿಸಲಾಗದ ನ್ಯಾನೊಪರ್ಟಿಕಲ್ ಗಳನ್ನು ಸಹ ಕಂಡುಹಿಡಿದ್ದಾರೆ.

ಪ್ಲಾಸ್ಟಿಕ್ ತ್ಯಾಜ್ಯ ಹೆಚ್ಚಳ

ಪ್ರತಿವರ್ಷ 450 ಮಿಲಿಯನ್ ಟನ್ ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಗಳು ಜಾಗತಿಕವಾಗಿ ಸೃಷ್ಟಿಯಾಗುತ್ತವೆ. ಅದರಲ್ಲಿ ಹೆಚ್ಚಿನವು ಅಂತಿಮವಾಗಿ ಭೂಮಿ ಸೇರುತ್ತದೆ. ಬಹುಪಾಲು ಪ್ಲಾಸ್ಟಿಕ್ ನೈಸರ್ಗಿಕವಾಗಿ ಕರಗುವುದಿಲ್ಲ. ಕಾಲಾನಂತರದಲ್ಲಿ ಸಣ್ಣ ತುಂಡುಗಳಾಗಿ ಒಡೆಯುತ್ತದೆ ಸಂಶ್ಲೇಷಿತ ಬಟ್ಟೆಗಳು ಸೇರಿದಂತೆ, ಪ್ಲಾಸ್ಟಿಕ್ ಹೊಂದಿರುವ ಉತ್ಪನ್ನಗಳು ಈ ರೀತಿ ಕಣಗಳಾಗುತ್ತವೆ.

ಇದನ್ನೂ ಓದಿ : Contaminated Water: ಕಲುಷಿತ ನೀರು ಸೇವನೆಗೆ ಕಾರಿಗನೂರು ಗ್ರಾಮದಲ್ಲಿ ಮೊದಲ ಬಲಿ

ಪ್ಲಾಸ್ಟಿಕ್ ಮಾಲಿನ್ಯವು ಭೂಮಿಯ ಮೇಲೆ ಎಲ್ಲೆಡೆ ಅಸ್ತಿತ್ವದಲ್ಲಿದ್ದರೂ ಬಾಟಲಿ ನೀರು ವಿಜ್ಞಾನಿಗಳಿಗೆ ವಿಶೇಷ ಕೌತುಕ ಸೃಷ್ಟಿಸಿತ್ತು. ಮಾನವ ದೇಹಕ್ಕೆ ಪ್ಲಾಸ್ಟಿಕ್ ಕಣಗಳನ್ನು ಪರಿಚಯಿಸುವ ಸಾಮರ್ಥ್ಯವಿದೆ. 2022 ರಲ್ಲಿ ಪ್ರಕಟವಾದ ಅಧ್ಯಯನವು ಬಾಟಲಿ ನೀರಿನಲ್ಲಿ ಮೈಕ್ರೋಪ್ಲಾಸ್ಟಿಕ್​ಗಳ ಸಾಂದ್ರತೆ ನೀರಿಗಿಂತ ಹೆಚ್ಚಾಗಿದೆ ಎಂದು ಹೇಳಿತ್ತು. 2021 ರ ವರದಿಯು ಪ್ಲಾಸ್ಟಿಕ್ ಬಾಟಲಿಯ ಕ್ಯಾಪ್ ಅನ್ನು ತೆರೆಯುವುದು ಮತ್ತು ಮುಚ್ಚುವುದರಿಂದ ಸಣ್ಣ ಪ್ಲಾಸ್ಟಿಕ್ ತುಂಡುಗಳನ್ನು ನೀರಿಗೆ ಸೇರುತ್ತದೆ ಎಂದು ಹೇಳಿತ್ತು.

ಲಂಬಿಯಾ ವಿಶ್ವವಿದ್ಯಾಲಯದ ಮತ್ತೊಬ್ಬ ಸಹ-ಲೇಖಕ ಮತ್ತು ಜೈವಿಕ ಭೌತಶಾಸ್ತ್ರಜ್ಞ ವೀ ಮಿನ್, “ನ್ಯಾನೊಪ್ಲಾಸ್ಟಿಕ್​ಗಳ ಜಗತ್ತನ್ನು ಅಧ್ಯಯನ ಮಾಡಬೇಕಾಗಿದೆ” ಎಂದು ಹೇಳಿದ್ದಾರೆ.. ಸಣ್ಣ ಕಣಗಳು ದೇಹದೊಳಗೆ ಸುಲಭವಾಗಿ ಪ್ರವೇಶಿಸಬಹುದು ಎಂದು ಹೇಳಿದ್ದರು.

Exit mobile version