Site icon Vistara News

Flood effects | ಭೀಕರ ಮಳೆಗೆ ನಲುಗಿದ ಅಸ್ಸಾಂ, ಮೇಘಾಲಯ: ಪ್ರವಾಹಕ್ಕೆ ಸಿಲುಕಿ 31 ಮಂದಿ ಸಾವು

ASSAM RAIN

ಗುವಾಹಟಿ : ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಅಸ್ಸಾಂನಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಡೀ ರಾಜ್ಯದ 28 ಜಿಲ್ಲೆಗಳಲ್ಲೂ ಭಾರಿ ಮಳೆಯಾಗುತ್ತಿದ್ದು, ಸಾಕಷ್ಟು ಜನರು ಮನೆ, ಮಠಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಭೀಕರ ಮಳೆಯಿಂದಾಗಿ ಪ್ರವಾಹ, ಭೂಕುಸಿತವಾದ್ದರಿಂದ (Flood effects) ಈವರೆಗೂ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹಕ್ಕೆ 2,930 ಗ್ರಾಮಗಳು ತುತ್ತಾಗಿದ್ದು, 19 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ.

ಅಸ್ಸಾಂನ ಬಜಾಲಿ ಜಿಲ್ಲೆಯಲ್ಲಿ ರಣ ಭೀಕರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈವರೆಗೂ 3.35 ಲಕ್ಷ ಮಂದಿ ಪ್ರವಾಹದಿಂದ ಕಂಗಾಲಾಗಿದ್ದು, ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ದಾರಂಗ್ ಜಿಲ್ಲೆಯಲ್ಲೂ ಕೂಡ 2.90 ಲಕ್ಷ ನಿರಾಶ್ರಿತರಿದ್ದು, ಸುಮಾರು 43,338,39 ಕೃಷಿ ಭೂಮಿ ಮಳೆಯಿಂದಾಗಿ ಸಂಪೂರ್ಣ ನಾಶವಾಗಿದೆ.

ಇದನ್ನು ಓದಿ | Rain news| ಮುಂದಿನ ಎರಡು ದಿನ ಭಾರಿಮಳೆ: ಎಲ್ಲೆಲ್ಲಿ ಎಲ್ಲೋ ಅಲರ್ಟ್‌?

ಅಸ್ಸಾಂ ಮಾತ್ರವಲ್ಲದೇ ಮೇಘಾಲಯದಲ್ಲಿ ಭೀಕರ ಮಳೆಯಾಗುತ್ತಿದ್ದು, 19 ಮಂದಿ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಭೂಕುಸಿತ ಉಂಟಾಗಿ ಹಲವು ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ.

ಕರ್ನಾಟಕದಲ್ಲೂ ಸಹ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಇನ್ನು ಎರಡು ಮೂರು ದಿನ ಮಳೆ ಹೀಗೆ ಮುಂದುವರೆಯಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ಮಾತ್ರವದಲ್ಲದೆ ದಕ್ಷಿಣ ಭಾರತದ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಲ್ಲೂ ಭಾರಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.

Exit mobile version