ಮಾಲ್ಡೀವ್ಸ್ನಲ್ಲಿ ಭೀಕರ ಬೆಂಕಿ ದುರಂತಕ್ಕೆ 10 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 9 ಮಂದಿ ಭಾರತೀಯರೇ ಇದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ನಡೆದಿದ್ದು ಮಾಲ್ಡೀವ್ಸ್ ರಾಜಧಾನಿ ಮಾಲೇಯಲ್ಲಿರುವ ಒಂದು ವಸತಿ ಕಟ್ಟಡದಲ್ಲಿ. ಇಕ್ಕಟ್ಟಾದ ಪ್ರದೇಶದಲ್ಲಿ ಈ ಕಟ್ಟಡವಿದ್ದು, ಅದರಲ್ಲಿರುವ ಮನೆಗಳಲ್ಲಿ ಹೆಚ್ಚಾಗಿ ವಿದೇಶಿ ಉದ್ಯೋಗಿಳೇ ಇದ್ದರು. ಕಟ್ಟಡದ ಮೇಲಂತಸ್ತು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಅಲ್ಲಿಂದ 10 ಮೃತದೇಹಗಳನ್ನು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಹೊರತೆಗೆದಿದ್ದಾರೆ. ಅದರಲ್ಲಿ 9 ಮಂದಿ ಭಾರತೀಯರು ಮತ್ತು ಇನ್ನೊಬ್ಬ ಬಾಂಗ್ಲಾದೇಶವನು ಎಂಬುದು ಸ್ಪಷ್ಟವಾಗಿದೆ.
ಅಲ್ಲಿಯೇ ಇದ್ದ ಕಟ್ಟಡವೊಂದರ ಗ್ರೌಂಡ್ಫ್ಲೋರ್ನಲ್ಲಿ ವಾಹನ ದುರಸ್ತಿ ಗ್ಯಾರೇಜ್ ಇದ್ದು, ಅಲ್ಲಿಯೇ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬಹುದೊಡ್ಡ ಮಟ್ಟದಲ್ಲಿ, ತೀವ್ರವಾಗಿ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲೂ ತುಂಬ ಸಮಯ ತೆಗೆದುಕೊಂಡಿದ್ದಾರೆ. ಸುಮಾರು 4 ತಾಸುಗಳ ಬಳಿಕ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಬೆಂಕಿ ಅವಘಡದ ಬಗ್ಗೆ ತನಿಖೆ ನಡೆಯುತ್ತಿದೆ. ಅಂದಹಾಗೇ, ಮಾಲೇಯಲ್ಲಿ ಸುಮಾರು 2,50, 000 ಜನರು ವಿದೇಶಿ ಉದ್ಯೋಗಿಗಳೇ ಇದ್ದು, ಅದರಲ್ಲೂ ಅರ್ಧದಷ್ಟು ಮಂದಿ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದವರೇ ಆಗಿದ್ದಾರೆ.
ಇದನ್ನೂ ಓದಿ: Ev Scooter: ಬೆಂಕಿ ಅವಘಡಗಳಿಗೆ ಬ್ಯಾಟರಿ ಬಿಸಿಯಾಗುವುದೇ ಕಾರಣ