ಬೆಂಗಳೂರು: ಮೊದಲಾಗಿ ಈ ಘಟನೆ ನಡೆದಿದ್ದು ಭಾರತದಲ್ಲಿ ಅಲ್ಲ. ನಮ್ಮಲ್ಲಾಗಿದ್ದರೆ ಪೋಷಕರ ಮೇಲೆ ಕೇಸು ಜಡಿದು ಜೈಲುಗಟ್ಟುತ್ತಿದ್ದರು. ಹೀಗಾಗಿ ಇದು ನಡೆದಿರುವುದು ಲೆಕ್ಕಕ್ಕೆ ಮಾತ್ರ ಕಾನೂನು ಇರುವ ಪಾಕಿಸ್ತಾನದಲ್ಲಿ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಈ ವೈರಲ್ (virat) ಪ್ರಸಂಗದಲ್ಲಿ 13 ವರ್ಷದ ಬಾಲಕ 12 ವರ್ಷದ ಬಾಲಕಿಯೊಂದಿಗೆ ಮದುವೆ ಮಾಡಿಸಲು ಮುಂದಾಗಲಾಗಿದೆ. ಇಷ್ಟಕ್ಕೆಲ್ಲ ಕಾರಣ ಏನು ಗೊತ್ತೇ? ಮದುವೆ ಮಾಡಿಸಿದ್ರೆ ಮಾತ್ರ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮುಂದುವರಿಸುವೆ ಎಂದು ಬಾಲಕ ಹಠ ಹಿಡಿದಿದ್ದು!
ಪಾಕಿಸ್ತಾನದ ಕೆಲವು ಬುದ್ಧಿವಂತರು ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆ ದೇಶದಲ್ಲಿ ಮದುವೆಯ ಕನಿಷ್ಠ ವಯಸ್ಸಿನ ಮೇಲೆ ಕಾನೂನು ನಿರ್ಬಂಧಗಳ ಹೊರತಾಗಿಯೂ ಈ ಪ್ರಕರಣವು ಆ ದೇಶದಲ್ಲಿ ನಡೆಯುತ್ತಿರುವ ಬಾಲ್ಯ ವಿವಾಹಗಳ ನಿರಂತರ ಸಮಸ್ಯೆಯನ್ನು ಎತ್ತಿ ತೋರಿಸಿದೆ.
ಪಾಕಿಸ್ತಾನದಲ್ಲಿ, ಪುರುಷರಿಗೆ ಕಾನೂನುಬದ್ಧ ವಿವಾಹ ವಯಸ್ಸು 18. ಮಹಿಳೆಯರಿಗೆ 16 . ಸಿಂಧ್ ಪ್ರಾಂತ್ಯವು 2013 ರಲ್ಲಿ ಎರಡೂ ಲಿಂಗಗಳಿಗೆ ವಿವಾಹದ ಕನಿಷ್ಠ ವಯಸ್ಸನ್ನು 18 ಕ್ಕೆ ಹೆಚ್ಚಿಸಲು ಶಾಸನವನ್ನು ಅಂಗೀಕರಿಸಿದೆ. ಆದರೆ ಈ ಬದಲಾವಣೆಯನ್ನು ರಾಷ್ಟ್ರವ್ಯಾಪಿ ಜಾರಿಗೆ ತರಲಾಗಿಲ್ಲ.
ಬಾಲಕನ ನಿಶ್ಚಿತಾರ್ಥದ ವಿಡಿಯೊ ಬೆಳಕಿಗೆ ಬಂದ ಬಳಿಕ ವಿದ್ಯಾವಂತರ ಗುಂಪೊಂದು ಟೀಕೆ ವ್ಯಕ್ತಪಡಿಸಿದೆ. ತಾನು ನೋಡಿದ ಹುಡುಗಿಯನ್ನು ಮದುವೆಯಾಗಲು ಅವಕಾಶ ನೀಡಿದರೆ ಮಾತ್ರ ತನ್ನ ಅಧ್ಯಯನವನ್ನು ಮುಂದುವರಿಸುವುದಾಗಿ ಹುಡುಗ ಹೇಳಿರುವುದಕ್ಕೆ ಮದುವೆ ಮಾಡಲು ಮುಂದಾಗಿರುವ ಪೋಷಕರ ಬಗ್ಗೆ ಬೇಸರ ವ್ಯಕ್ತವಾಗಿದೆ.
