Site icon Vistara News

Twin Tower Demolition | 100 ಮೀಟರ್‌ ಅವಳಿ ಕಟ್ಟಡ ನೆಲಸಮ ಕಾರ್ಯಾಚರಣೆ ಇಂದು ಮಧ್ಯಾಹ್ನ 2.30ಕ್ಕೆ

twin tower

ನೋಯ್ಡಾ: ನೋಯ್ಡಾದ ಸೆಕ್ಟರ್‌ ೯೩ ಎ ಪ್ರದೇಶದಲ್ಲಿರುವ ಸೂಪರ್‌ಟೆಕ್‌ನ ಅವಳಿ ಗಗನಚುಂಬಿ ಕಟ್ಟಡಗಳನ್ನು (Twin Tower Demolition) ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ಇಂದು ಧರೆಗುರುಳಿಸಲು ಎಲ್ಲ ಸಿದ್ಧತೆ ನಡೆದಿದೆ. ೧೦೦ ಮೀಟರ್‌ ಎತ್ತರದ ಈ ಅವಳಿ ಕಟ್ಟಡಗಳಲ್ಲಿ ೮೫೦ ಅಪೂರ್ಣ ಫ್ಲ್ಯಾಟ್‌ಗಳು ಇವೆ. ಮಧ್ಯಾಹ್ನ ೨.೩೦ಕ್ಕೆ ಕಾರ್ಯಾಚರಣೆ ನಡೆಯಲಿದೆ.

ಅವಳಿ ಗೋಪುರಗಳ ಪೈಕಿ ಅಪೆಕ್ಸ್‌ ಹೆಸರಿನ ಕಟ್ಟಡ ೩೨ ಅಂತಸ್ತುಗಳನ್ನು ಹೊಂದಿದೆ. ಸಿಯೇನ್‌ ಕಟ್ಟಡವು ೨೯ ಮಹಡಿಗಳನ್ನು ಹೊಂದಿದೆ. ಐತಿಹಾಸಿಕ ಕುತುಬ್‌ ಮಿನಾರ್‌ಗಿಂತಲೂ ಇವು ಹೆಚ್ಚು ಎತ್ತರವನ್ನು ಹೊಂದಿವೆ. ಭಾರಿ ಸ್ಫೋಟಕಗಳ ಸಿಡಿತದಿಂದ ಕೇವಲ 15 ಸೆಕೆಂಡ್‌ಗಳಲ್ಲಿ ಈ ಕಟ್ಟಡಗಳು ನೆಲಸಮವಾಗಲಿವೆ. ಈ ಕಟ್ಟಡವನ್ನು ಕೆಡವಲು ೨೦ ಕೋಟಿ ರೂ. ಖರ್ಚಾಗುತ್ತಿದೆ.

ಎರಡೂ ಕಟ್ಟಡಗಳನ್ನು ಭಾರತದ ೧೦ ಹಾಗೂ ವಿದೇಶದ ೭ ಬ್ಲಾಸ್ಟರ್‌ಗಳ ಯೋಜನೆ ಅನ್ವಯ ನೆಲಸಮ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ೨.೧೫ರಿಂದ ೨.೪೫ರ ತನಕ ನೋಯ್ಡಾ-ಗ್ರೇಟರ್‌ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರವನ್ನು ಬಂದ್‌ ಮಾಡಲಾಗುತ್ತದೆ.

ಸುಮಾರು ೭೦ ಕೋಟಿ ರೂ. ವೆಚ್ಚದಲ್ಲಿ ೨೦೦೫ರಲ್ಲಿ ನಿರ್ಮಾಣವಾದ ಈ ಕಟ್ಟಡವನ್ನು ನೋಯ್ಡಾದ ಸೆಕ್ಟರ್‌ ೯೩ ಎಯಲ್ಲಿ ಈ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್‌ ಆದೇಶಿಸಿತ್ತು.

ಇದನ್ನೂ ಓದಿ:Twin Towers | ಅವಳಿ ಕಟ್ಟಡಗಳ ನೆಲಸಮದ ತ್ಯಾಜ್ಯವೇ ಕುತುಬ್‌ ಮಿನಾರ್‌ಗಿಂತ ಎತ್ತರ ಇರಲಿದೆ!

