Site icon Vistara News

Modi Mega Roadshow | 3 ಗಂಟೆ, 50 ಕಿ.ಮೀ, 16 ಕ್ಷೇತ್ರಗಳಲ್ಲಿ ಮೋದಿ ರೋಡ್‌ ಶೋ, ಗುಜರಾತ್‌ನಲ್ಲಿ ಪ್ರಧಾನಿ ಇತಿಹಾಸ

Narendra Modi Roadshow In Gujarat

ಗಾಂಧಿನಗರ: ಗುಜರಾತ್‌ ವಿಧಾನಸಭೆ ಚುನಾವಣೆಯು (Gujarat Election) ಬಿಜೆಪಿಗೆ ಮಾತ್ರವಲ್ಲ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪ್ರತಿಷ್ಠೆಯಾಗಿದೆ. ಹಾಗಾಗಿಯೇ, ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿ ೧೬ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ೫೦ ಕಿ.ಮೀ ಮೆಗಾ ರೋಡ್‌ ಶೋ (Modi Mega Roadshow) ನಡೆಸಿದ್ದು, ಇದು ಹೊಸ ದಾಖಲೆಗೆ ಕಾರಣವಾಗಿದೆ ಎಂದು ಬಿಜೆಪಿ ತಿಳಿಸಿದೆ. “ದೇಶದಲ್ಲಿಯೇ ಅತಿ ಹೆಚ್ಚು ದೂರ ರೋಡ್‌ ಶೋ ನಡೆಸಿದ ಮೊದಲ ನಾಯಕ ನರೇಂದ್ರ ಮೋದಿ” ಎಂದು ಬಿಜೆಪಿ ಹೇಳಿದೆ.

ಗುರುವಾರ ಸಂಜೆ (ಡಿಸೆಂಬರ್‌ ೧) ನರೋದಾ ಗಾಮ್‌ನಿಂದ ರೋಡ್‌ ಶೋ ಆರಂಭವಾಗಿದ್ದು, ಸಬರಮತಿವರೆಗೆ ಸಾಗಿದೆ. ಸುಮಾರು ಮೂರುವರೆ ತಾಸು ರೋಡ್‌ಶೋ ಸಾಗಿದ್ದು, ಗಾಂಧಿನಗರ ದಕ್ಷಿಣ ಕ್ಷೇತ್ರದಲ್ಲಿ ಅಂತ್ಯವಾಗಿದೆ. ಭಾಪೂನಗರ, ನಿಕೋಲ್‌, ಅಮರೈವಾಡಿ, ಮಣಿನಗರ, ನರನ್‌ಪುರ ಸೇರಿ ೧೮ ವಿಧಾನಸಭೆ ಕ್ಷೇತ್ರಗಳ ಮೂಲಕ ಓಪನ್‌ ಎಸ್‌ಯುವಿ ಕಾರ್‌ನಲ್ಲಿ ರೋಡ್‌ ಶೋ ಕೈಗೊಂಡಿದ್ದಾರೆ. ಸುಮಾರು ೩೫ ಕಡೆ ವಾಹನ ನಿಲ್ಲಿಸಿ, ಜನರತ್ತ ಕೈ ಬೀಸಿದ ಅವರು, ಇದೇ ವೇಳೆ ಅಹಮದಾಬಾದ್‌ನಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದರು.  

ಗುಜರಾತ್‌ನಲ್ಲಿ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಡಿಸೆಂಬರ್‌ ೫ರಂದು ಎರಡನೇ ಹಂತದ ಮತದಾನ ನಡೆಯಲಿದೆ. ೧೯೯೫ರಿಂದಲೂ ಬಿಜೆಪಿಯೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಸತತ ಏಳನೇ ಬಾರಿಗೆ ಗದ್ದುಗೆಯೇರುವ ಮೂಲಕ ಇತಿಹಾಸ ಸೃಷ್ಟಿಸಲು ಮುಂದಾಗಿದೆ.

ಇದನ್ನೂ ಓದಿ | Gujarat Election | ಪ್ರಧಾನಿಗೆ ನಿಂದಿಸಲು ಸ್ಪರ್ಧೆಗೆ ಬಿದ್ದಿದ್ದಾರೆ ಕಾಂಗ್ರೆಸಿಗರು! ಖರ್ಗೆ ‘ರಾವಣ’ ಹೇಳಿಕೆಗೆ ಮೋದಿ ತಿರುಗೇಟು!

Exit mobile version