Site icon Vistara News

₹ 2000 Notes Withdrawn: ನೋಟ್‌ ವಾಪಸ್‌ ಉತ್ತಮ ನಡೆಯೆ? ಮಾಜಿ ಸಿಇಎ ನೀಡಿದ 6 ಕಾರಣ ಇಲ್ಲಿದೆ

krishnamurthy subramanian

ಹೊಸದಿಲ್ಲಿ: ₹ 2,000 ನೋಟುಗಳನ್ನು ಹಿಂತೆಗೆದುಕೊಳ್ಳುವ ಕ್ರಮ ಉತ್ತಮ ನಡೆ ಎಂದು ಒಟ್ಟಾರೆ ಉತ್ತಮವಾಗಿದೆ ಎಂದು ಮಾಜಿ ಸಿಇಎ ಡಾ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.

2018ರಿಂದ 2021ರವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್, ಆರ್‌ಬಿಐನ ಇತ್ತೀಚಿನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಉಪಕ್ರಮ ಯಾಕೆ ಉತ್ತಮ ಎಂಬುದಕ್ಕೆ ಕೆಲವು ಕಾರಣಗಳನ್ನು ನೀಡಿದ್ದಾರೆ. 2016ರ ನವೆಂಬರ್‌ನಲ್ಲಿ ₹ 500 ಮತ್ತು 1,000ರ ಹಳೆಯ ನೋಟುಗಳನ್ನು ನಿಷೇಧಿಸಿದಾಗ ₹ 2,000 ನೋಟುಗಳನ್ನು ಪರಿಚಯಿಸಲಾಗಿತ್ತು.

  1. ಒಂದನೆಯದಾಗಿ, ಬಹುತೇಕ ಕಡೆ ನಡೆದ ಐಡಿ, ಇಡಿ ದಾಳಿಗಳಲ್ಲಿ ₹ 2000 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮುಖಬೆಲೆಯನ್ನು ಮುಖ್ಯವಾಗಿ ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. 80-20ರ ನಿಯಮದಂತೆ, 80% ಜನರು ಈ ಹಣವನ್ನು ಕಾನೂನುಬದ್ಧವಾಗಿ ₹ 2000 ನೋಟುಗಳಲ್ಲಿ ಸಂಗ್ರಹಿಸುತ್ತಿರಬಹುದಾಗಿದ್ದರೂ, ಅವರು ಒಟ್ಟಾರೆ ಮೌಲ್ಯದ 20%ರಷ್ಟು ಮಾತ್ರ ಸಂಗ್ರಹಿಸುವ ಸಾಧ್ಯತೆಯಿದೆ. ಇನ್ನುಳಿದ 20% ಮಂದಿ, 80%ರಷ್ಟು ₹ 2000 ನೋಟುಗಳನ್ನು (ಅಂದರೆ ಸುಮಾರು 3 ಲಕ್ಷ ಕೋಟಿ) ಹೊಂದಿರಬಹುದು.
  2. ಆರ್ಥಿಕ ವಹಿವಾಟುಗಳಿಗೆ ₹ 2,000 ನೋಟುಗಳು ಭಾರೀ ಸಂಖ್ಯೆಯಲ್ಲಿ ಬಳಕೆಯಾಗುತ್ತಿಲ್ಲವಾದ್ದರಿಂದ ಈ ನೋಟುಗಳ ಹಿಂತೆಗೆತ ಸಾಮಾನ್ಯ ಜನರಿಗೆ ಅನನುಕೂಲವಾಗುವುದಿಲ್ಲ.
  3. ಡಿಜಿಟಲ್ ಪಾವತಿಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಭೌತಿಕ ಕರೆನ್ಸಿ ನೋಟುಗಳ ಪಾತ್ರ, ವಿಶೇಷವಾಗಿ ₹ 2,000 ನೋಟುಗಳ ಚಲಾವಣೆ ಇಳಿದಿದೆ.
  4. ₹ 500 ನೋಟುಗಳನ್ನು ವಿನಿಮಯದ ಮಾಧ್ಯಮವಾಗಿ ₹ 2000 ನೋಟಿನ ಬದಲು ಸಮರ್ಥವಾಗಿ ಬಳಸಬಹುದಾಗಿದೆ.
  5. ಡಿಜಿಟಲ್ ವಹಿವಾಟುಗಳು ಈಗಿನಿಂದ 2026ರವರೆಗೆ ಮೂರು ಪಟ್ಟು ಆಗುವ ನಿರೀಕ್ಷೆಯಿದೆ. ಇದು ಮುಂಬರುವ ವರ್ಷಗಳಲ್ಲಿ ₹ 2000 ನೋಟಿನ ಅಗತ್ಯವನ್ನು ಕಡಿಮೆ ಮಾಡುತ್ತದೆ.
  6. ಅತ್ಯಂತ ಮುಖ್ಯವಾಗಿ, ₹ 2000 ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ (30 ಸೆಪ್ಟೆಂಬರ್ 2023ರ ನಂತರವೂ ಮುಂದುವರಿಯಲಿದೆ ಎಂಬುದು ನನ್ನ ತಿಳಿವಳಿಕೆ. ಆರ್‌ಬಿಐ ಇದನ್ನು ಸ್ಪಷ್ಟಪಡಿಸಬೇಕಾಗಬಹುದು.) ಹೀಗಾಗಿ ₹ 2000 ನೋಟು ಹೊಂದಿರುವವರು 30 ಸೆಪ್ಟೆಂಬರ್ ನಂತರವೂ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟ್‌ ಬ್ಯಾನ್‌ ಅಲ್ಲ, ವಾಪಸ್;‌ ಬ್ಯಾನ್‌ಗೂ, ಹಿಂಪಡೆಯುವುದಕ್ಕೂ ವ್ಯತ್ಯಾಸವೇನು?

Exit mobile version