Site icon Vistara News

Sexual Assault: ಗಂಡಂದಿರು, ಮಕ್ಕಳ ಎದುರೇ 3 ಮಹಿಳೆಯರ ಮೇಲೆ ಗ್ಯಾಂಗ್ ರೇಪ್! ಜಾಗ ಬಿಟ್ಟು ಕೊಡಲ್ಲ ಎಂದಿದ್ದೇ ತಪ್ಪಾಯ್ತಾ?

gang rape in Mandya

ನವದೆಹಲಿ: ಮೂವರು ಹೆಂಗಸರನ್ನು ಅವರ ಗಂಡಂದಿರು(Husbands), ಮಕ್ಕಳು (Children) ಹಾಗೂ ಕುಟುಂಬದ ಸದಸ್ಯರ ಎದುರಲ್ಲೇ ನಾಲ್ವರು ಮುಸುಕುಧಾರಿಗಳು (masked men) ಸಾಮೂಹಿಕ ಅತ್ಯಾಚಾರ (Sexual Assault) ನಡೆಸಿದ ಘಟನೆ ಹರ್ಯಾಣದ (Haryana) ಪಾಣಿಪತ್ (Panipat District) ‌ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವದಲ್ಲಿ ನಡೆದಿದೆ ಎಂದು ಪೊಲೀಸರು (Haryana Police) ತಿಳಿಸಿದ್ದಾರೆ. ಆರೋಪಿಗಳು, ಚಾಕುಗಳು ಮತ್ತು ಪಿಸ್ತೂಲ್‌ಗಳೊಂದಿಗೆ ಶಸ್ತ್ರಸಜ್ಜಿತರಾಗಿ, ಮೂರು ಕುಟುಂಬಗಳು ವಾಸಿಸುವ ಮನೆಗೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ನುಗ್ಗಿ 24, 25 ಮತ್ತು 35 ವರ್ಷ ವಯಸ್ಸಿನ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಿಕ ಮನೆಯಲ್ಲಿದ್ದ ನಗದು ಮತ್ತು ಬೆಳ್ಳಿ ಆಭರಣಗಳೊಂದಿಗೆ ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ ನಡೆಸಿ, ದರೋಡೆ ನಡೆಸಿದ ಆರೋಪಿಗಳ ಗ್ಯಾಂಗ್, ಗ್ರಾಮದಿಂದ ತಪ್ಪಿಸಿಕೊಳ್ಳುವಾಗ ವ್ಯಕ್ತಿಯೊಬ್ಬನಿಂದ ಸಾವಿರ ರೂ. ದರೋಡೆ ಮಾಡಿದೆ. ಅಲ್ಲದೇ, ಆತನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನೆಡಸಿದೆ. ಬಳಿಕ ತೀವ್ರ ಗಾಯಗೊಂಡಿದ್ದ ಆಕೆ ಬಳಿಕ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಅತ್ಯಾಚಾರಕ್ಕೊಳಗಾದ ಕುಟುಂಬದ ಸದಸ್ಯರಿಗೆ ತಿಂಗಳ ಹಿಂದೆ ಅವರು ವಾಸವಿರುವ ಸ್ಥಳವನ್ನು ಜಾಗ ಖಾಲಿ ಮಾಡುವಂತೆ ಗುಂಪೊಂದು ಬೆದರಿಕೆ ಹಾಕಿತ್ತು. ಅದೇ ಗುಂಪು ಈ ಕೃತ್ಯವನ್ನು ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Sexual Abuse: ಯುವತಿಯನ್ನು ಅಪಹರಿಸಿ, 14 ವರ್ಷ ಆಕೆಯನ್ನು ಸೆಕ್ಸ್ ಗುಲಾಮಳನ್ನಾಗಿಟ್ಟುಕೊಂಡಿದ್ದ ಕಿರಾತಕ!

ಮನೆಯಲ್ಲಿ ಎಲ್ಲರು ಮಲಗಿರುವಾಗ ನುಗ್ಗಿದ ಮುಸುಕುಧಾರಿಗಳು, ಮಹಿಳೆಯರ ಗಂಡಂದಿರನ್ನು ಮತ್ತು ಮಕ್ಕಳನ್ನು ಕೋಣೆಯಿಂದ ಹೊರ ಎಳೆದು ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ಬಳಿಕ ಮೂವರು ಮಹಿಳೆಯರ ಮೇಲೆ ಸರದಿ ಪ್ರಕಾರ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತರು ಆರೋಪಿಸಿದ್ದಾರೆ.

ಮುಸುಕುಧಾರಿಗಳ ಗ್ಯಾಂಗ್ ಕುಟುಂಬದ ಸದಸ್ಯರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿತು. ನಂತರ, ಅವರು ನಮ್ಮನ್ನು (ಮಹಿಳೆಯರನ್ನು) ವರಾಂಡಾಕ್ಕೆ ಎಳೆದುಕೊಂಡು ಸರದಿಯಲ್ಲಿ ಅತ್ಯಾಚಾರ ಮಾಡಿದರು. ದನಿ ಎತ್ತದಂತೆ ಬೆದರಿಸಿ ಬೆಳಗಿನ ಜಾವ 4 ಗಂಟೆಯವರೆಗೂ ಚಿತ್ರಹಿಂಸೆ ನೀಡುತ್ತಿದ್ದರು. ಅವರು ತಡವಾಗಿ ನಗದು ಮತ್ತು ಬೆಳ್ಳಿ ಆಭರಣದೊಂದಿಗೆ ಪರಾರಿಯಾದರು ಎಂದು ಸಂತ್ರಸ್ತ ಮಹಿಳೆಯೊಬ್ಬಳು ಪೊಲೀಸರಿಗೆ ತಿಳಿಸಿದ್ದಾಳೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version