Site icon Vistara News

2021ರಲ್ಲಿ ಸ್ತನ ಗಾತ್ರ ಕಿರಿದು ಮಾಡಿಕೊಂಡ 15 ಸಾವಿರ ಮಹಿಳೆಯರು, ಏನಿದು ಹೊಸ ಟ್ರೆಂಡ್?

15 thousand women who have reduced breast size in 2021, what is the new trend?

ಮುಂಬೈ, ಮಹಾರಾಷ್ಟ್ರ: ಮಹಿಳೆಯರು ತಮ್ಮ ಸ್ತನಗಳ ಮೂಲಕ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಅದಕ್ಕಾಗಿ ಹಲವು ಆರೋಗ್ಯಕಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಸಾಮಾನ್ಯ ಗ್ರಹಿಕೆಯಂತೆ, ತಮ್ಮ ಅಂದವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಸ್ತನ ಗಾತ್ರ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಟ್ರೆಂಡ್ ಕೂಡ ಶುರುವಾಗಿದೆ. ಸ್ತನ ಗಾತ್ರ ಕಿರಿದು (breast reduction) ಮಾಡಿಕೊಳ್ಳಲು ಮಹಿಳೆಯರು ಮುಂದಾಗುತ್ತಿದ್ದಾರೆ. ಅದರಂತೆ, 2021ರಲ್ಲಿ ಸುಮಾರು 15 ಸಾವಿರ ಮಹಿಳೆಯರು ತಮ್ಮ ಸ್ತನಗಳಲ್ಲಿ ಬೊಜ್ಜು ಮತ್ತು ಗ್ರಂಥಿಗಳ ಅಂಗಾಂಶ ತೆಗೆಯಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಒಂದೆಡೆ ಮಹಿಳೆಯರು ತಮ್ಮ ಸ್ತನಗಳನ್ನು ಗಾತ್ರವನ್ನು ಕಿರಿದು ಮಾಡಲು ಮುಂದಾದರೆ, 2021ರಲ್ಲಿ ಸುಮಾರು 31,608 ಮಹಿಳೆಯರು ಸ್ತನಗಳನ್ನು ಕಸಿ(Breast Implant) ಮಾಡಿಸಿಕೊಂಡಿದ್ದಾರೆ. ಜತೆಗೆ ಸುಮಾರು 11,520 ಮಹಿಳೆಯರು ಬ್ರಿಸ್ಟ್ ಲಿಫ್ಟ್(Breast Lift) ಆಯ್ಕೆ ಮಾಡಿಕೊಂಡಿದ್ದಾರೆಂಬ ಸಂಗತಿಯನ್ನು ವರದಿಯಲ್ಲಿ ತಿಳಿಸಲಾಗಿದೆ.

ಮತ್ತೊಂದು ಪ್ಲಾಸ್ಟಿಕ್ ಸರ್ಜರಿಯ ವಿಧಾನವು ಸ್ತನಗಳ ಅಂಗಾಂಶವನ್ನು ತೆಗೆಯುವ ಬದಲಾಗಿ, ಅದನ್ನು ಬಿಗಿಗೊಳಿಸುತ್ತದೆ. ಪರಿಣಾಮ, ಸಣ್ಣ ಕಾಣುವ ಸ್ತನಗಳ ಬೇಕು ಎನ್ನುವ ಮಹಿಳೆಯರಷ್ಟೇ ಸ್ತನಗಳು ದೊಡ್ಡದಾಗಿಬೇಕು ಎಂದು ಬಯಸುವ ಮಹಿಳೆಯರ ಸಂಖ್ಯೆ ಬಹುತೇಕ ಸಮಾನವಾಗಿದೆ.