ಕಟ್ಟಡ ನೆಲಸಮವಾದ ಬಳಿಕ ಉಂಟಾಗುವ ಭಾರಿ ತ್ಯಾಜ್ಯವನ್ನು ಬಳಿಕ ತೆರವುಗೊಳಿಸಲಾಗುವುದು. ನೆಲಸಮ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪ್ರಾಜೆಕ್ಟ್‌ ಮ್ಯಾನೇಜರ್, ಸ್ಥಳೀಯ ನಿವಾಸಿಗಳಿಗೆ ಸುರಕ್ಷತೆಯ ಭರವಸೆ ನೀಡಿದ್ದಾರೆ. ಯಾವುದೇ ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ. ಕಟ್ಟಡ ಸ್ಫೋಟದ ಪ್ರದೇಶವನ್ನು ನಾಲ್ಕು ಸುತ್ತುಗಳ ಕಬ್ಬಿಣದ ಮೆಶ್‌ಗಳಿಂದ ಬಂದೋಬಸ್ತ್‌ ಮಾಡಲಾಗಿದ್ದು, ಇತರ ಕಡೆಗಳಿಗೆ ಯಾವುದೇ ತೊಂದರೆಯಾಗದು ಎಂದಿದ್ದಾರೆ. ಆದರೆ ಈ ಕಟ್ಟಡದ ತ್ಯಾಜ್ಯಗಳನ್ನು ಹೊರ ತೆಗೆದು ಸಾಗಿಸಲು ೩ ತಿಂಗಳು ಬೇಕಾಗಬಹುದು.

ಇದನ್ನೂ ಓದಿ:Twin Tower Demolition | ಅವಳಿ ಕಟ್ಟಡ ನೆಲಸಮಕ್ಕೆ ಕ್ಷಣಗಣನೆ; ಸ್ಥಳ ಪರಿಶೀಲನೆ ಮಾಡಿದ ಸಿಎಂ ಯೋಗಿ

ಗೋಪುರದ ಜತೆ ಸೆಲ್ಫಿ, ವಿಡಿಯೊ: ಸೂಪರ್‌ಟೆಕ್‌ ಅವಳಿ ಗೋಪುರ ಭಾನುವಾರ ನೆಲಸಮವಾಗುವ ಹಿನ್ನೆಲೆಯಲ್ಲಿ ಸ್ಥಳೀಯರು ಶನಿವಾರ ತಡ ರಾತ್ರಿಯ ತನಕ ಕಟ್ಟಡದ ಜತೆ ಸೆಲ್ಫಿ, ವಿಡಿಯೊಗಳನ್ನು ತೆಗೆದುಕೊಂಡರು. ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಎನ್‌ಜಿಒಗಳ ಕಾರ್ಯಕರ್ತರು ಕಟ್ಟಡದ ಸುತ್ತುಮುತ್ತಲಿನ ನಾಯಿಗಳನ್ನು ಸ್ಥಳದಿಂದ ತೆರವುಗೊಳಿಸುತ್ತಿದ್ದಾರೆ.

೫೬೦ ಪೊಲೀಸ್‌ ಸಿಬ್ಬಂದಿ ಭದ್ರತೆಗೆ: ಕಟ್ಟಡದ ಸುತ್ತಮುತ್ತ ೭ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ೫೬೦ ಪೊಲೀಸ್‌ ಸಿಬ್ಬಂದಿ, ಮೀಸಲು ಪಡೆಯಿಂದ ೧೦೦ ಸಿಬ್ಬಂದಿಯನ್ನು ಮತ್ತು ಎನ್‌ಡಿಆರ್‌ಎಫ್‌ ತಂಡವನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹೊಗೆ-ಧೂಳು ನಿರೋಧಕ ಗನ್‌ಗಳನ್ನು ಸ್ಥಳದಲ್ಲಿ ಅಳವಡಿಸಲಾಗಿದೆ.

ಇದನ್ನೂ ಓದಿ :Twin Tower Demolition | 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಅವಳಿ ಕಟ್ಟಡ ಕೆಡವಲು ಆಗುವ ಖರ್ಚೆಷ್ಟು?

Exit mobile version