Site icon Vistara News

Bank Holidays: ಸೆಪ್ಟೆಂಬರ್‌ನಲ್ಲಿ ಬ್ಯಾಂಕುಗಳಿಗೆ 18 ದಿನ ರಜೆ! ನಮ್ಮ ರಾಜ್ಯದಲ್ಲಿ ಎಷ್ಟು ದಿನ?

Bank Holidays

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(Reserve Bank of India – RBI) ಬಿಡುಗಡೆ ಮಾಡಿರುವ ಅಧಿಕೃತ ರಜಾ ಪಟ್ಟಿಯ ಪ್ರಕಾರ(Bank Holidays), ಸೆಪ್ಟೆಂಬರ್ ತಿಂಗಳಲ್ಲಿ (September Month) ಬ್ಯಾಂಕುಗಳಿಗೆ 18 ರಜೆಗಳು ಇರಲಿವೆ. ಹಬ್ಬಗಳು(Festivals), ರಾಷ್ಟ್ರೀಯ ಹಬ್ಬಗಳು (National Festivals) ಮತ್ತು ಇತರ ಪ್ರಮುಖ ದಿನಗಳನ್ನು ಆಧರಿಸಿವೆ. ಅಂದ ಹಾಗೆ, ಈ 18 ರಜೆಗಳ ದೇಶದ್ಯಾಂತ ಏಕಪ್ರಕಾರವಾಗಿಲ್ಲ. ಇವು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಎಲ್ಲ ರಾಜ್ಯಗಳಲ್ಲೂ ಬ್ಯಾಂಕುಗಳಿಗೆ 18 ರಜೆಗಳಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಬ್ಯಾಂಕ್ ಶಾಖೆಗಳಿಗೆ ರಜೆ ಇದ್ದರೂ, ರಜೆ ದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆ ಅಭಾದಿತವಾಗಿರುತ್ತದೆ. ಹಾಗಾಗಿ, ಗ್ರಾಹಕರು ವ್ಯವಹಾರಗಳನ್ನು ಮಾಡಬಹುದು, ತಮ್ಮ ಬ್ಯಾಲೆನ್ಸ್ ಚೆಕ್ ಮಾಡಬಹುದು ಮತ್ತು ಯಾವುದೇ ಬ್ಯಾಂಕಿಂಗ್ ಚಟುವಟಿಗಳನ್ನು ತಾವಿದ್ದಲ್ಲೇ ಯಾವುದೇ ಅಡೆ ತಡೆ ಇಲ್ಲದೇ ಮಾಡಬಹುದಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 12 ರಜೆಗಳಿದ್ದು, ಉಳಿದ ದಿನಗಳು ವಾರಾಂತ್ಯಗಳು ಮತ್ತು ರಾಜ್ಯ ಘೋಷಿತ ರಜೆಗಳಾಗಿವೆ. ಆದಾಗ್ಯೂ, ಎಲ್ಲಾ ರಾಜ್ಯಗಳು ಅಥವಾ ಪ್ರದೇಶಗಳಲ್ಲಿ ಬ್ಯಾಂಕ್‌ಗಳನ್ನು 18 ದಿನಗಳವರೆಗೆ ಮುಚ್ಚಲಾಗುವುದಿಲ್ಲ ಎಂಬುದನ್ನು ನೀವು ಗಮನಿಸಬೇಕು. ಇದು ದೇಶದ ವಿವಿಧ ಭಾಗಗಳಲ್ಲಿನ ಬ್ಯಾಂಕ್‌ಗಳು ರಜೆಗಳು ಭಿನ್ನವಾಗಿರುತ್ತವೆ. ಉದಾಹರಣೆಗೆ, ಮಹಾರಾಜಾ ಹರಿ ಸಿಂಗ್ ಜಯಂತಿಯ ಅಂಗವಾಗಿ ಜಮ್ಮುವಿನಲ್ಲಿ ಬ್ಯಾಂಕುಗಳಿಗೆ ರಜೆ ಇದ್ದರೆ, ಅದೇ ದಿನ ಅಸ್ಸಾಮ್, ಗೋವಾ, ಬಿಹಾರ ಅಥವಾ ದೇಶದ ಇತರ ರಾಜ್ಯಗಳಲ್ಲಿ ರಜೆ ಇರುವುದಿಲ್ಲ.

ಈ ಸುದ್ದಿಯನ್ನೂ ಓದಿ: 5 day work : ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ 2 ದಿನಗಳ ರಜೆ ಸೌಲಭ್ಯ ಪ್ರಸ್ತಾಪ

ಸೆಪ್ಟೆಂಬರ್‌ ತಿಂಗಳಲ್ಲಿ ಯಾವ ದಿನ ಬ್ಯಾಂಕುಗಳಿಗೆ ರಜೆ?

ಸೆ.6 ಶ್ರೀಕೃಷ್ಣ ಜನ್ಮಾಷ್ಟಮಿ, ಸೆ.7 ಶ್ರೀಕೃಷ್ಣ ಅಷ್ಟಮಿ, ಸೆ.8 ಜಿ20 ಶೃಂಗ ಸಭೆ, ಸೆ.18 ಮತ್ತು 19 ಗಣೇಶ ಚತುರ್ಥಿ, ಸೆ.22 ಶ್ರೀ ನಾರಾಯಣಗುರು ಸಮಾಧಿ ದಿನ, ಸೆ.20 ನೌಖಾಹಿ, ಸೆ.23 ಮಹಾರಾಜ ಹರಿಸಿಂಗ್ ಜಯಂತಿ, ಸೆ.25 ಶ್ರೀಮಾತಾ ಶಂಕರದೇವ್ ಜನ್ಮೋತ್ಸವ, ಸೆ.27 ಮಿಲಾದ್ ಐ ಶರೀಫ್, ಸೆ.28 ಈದ್ ಮಿಲಾದ್, ಸೆ.29 ಇಂದ್ರಜಾತ್ರಾ. ಈ ದಿನಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ. ಆದರೆ, ಇವು ರಾಜ್ಯಗಳಿಗೂ ಅನ್ವಯವಾಗುವುದಿಲ್ಲ. ಇನ್ನುಳಿದ ರಜೆಗಳು ಭಾನುವಾರ ಹಾಗೂ ಎರಡನೇ ಶನಿವಾರ ರಜೆಗಳಾಗಿರುತ್ತವೆ.

Exit mobile version