ಈ ವಿಷಯದಲ್ಲಿ ಭಾರತ ಮತ್ತು ಜಾಗತಿಕ ಟ್ರೆಂಡ್ ಗಮನಿಸಿದರೆ, ಎರಡರಲ್ಲಿ ವ್ಯತ್ಯಾಸವಿದೆ. ಇಂಟರ್‌ನ್ಯಾಷನಲ್ ಸೊಸೈಟಿ ಆಪ್ ಆ್ಯಸ್ಥೆಟಿಕ್ ಪ್ಲಾಸ್ಟಿಕ್ ಸರ್ಜರಿ ಸಂಸ್ಥೆಯ ಪ್ರಕಾರ, 16.2 ಲಕ್ಷ ಮಹಿಳೆಯರು ಸ್ತನ ವರ್ಧನೆಗೆ ಮುಂದಾದರೆ, 4.3 ಲಕ್ಷ ಮಹಿಳೆಯರು ಮಾತ್ರ ಸ್ತನ ಗಾತ್ರ ಕಿರಿದು ಮಾಡಿಕೊಳ್ಳುವ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ಬ್ರಿಸ್ಟ್ ಲಿಫ್ಟ್‌ಗಾಗಿ ಜಗತ್ತಿನಾದ್ಯಂತ 6 ಲಕ್ಷ ಮಹಿಳೆಯರು ಮುಂದಾಗಿದ್ದಾರೆ. ಭಾರತದ ಮಟ್ಟಿಗೆ ಕೆಲವು ಮಹಿಳೆಯರಿಗೆ ತಮ್ಮ ಶರೀರದ ಅನುಪಾತಕ್ಕೆ ತಕ್ಕಂತೆ ಸ್ತನಗಳು ಇಲ್ಲದಿರುವುದರಿಂದ ಸ್ತನ ಸಂಬಂಧಿ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ, ಆ್ಯಸ್ಥೆಟಿಕ್ ಸರ್ಜರಿ ಮಾತ್ರವಲ್ಲದೇ ಭಾರತೀಯ ಮಹಿಳೆಯರು ಕ್ರೀಮ್ಸ್, ಹಾರ್ಮೋನಲ್ ಪಿಲ್ಸ್ ಮತ್ತು ಸ್ಟೆರಾಯ್ಡ್‌ಗಳಂಥ ಪರ್ಯಾಯ ಸಾಧನಗಳ ಮೊರೆ ಕೂಡ ಹೋಗುತ್ತಿದ್ದಾರೆ. ಸ್ತನಗಳಿಗೆ ಸಂಬಂಧಿಸಿದಂತೆ ಸರ್ಜಿಕಲ್ ಆಯ್ಕೆಯ ಬಗೆಗಿನ ಮಾಹಿತಿ ಕೊರತೆಯೇ, ಮಹಿಳೆಯರು ಪರ್ಯಾಯ ಸಾಧನಗಳನ್ನು ಹುಡುಕಿಕೊಳ್ಳಲು ಕಾರಣವಾಗಿದೆ.

ಇದನ್ನೂ ಓದಿ: Health guide: ಇದ್ದಕ್ಕಿದ್ದಂತೆ ಸ್ತನದ ಗಾತ್ರ ಹೆಚ್ಚಾಗಲು ಇವೂ ಕಾರಣವಿರಬಹುದು!

ಸ್ತನಗಳ ಗಾತ್ರವನ್ನು ಕಿರಿದು ಮಾಡುವ ಶಸ್ತ್ರ ಚಿಕಿತ್ಸೆಗೆ ಸಾಮಾನ್ಯ ಆಸ್ಪತ್ರೆಗಳಲ್ಲಿ 1.5 ರೂ. ಲಕ್ಷ ವೆಚ್ಚವಾದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸುಮಾರು 4 ಲಕ್ಷ ರೂ.ವರೆಗೂ ಆಗುತ್ತದೆ. ಹಾಗೆಯೇ, ಕಾಸ್ಮೆಟಿಕ್ ಸರ್ಜರಿಗಳು ಯಾವುದೇ ಹೆಲ್ತ್ ವಿಮೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ ತಜ್ಞರು.

Exit mobile version