Site icon Vistara News

Indian PhD Scholar | 2500 ವರ್ಷ ಹಳೆಯ ಸಂಸ್ಕೃತ ವ್ಯಾಕರಣದ ಸಮಸ್ಯೆ ಬಗೆಹರಿಸಿದ ಭಾರತೀಯ ತರುಣ!

Rishi Rajpopat @ Cambridge University

ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಭಾರತೀಯ ಪಿಎಚ್‌ಡಿ ಸ್ಕಾಲರ್ (Indian PhD Scholar) ರಿಷಿ ರಾಜ್‌ಪೋಪಟ್ (Rishi Rajpopat) ಅವರು 2500 ವರ್ಷಗಳಷ್ಟು ಹಳೆಯ ಸಂಸ್ಕೃತ ವ್ಯಾಕರಣ ಸಮಸ್ಯೆಯೊಂದನ್ನು ಬಗೆಹರಿಸಿದ್ದಾರೆ.

ಸೇಂಟ್ ಜಾನ್ಸ್ ಕಾಲೇಜಿನ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನ ವಿಭಾಗದ ಭಾರತೀಯ ಪಿಎಚ್‌ಡಿ ಸ್ಕಾಲರ್ ರಿಷಿ ಅವರು, ಪಾಣಿನಿಯ ಪಠ್ಯ ಅಷ್ಟಾಧ್ಯಾಯಿಯಲ್ಲಿನ ನಿಯಮದ ರಹಸ್ಯವನ್ನು ಭೇದಿಸಿದ್ದಾರೆ. ಸಂಸ್ಕೃತ ವಿದ್ವಾಂಸ ಮತ್ತು ಭಾಷಾಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗಿರುವ ಪಾಣಿನಿ ಬರೆದ ವ್ಯಾಕರಣದ ಒಗಟುಗಳನ್ನು ಪರಿಹರಿಸಿದ್ದಾರೆ. ಶತಮಾನಗಳಿಂದಲೂ ವಿದ್ವಾಂಸರಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಿರಲಿಲ್ಲ. ಈ ಕೆಲಸವನ್ನು 27 ವರ್ಷದ ರಿಷಿ ರಾಜ್‌ಪೋಪಟ್ ಮಾಡಿದ್ದಾರೆ.

ಪಾಣಿನಿ ಅಷ್ಟಾಧ್ಯಾಯಿಯಲ್ಲಿರುವ ಭಾಷಾ ಅಲ್ಗೋರಿದಮ್ ಗೊಂದಲವನ್ನು ಬಗೆಹರಿಸುವ ಪ್ರಯತ್ನವನ್ನು ಬಹಳಷ್ಟು ವಿದ್ವಾಂಸ ಮಾಡಿದ್ದರು. ಆದರೆ, ಈವರೆಗೂ ಸಾಧ್ಯವಾಗಿರಲಿಲ್ಲ. ನಿಯಮಗಳ ಸಂಘರ್ಷವನ್ನು ಬಿಡಿಸುವ ಮೆಟಾ ನಿಯಮಗಳನ್ನು ಸ್ವತಃ ಪಾಣಿನಿ ಅವರೇ ಬರೆದಿದ್ದಾರೆ. ಪಾಣಿನಿ ಅವರ ಈ ಮೆಟಾ ರೂಲ್ ಪ್ರಕಾರ, ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಅನ್ವಯಿಸುತ್ತದೆ. ಈ ಸಂಗತಿಯನ್ನಾಧರಿಸಿಕೊಂಡು ರಿಷಿ ಬಹುವರ್ಷ ಬಗೆಹರಿಸಲಾಗದೇ ಉಳಿದ ಸಮಸ್ಯೆಯನ್ನು ಭೇದಿಸಿದ್ದಾರೆ.

ಇದನ್ನೂ ಓದಿ | SpaceX Moon Trip | ಭಾರತೀಯ ನಟನೊಂದಿಗೆ ಮೂನ್ ಟ್ರಿಪ್ ಮಾಡಲಿದ್ದಾರೆ ಜಪಾನ್ ಉದ್ಯಮಿ!

Exit mobile version