Site icon Vistara News

Twin Towers Demolition | ಅವಳಿ ಕಟ್ಟಡ ನೆಲಸಮಕ್ಕೆ 100 ಕೋಟಿ ರೂ.ಗಳ ವಿಮೆ!

tower

ನೋಯ್ಡಾ: ನೋಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸುವ (Twin Towers Demolition) ನಿಟ್ಟಿನಲ್ಲಿ‌ ೧೦೦ ಕೋಟಿ ರೂ.ಗಳ ವಿಮೆಯನ್ನು ಮಾಡಲಾಗಿತ್ತು! ಒಂದು ವೇಳೆ ಕಾರ್ಯಾಚರಣೆಯ ವೇಳೆ ಇತರ ಆಸ್ತಿಗಳಿಗೆ ಹಾನಿಯಾದರೆ ವಿಮೆ ಪರಿಹಾರ ಸಿಗಲಿದೆ.

ನೋಯ್ಡಾದ ಸೆಕ್ಟರ್‌ ೯೩ ಎ ಪ್ರದೇಶದಲ್ಲಿರುವ ಸೂಪರ್‌ಟೆಕ್‌ನ ಅವಳಿ ಗಗನಚುಂಬಿ ಕಟ್ಟಡಗಳನ್ನು ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಇಂದು ಧರೆಗುರುಳಿಸಲಾಗಿದೆ. ನೂರು ಮೀಟರ್‌ಗೂ ಹೆಚ್ಚು ಎತ್ತರದ ಈ ಅವಳಿ ಕಟ್ಟಡವನ್ನು ನೆಲಸಮ ಮಾಡಲು ೨೦ ಕೋಟಿ ರೂ. ಖರ್ಚಾಗಿದೆ. ಸೂಪರ್‌ ಟೆಕ್‌ ೫ ಕೋಟಿ ರೂ. ಕೊಡಬೇಕಾಗುತ್ತದೆ. ಉಳಿದ ೧೫ ಕೋಟಿ ರೂ.ಗಳನ್ನು ತ್ಯಾಜ್ಯಗಳ ಮಾರಾಟದ ಮೂಲಮ ಸಂಗ್ರಹಿಸಲಾಗುತ್ತದೆ. ತ್ಯಾಜ್ಯಗಳು ೮೦,೦೦೦ ಟನ್‌ಗೂ ಹೆಚ್ಚು ಸಿಗಲಿದೆ.

ನೆಲ ಸಮಗೊಳಿಸಿದ್ದು ಯಾರು? ಎಡಿಫಿಸ್‌ ಎಂಜಿನಿಯರಿಂಗ್‌ ಕಂಪನಿಯು ನೋಯ್ಡಾದ ಸೂಪರ್‌ಟೆಕ್‌ ಕಟ್ಟಡದ ನೆಲಸಮ ಕಾರ್ಯಾಚರಣೆಯನ್ನು ಕೈಗೊಂಡಿದೆ. ” ನಾವು ೧೦೦ ಕೋಟಿ ರೂ.ಗಳ ಪ್ರಾಥಮಿಕ ವಿಮೆಯನ್ನು ಪಡೆದಿದ್ದೇವೆ. ಗ್ಯಾಸ್‌ ಪೈಪ್‌ಲೈನ್‌ಗೆ ೨.೫ ಕೋಟಿ ರೂ. ವಿಮೆ ಪಡೆದಿದ್ದೇವೆʼʼ ಎಂದು ಎಡಿಫಿಸ್‌ ಎಂಜಿನಿಯರಿಂಗ್‌ನ ಪಾಲುದಾರರಾದ ಉತ್ಕರ್ಷ್‌ ಮೆಹ್ತಾ ತಿಳಿಸಿದ್ದಾರೆ. ಹಾನಿಯಾದರೂ ವಿಮೆ ಪರಿಹಾರ ಸಿಗಲಿದೆʼʼ ಎಂದು ತಿಳಿಸಿದ್ದಾರೆ.

Exit mobile version