Site icon Vistara News

Chandrayaan 3: ಲ್ಯಾಂಡಿಂಗ್ ಮುಂಚಿನ ”ಆ ಭಯಾನಕ 17 ನಿಮಿಷಗಳು” ಇಸ್ರೋ ವಿಜ್ಞಾನಿ ಹೇಳುವುದೇನು?

Lander on Moon

ನವದೆಹಲಿ: ಚಂದ್ರಯಾನ-3 ಮಿಷನ್‌ (Chandrayaan 3) ಯಶಸ್ಸಿಗಾಗಿ ಕ್ಷಣಗಣನೆ ಆರಂಭವಾಗಿದೆ. ಚಂದ್ರಯಾನ-3 ನೌಕೆಯಿಂದ ಲ್ಯಾಂಡರ್ (Lander) ನಾಳೆ ಅಂದರೆ ಆಗಸ್ಟ್ 23 ಸಂಜೆ 6.04ಕ್ಕೆ ಚಂದ್ರನ (Landing on Moon) ಮೇಲೆ ಇಳಿಯಲಿದೆ. ಹಾಗಾಗಿ, ಭಾರತೀಯರಲ್ಲಿ ತೀವ್ರ ಕುತೂಹಲ ಕೆರಳಿದೆ. ಆದರೆ, ಲ್ಯಾಂಡಿಂಗ್‌ನ ಮುಂಚಿನ ‘ಆ ಭಯಾನಕ 17 ನಿಮಿಷಗಳು’ (17 minutes of terror) ನಿರ್ಣಾಯಕವಾಗಿರಲಿವೆ. ಅಂದರೆ, ಅಷ್ಟೊಂದು ಮಹತ್ವದ ಸ್ಥಿತಿ ಅದಾಗಿರುತ್ತದೆ ಎಂದು ಹಿರಿಯ ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ(Senior ISRO Official).

ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (SAC) ನಿರ್ದೇಶಕ ನಿಲೇಶ್ ಎಂ ದೇಸಾಯಿ, ”ಆ 17 ನಿಮಿಷಗಳ ಮಹತ್ವ”ವನ್ನು ವಿವರಿಸಿದರು. ಆಗಸ್ಟ್ 23 ರಂದು, ಲ್ಯಾಂಡರ್ 30 ಕಿಲೋಮೀಟರ್ ಎತ್ತರದಿಂದ ಇಳಿಯಲು ಪ್ರಯತ್ನಿಸುತ್ತದೆ. ಇದರ ಅಂದಾಜು ವೇಗವು ಸೆಕೆಂಡಿಗೆ ಸುಮಾರು 1.68 ಕಿಲೋಮೀಟರ್ ಆಗಿರುತ್ತದೆ, ಇದು ಉತ್ತಮ ವೇಗವೆಂದು ಪರಿಗಣಿಸಲಾಗಿದೆ. ಚಂದ್ರನ ಗುರುತ್ವಾಕರ್ಷಣೆಯ ಬಲವು ಲ್ಯಾಂಡರ್ ಅನ್ನು ತನ್ನ ಕಡೆಗೆ ಎಳೆಯುತ್ತದೆ ಎಂದು ಅವರು ಹೇಳಿದರು.

ಲ್ಯಾಂಡರ್‌ ಲ್ಯಾಂಡಿಂಗ್ ಮಾಡುವಾಗ ಜೀರೋ ವೇಗಕ್ಕೆ ತರಲು ನಾವು ಥ್ರಸ್ಟರ್ ಎಂಜಿನ್ ಅನ್ನು ಪರಿಶೀಲಿಸಬೇಕಾಗುತ್ತದೆ. ನಾವು ಲ್ಯಾಂಡರ್ ಮಾಡ್ಯೂಲ್‌ನಲ್ಲಿ ನಾಲ್ಕು ಥ್ರಸ್ಟರ್ ಎಂಜಿನ್‌ಗಳನ್ನು ಸ್ಥಾಪಿಸಿದ್ದೇವೆ. 30 ಕಿಲೋಮೀಟರ್ ಎತ್ತರದಿಂದ, ಲ್ಯಾಂಡರ್ 7.5 ಕಿಲೋಮೀಟರ್‌ಗೆ ಮತ್ತು ನಂತರ 6.8 ಕಿಲೋಮೀಟರ್‌ಗೆ ಇಳಿಯುತ್ತದೆ ಎಂದು ವಿಜ್ಞಾನಿ ನಿಲೇಶ್ ಎಂ ದೇಸಾಯಿ ಅವರು ಹೇಳಿದರು.

