Site icon Vistara News

Houthi Attack: 22 ಭಾರತೀಯರಿದ್ದ ತೈಲ ಟ್ಯಾಂಕರ್‌ ಮೇಲೆ ಹೌತಿ ಉಗ್ರರ ದಾಳಿ; ರಕ್ಷಣೆಗೆ ಹರಸಾಹಸ

Vistara Editorial, houthi terrorists must be root out

Vistara Editorial, houthi terrorists must be root out

ನವದೆಹಲಿ: ಗಾಜಾದ ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಪ್ರತಿದಾಳಿ ನಡೆಸಿದ ಬಳಿಕ ಕೆಂಪು ಸಮುದ್ರದಲ್ಲಿ (Red Sea) ಇರಾಕ್‌ ಬೆಂಬಲಿತ ಹೌತಿ ಉಗ್ರರ (Houthis) ಉಪಟಳ ಹೆಚ್ಚಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಕೆಂಪು ಸಮುದ್ರದಲ್ಲಿ 22 ಭಾರತೀಯರಿದ್ದ ಮರ್ಲಿನ್‌ ಲುವಾಂಡ (Marlin Luanda) ಎಂಬ ಬ್ರಿಟನ್‌ ಆಯಿಲ್‌ ಟ್ಯಾಂಕರ್‌ (Oil Tanker) ಮೇಲೆ ಹೌತಿ ಉಗ್ರರು ದಾಳಿ ನಡೆಸಿದ್ದಾರೆ. ಹೌತಿ ಉಗ್ರರ ದಾಳಿಯಿಂದಾಗಿ ಹಡಗು ಹೊತ್ತಿ ಉರಿದಿದ್ದು, ಭಾರತೀಯರ ರಕ್ಷಣೆಗಾಗಿ ದೇಶದ ನೌಕಾಪಡೆಯು ಹರಸಾಹಸ ಪಡುತ್ತಿದೆ.

ಜನವರಿ 26ರಂದು ಹೌತಿ ಉಗ್ರರು ಬ್ರಿಟನ್‌ನ ತೈಲ ಟ್ಯಾಂಕರ್‌ ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ಭಾರತೀಯ ನೌಕಾಪಡೆಯು ಮಾಹಿತಿ ನೀಡಿದೆ. “ಭಾರತೀಯರಿದ್ದ ತೈಲ ಟ್ಯಾಂಕರ್‌ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿದ್ದಾರೆ. ಭಾರತೀಯರ ರಕ್ಷಣೆಗಾಗಿ ನೌಕಾಪಡೆಯು ಕ್ಷಿಪಣಿ ನಿರೋಧಕ ಐಎನ್‌ಎಸ್‌ ವಿಶಾಖಪಟ್ಟಣಂ ನೌಕೆಯನ್ನು ನಿಯೋಜನೆ ಮಾಡಲಾಗಿದೆ. ನೌಕಾಪಡೆಯು ಭಾರತೀಯರ ರಕ್ಷಣೆಯಲ್ಲಿ ತೊಡಗಿದೆ” ಎಂದು ತಿಳಿಸಿದೆ. ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಉಪಟಳ ಜಾಸ್ತಿಯಾದ ಹಿನ್ನೆಲೆಯಲ್ಲಿ ಯೆಮೆನ್‌ನಲ್ಲಿರುವ ಹೌತಿ ಉಗ್ರರ ಕ್ಷಿಪಣಿ ಮೇಲೆ ಅಮೆರಿಕ ದಾಳಿ ನಡೆಸಿ, ಕ್ಷಿಪಣಿಯನ್ನು ಧ್ವಂಸಗೊಳಿಸಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರು ದಾಳಿ ನಡೆಸಿದ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್‌ ದಾಳಿಗೆ ಗಾಜಾ ನಗರವೇ ತತ್ತರಿಸಿಹೋಗಿದೆ. ಇಸ್ರೇಲ್‌ ದಾಳಿಯು ಹಲವು ಇಸ್ಲಾಮಿಕ್‌ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ, ಇರಾಕ್‌ ಬೆಂಬಲಿತ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ನೌಕೆಗಳ ಅಪಹರಣ, ದಾಳಿ ನಡೆಸುತ್ತಿದ್ದಾರೆ.

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕಳೆದ ನವೆಂಬರ್‌ನಲ್ಲಿ ಕೆಂಪು ಸಮುದ್ರದಲ್ಲಿ ಅಪಹರಿಸಿದ್ದರು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ, ಕ್ಲೇಮ್ ನಿರಾಕರಿಸಿದ್ದ ಇಸ್ರೇಲ್ ಸರ್ಕಾರವು, ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: Oil Price: ಹೌತಿ ದಾಳಿ ಪರಿಣಾಮ; ಭಾರತದಲ್ಲಿ ಶೀಘ್ರವೇ ತೈಲ ಬೆಲೆ ಏರಿಕೆ?

ಅಪಹರಣವನ್ನು ದೃಢೀಕರಿಸಿದ ಇಸ್ರೇಲಿ ರಕ್ಷಣಾ ಪಡೆಗಳು ಎಕ್ಸ್‌ ವೇದಿಕೆಯಲ್ಲಿ ಪೋಸ್ಟ್ ಮಾಡಿತ್ತು. ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್ ಬಳಿ ಹೌತಿಗಳು ಸರಕು ಹಡಗನ್ನು ಅಪಹರಿಸಿದ್ದಾರೆ. ಜಾಗತಿಕ ಪರಿಣಾಮದ ಅತ್ಯಂತ ಗಂಭೀರ ಘಟನೆಯಾಗಿದೆ. ಹಡಗು ಭಾರತಕ್ಕೆ ಟರ್ಕಿಯಿಂದ ಹೊರಟಿತ್ತು. ಇಸ್ರೇಲಿಗಳನ್ನು ಒಳಗೊಂಡಂತೆ ವಿವಿಧ ರಾಷ್ಟ್ರಗಳ ನಾಗರಿಕ ಸಿಬ್ಬಂದಿ ಇದ್ದಾರೆ. ಆದರೆ ಈ ಹಡುಗು ಇಸ್ರೇಲ್‌ಗೆ ಸೇರಿಲ್ಲ ಅಲ್ಲ ಎಂದು ಹೇಳಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version