ಇದನ್ನೂ ಓದಿ : Couple Death: ಮದುವೆಯಾಗಿ ಮೂರೇ ತಿಂಗಳು; ಹೃದಯಾಘಾತವಾಗಿ ಸತ್ತ ಪತಿಯ ಹಿಂದೆಯೇ ತೆರಳಿದ ಪತ್ನಿ
ಭರ್ಜರಿ ಸಮಾರಂಭ
ದಂಪತಿಗಳ ಸಾಂಪ್ರದಾಯಿಕ ನಿಶ್ಚಿತಾರ್ಥ ಕಾರ್ಯಕ್ರಮವಾದ “ಬಾತ್ ಪಕ್ಕಿ” ಈಗಾಗಲೇ ನಡೆದಿದ್ದು. ಮಕ್ಕಳ ತಾಯಂದಿರು ಸಮ್ಮತಿಯೊಂದಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಸ್ವತಃ 16 ನೇ ವಯಸ್ಸಿನಲ್ಲಿ ವಿವಾಹವಾದ ಬಾಲಕಿಯ ತಾಯಿ, ತನ್ನ ಸ್ವಂತ ಅನುಭವವನ್ನು ಹೇಳಿಕೊಂಡು ತನ್ನ ಮಗಳ ಬಾಲ್ಯ ವಿವಾಹವನ್ನು ಒಪ್ಪಿಕೊಂಡಿದ್ದಾರೆ. ಅಂತೆಯೇ, ಹುಡುಗನ ತಾಯಿ, 25 ನೇ ವಯಸ್ಸಿನಲ್ಲಿ ಮದುವೆಯಾದರೂ, ಇಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಮಗನ ಬಯಕೆಯನ್ನು ಬೆಂಬಲಿಸಿದ್ದಾರೆ.
ವಿಮೆ ದುಡ್ಡಿನ ಆಸೆಗೆ ತನ್ನ ಕಾಲನ್ನೇ ಕತ್ತರಿಸಿಕೊಂಡ
ಮಿಸ್ಸೌರಿ: ಅಮೆರಿಕದ ವ್ಯಕ್ತಿಯೊಬ್ಬರು ವಿಮೆಯ ದುಡ್ಡಿಗಾಗಿ ತನ್ನ ಕಾಲನ್ನೇ ಕತ್ತರಿಸಿಕೊಂಡ ಪ್ರಸಂಗ (Shocking News) ಬೆಳಕಿಗೆ ಬಂದಿದೆ. ಆತನ ಮೋಸ ಬಯಲಿಗೆ ಬಂದ ಬಳಿಕ ದುಡ್ಡೂ ಸಿಗಲಿಲ್ಲ, ಕೈಕಾಲು ಕೂಡ ಇಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. ವಿಲ್ಲೋ ಸ್ಪ್ರಿಂಗ್ಸ್ ಎಂಬ 60 ವರ್ಷದ ವ್ಯಕ್ತಿ ಮೋಸ ಮಾಡಲು ಹೋಗಿ ಅಂಗಾಂಗಗಳನ್ನೇ ಕಳೆದುಕೊಂಡಿದ್ದಾನೆ. ಆತ ತನ್ನ ಕಾಲುಗಳನ್ನು ಬೇರೆಯವರಿಂದ ಕತ್ತರಿಸಿಕೊಂಡು ಬಕೆಟ್ ಒಂದರಲ್ಲಿ ಅಡಗಿಸಿಟ್ಟಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಟ್ರ್ಯಾಕ್ಟರ್ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದೇನೆ ಎಂದು ವಿಲ್ಲೊ ಸ್ಟ್ರಿಂಗ್ಸ್ ಹೇಳಿದ್ದ. ಹಂದಿ ಅಡ್ಡ ಬಂದ ಕಾರಣ ಅವಘಡ ಸಂಭವಿಸಿದೆ ಎಂದು ಆತ ವಿಮಾ ಕಂಪನಿಯನ್ನು ನಂಬಿಸಲು ಹೋಗಿದ್ದ. ಅಲ್ಲಿನ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಆತ ಹೇಳುವ ಕತೆಗೂ, ಸಾಕ್ಷಿಗಳಿಗೂ ಹೊಂದಾಣಿಕೆ ಆಗಿರಲಿಲ್ಲ. ಬಳಿಕ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿದಾಗ ಮೋಸ ಮಾಡಿದ್ದು ಗೊತ್ತಾಗಿದೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ತನಿಖಾಧಿಕಾರಿ “ಹಂದಿ ಅಡ್ಡ ಬಂದು ಅವಘಡ ಆಗಿದ್ದರೆ ರಕ್ತ ಸಿಕ್ತ ಅವಘಡ ಆಗುತ್ತಿತ್ತು. ನಾವು ಈ ರೀತಿಯ ಅಪಘಾತಗಳನ್ನು ಈ ಹಿಂದೆ ನೋಡಿದ್ದೇವೆ. ಇದು ಹಾಗಿರಲಿಲ್ಲ. ವ್ಯಕ್ತಿಯ ಕಾಲಿನ ಗಾಯವೂ ಹಂದಿಯಿಂದ ಉಂಟಾದ ಅವಘಡದಂತೆ ಇರಲಿಲ್ಲ. ಹೀಗಾಗಿ ವ್ಯಕ್ತಿಯನ್ನು ಹೆಚ್ಚುವರಿಯಾಗಿ ತನಿಖೆ ಮಾಡಿದೆವು ಎಂದು ಹೇಳಿದ್ದಾರೆ.
ತನಿಖೆ ಮುಂದುವರಿದಂತೆ ಆ ವ್ಯಕ್ತಿ ಸುಳ್ಳು ಹೇಳುತ್ತಿದ್ದಾನೆ ಎಂಬುದನ್ನು ಪೊಲೀಸರು ಕಂಡುಕೊಂಡರು. ವಿಮಾ ಹಣದ ಆಸೆಗಾಗಿ ಫ್ಲೋರಿಡಾದ ವ್ಯಕ್ತಿಯೊಬ್ಬರಿಗೆ ಸುಪಾರಿ ಕೊಟ್ಟು ತನ್ನ ಕಾಲನ್ನೇ ಕತ್ತರಿಸಿಕೊಂಡಿದ್ದು ಗೊತ್ತಾಗಿದೆ.
ಮೋಸ ಮಾಡಿದರೂ ಆಗಿಲ್ಲ ಕೇಸು
ಮೋಸ ಮಾಡಲು ಯತ್ನಿಸಿದರೂ ಪೊಲೀಸರು ಈಗ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಿಲ್ಲ ಏಕೆಂದರೆ ಆತ ಇನ್ನೂ ವಿಮಾ ಹಣವನ್ನು ಕ್ಲೈಮ್ ಮಾಡಿಲ್ಲ. ಸುಳ್ಳು ದೂರು ದಾಖಲಿಸಿದ್ದಕ್ಕಾಗಿ ಆತನ ವಿರುದ್ಧ ಸಣ್ಣ ಪ್ರಮಾಣದ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇರುತ್ತದೆ. ಆದರೆ ಕಾಲು ಕಳೆದುಕೊಂಡ ಆತನ ಸ್ಥಿತಿ ನೋಡಿ ಸುಮ್ಮನಾಗಿದ್ದಾರೆ.