ನವ ದೆಹಲಿ: ಕೇಂದ್ರ ಔದ್ಯಮಿಕ ಭದ್ರತಾ ದಳ (CISF) ದ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ.10 ಮೀಸಲಾತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಒಂದು ವಾರದ ಹಿಂದೆ ಇದೇ ಬಗೆಯ ತೀರ್ಮಾನವನ್ನು ಸರ್ಕಾರ ಗಡಿ ಭದ್ರತಾ ದಳ (BSF) ಉದ್ಯೋಗಗಳ ಕುರಿತಂತೆಯೂ ತೆಗೆದುಕೊಂಡಿತ್ತು. ಇದಲ್ಲದೆ, ಅವರು ಆರಂಭಿಕ ಬ್ಯಾಚ್‌ನ ಅಗ್ನಿವೀರರೋ ಅಥವಾ ನಂತರದ ಬ್ಯಾಚ್‌ಗಳವರೋ ಎಂಬ ಆಧಾರದ ಮೇಲೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನೂ ಸಚಿವಾಲಯ ಪ್ರಕಟಿಸಿದೆ. 1968ರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಕಾಯಿದೆಯ ಅಡಿಯಲ್ಲಿ ಮಾಡಲಾದ ನಿಯಮಗಳನ್ನು ತಿದ್ದುಪಡಿ ಮಾಡಿ ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆಯ ಪ್ರಕಾರ, ಮಾಜಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷ ಹೆಚ್ಚಿಸಲಾಗಿದೆ. ಇತರ ಬ್ಯಾಚ್‌ಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ಮಿತಿ ಹೆಚ್ಚಿಸಲಾಗಿದೆ. ಮಾಜಿ ಅಗ್ನಿವೀರ್‌ಗಳಿಗೂ ದೈಹಿಕ ದಕ್ಷತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಅದು ಹೇಳಿದೆ.
ಕಳೆದ ವರ್ಷ ಜೂನ್ 14ರಂದು, 17 ಮತ್ತು 21 ವರ್ಷದೊಳಗಿನ ಯುವಕರ ನೇಮಕಾತಿಗಾಗಿ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯನ್ನು ಕೇಂದ್ರವು ಅನಾವರಣಗೊಳಿಸಿತು. ಭೂಸೈನ್ಯ, ನೌಕಾಪಡೆ ಮತ್ತು ವಾಯುಪಡೆಗಳಿಗೆ ನಾಲ್ಕು ವರ್ಷಗಳ ಅಲ್ಪಾವಧಿಯ ಸೇವೆಯ ಒಪ್ಪಂದದ ಆಧಾರದ ಮೇಲೆ ನೇಮಕಗೊಂಡವರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ನಾಲ್ಕು ವರ್ಷಗಳ ಅವಧಿ ಪೂರ್ಣಗೊಂಡ ನಂತರ, ಪ್ರತಿ ಬ್ಯಾಚ್‌ನಿಂದ 25 ಪ್ರತಿಶತದಷ್ಟು ಮಂದಿಗೆ ಕಾಯಂ ಸೇವೆಯನ್ನು ನೀಡಲಾಗುತ್ತದೆ.
ಗೃಹ ಸಚಿವಾಲಯ ಕೇಂದ್ರೀಯ ಅರೆಸೇನಾ ಪಡೆಗಳು ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಶೇಕಡಾ 10ರಷ್ಟು ಖಾಲಿ ಹುದ್ದೆಗಳನ್ನು ಶೇಕಡಾ 75ರಷ್ಟು ಅಗ್ನಿವೀರ್‌ಗಳಿಗೆ ಮೀಸಲಿಡಲಾಗುವುದು ಎಂದು ಘೋಷಿಸಿದೆ. ಮೊದಲ ಬ್ಯಾಚ್‌ನ ಮಾಜಿ ಅಗ್ನಿವೀರ್‌ಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಮತ್ತು ನಂತರದ ಬ್ಯಾಚ್‌ಗಳಿಗೆ ಮೂರು ವರ್ಷಗಳವರೆಗೆ ಹೆಚ್ಚಿಸಲಾಗಿದೆ. ಮಾಜಿ ಅಗ್ನಿವೀರ್‌ಗಳಿಗೆ ದೈಹಿಕ ಪ್ರಾವೀಣ್ಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಅರೆಸೇನಾಪಡೆಯ ನೇಮಕಾತಿಗೆ ನಿಗದಿತ ವಯಸ್ಸಿನ ಮಿತಿ 18-23 ವರ್ಷಗಳು. ಅಗ್ನಿಪಥ್ ಯೋಜನೆಯಡಿ 21 ವರ್ಷಗಳ ಗರಿಷ್ಠ ವಯೋಮಿತಿಯಲ್ಲಿಯೂ ಸಶಸ್ತ್ರ ಪಡೆಗಳಿಗೆ ಸೇರಿದವರನ್ನು 30 ವರ್ಷದವರೆಗೆ CISFಗೆ ನೇಮಕ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Agniveer Recruitment: ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನಿದು?