Site icon Vistara News

2024 Election | ಬಿಜೆಪಿಗೆ ಗೆಲ್ಲಲು ಕಷ್ಟವಾಗಿರುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 144ರಿಂದ 160ಕ್ಕೆ ಏರಿಕೆ! ಏನು ಕಾರಣ?

J P Nadad @ BJP President

ನವದೆಹಲಿ: ಸಾರ್ವತ್ರಿಕ ಲೋಕಸಭೆ ಚುನಾವಣೆಗೆ (2024 Election) ಆಲ್ಮೋಸ್ಟ್ ಇನ್ನೂ ಎರಡು ವರ್ಷ ಬಾಕಿ ಇದೆ. ಆದರೆ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಈಗಿನಿಂದಲೇ ಚುನಾವಣೆ ತಯಾರಿ ನಡೆಸುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಠಿಣವಾಗಿರುವ ಕ್ಷೇತ್ರಗಳ ಸಂಖ್ಯೆಯನ್ನು 144 ಕ್ಷೇತ್ರಗಳಿಂದ 160ಕ್ಕೆ ಹೆಚ್ಚಿಸಿದೆ! ಈ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನವನ್ನು ಕೇದ್ರೀಕರಿಸಲು ನಿರ್ಧರಿಸಿದೆ.

ಬಿಹಾರದಲ್ಲಿ ಬಿಜೆಪಿಯು ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯುನಿಂದ ಸ್ನೇಹ ಕಡಿದುಕೊಂಡಿದ್ದರಿಂದ ಬಹುತೇಕ ಕಡೆ ಅದು ಏಕಾಂಗಿಯಾಗಿ ಸ್ಪರ್ಧಿಸಲಿದೆ. ಈ ಹಿನ್ನೆಲೆಯಲ್ಲಿ ಗೆಲ್ಲಲು ಕಠಿಣವಾಗಿರುವ ಕ್ಷೇತ್ರಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ನಿರ್ದಿಷ್ಟ ಕ್ಷೇತ್ರಗಳ ನಾಯಕರಿಗೆ ಸೂಚಿಸಲಾಗಿದೆ. ಆಯಾ ರಾಜ್ಯಗಳ ಸಂಘಟನೆ ಹೊಣೆ ಹೊತ್ತಿರುವ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ, ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಿಜೆಪಿಯು ತೆಲಂಗಾಣ ಮತ್ತು ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಸನ್ನಾಹದಲ್ಲಿದೆ. ಈ ಹಿನ್ನೆಲೆಯಲ್ಲಿ ಪಟನಾ ಮತ್ತು ಹೈದ್ರಾಬಾದ್‌ನಲ್ಲಿ ಎರಡು ದಿನಗಳ ಕಾಲ ವಿಸ್ತಾರಕ ಸಭೆಗಳನ್ನು ನಡೆಸುತ್ತಿದೆ. ಪಟನಾದಲ್ಲಿ ಡಿಸೆಂಬರ್ 21 ಮತ್ತು 22ರಂದು ಸಭೆ ನಡೆದರೆ, ಹೈದ್ರಾಬಾದ್‌ನಲ್ಲಿ 29 ಮತ್ತು 29 ಈ ಸಭೆಯನ್ನು ಆಯೋಜಿಸಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ನಡ್ಡಾ ಅವರು ಈ ಎರಡೂ ಸಭೆಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.

ಇದನ್ನೂ ಓದಿ | Rahul Gandhi | ʼಇದು ನೆಹರು ಕಾಲದ ಭಾರತವಲ್ಲʼ, ಚೀನಾ, ಸೇನೆ ಬಗ್ಗೆ ರಾಹುಲ್‌ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು

Exit mobile version