ನಾಲ್ಕು ಎಂಜಿನ್‌ಗಳ ಪೈಕಿ ಎರಡು ಎಂಜಿನ್‌ಗಳನ್ನು ಸ್ಥಗಿತಗೊಳಿಸಿತ್ತೇವೆ. ಉಳಿರೆದರಡು ಎಂಜಿನ್‌ಗಳ ಮೂಲಕವೇ ಲ್ಯಾಂಡಿಂಗ್ ಮಾಡಲಾಗುತ್ತದೆ. ರಿವರ್ಸ್ ಥ್ರಸ್ಟ್ ಎಂಜಿನ್ ಉಪಯೋಗಿಸುತ್ತೇವೆ. 30 ಕಿಲೋಮೀಟರ್‌ಗಳಿಂದ ಲ್ಯಾಂಡರ್‌ನ ವೇಗವು 6.8 ಕಿಲೋಮೀಟರ್‌ಗಳವರೆಗೆ ಮತ್ತು ಸೆಕೆಂಡಿಗೆ 350 ಮೀಟರ್‌ಗಳಿಗೆ ನಾಲ್ಕು ಪಟ್ಟು ಕಡಿಮೆಯಾಗುತ್ತೆದ ಎಂದು ದೇಸಾಯಿ ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Chandrayaan 3: ಚಂದ್ರನ ಕೂಗಳತೆ ದೂರದಿಂದ ಸೆರೆಸಿಕ್ಕವು ಫೋಟೊಗಳು; ಇತಿಹಾಸಕ್ಕೆ ಬಾಕಿ ಇವೆ ಕೆಲವೇ ಗಂಟೆಗಳು

6.8 ಕಿಲೋಮೀಟರ್‌ಗಳಿಂದ ಈ ವೇಗವು ಇದು 800 ಮೀಟರ್‌ಗಳಿಗೆ ಇಳಿಯುತ್ತದೆ ಮತ್ತು ನಂತರ ಚಂದ್ರನ ಮೇಲ್ಮೈಗೆ ಲಂಬವಾಗಿ ಇಳಿಯುತ್ತದೆ. ಕ್ಯಾಮೆರಾಗಳು ಮತ್ತು ಸಂವೇದಕದಿಂದ ಪಡೆದ ಡೇಟಾವನ್ನು ಬಳಸಿಕೊಂಡು, ಲ್ಯಾಂಡರ್ ಎಲ್ಲಿ ಇಳಿಯಬೇಕು ಎಂಬುದನ್ನು ನಿರ್ಧರಿಸುವ ಮೊದಲು ಮೇಲ್ಮೈ ಮೇಲೆ ಸುಳಿದಾಡುತ್ತದೆ ಎಂದು ನಿಲೇಶ್ ದೇಸಾಯಿ ಅವರು ಹೇಳಿದರು.

ಈ ಒಟ್ಟು ಪ್ರಕ್ರಿಯೆಗೆ ಸುಮಾರು 17 ನಿಮಿಷ 21 ಸೆಕೆಂಡ್ ಹಿಡಿಯುತ್ತದೆ. ಸೂಕ್ತವಾದ ಸೈಟ್‌ನಲ್ಲಿ ಇಳಿಯಲು ಲ್ಯಾಂಡರ್ ಸ್ವಲ್ಪ ಪಕ್ಕಕ್ಕೆ ಚಲಿಸಿದರೆ ಆಗ ಇದಕ್ಕೆ ತಗಲುವ ಸಮಯ 17 ನಿಮಿಷ ಮತ್ತು 32 ಸೆಕೆಂಡುಗಳು. ಈ ಭಯಾನಕ 17 ನಿಮಿಷಗಳು ನಮಗೆ ಬಹಳ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ವಿಜ್ಞಾನದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version