Site icon Vistara News

Nepal Earthquake: ನೇಪಾಳದಲ್ಲಿ ಪ್ರಬಲ ಭೂಕಂಪಕ್ಕೆ 128 ಜನ ಬಲಿ; ಭಾರತದಲ್ಲೂ ಕಂಪನ

Earthquake In Nepal

6.4-magnitude earthquake jolts in Nepal; kills 69 People

ಕಠ್ಮಂಡು: ನೇಪಾಳದಲ್ಲಿ ರಾತ್ರೋರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು, 128 ಜನ ಮೃತಪಟ್ಟಿದ್ದಾರೆ. ನೂರಾರು ಜನ ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯಾಚರಣೆ (Rescue Operation) ನಡೆಯುತ್ತಿದೆ. ನೇಪಾಳದಲ್ಲಿ ಶುಕ್ರವಾರ (ನವೆಂಬರ್‌ 3) ರಾತ್ರಿ 11.30ರ ಸುಮಾರಿಗೆ ಭೂಕಂಪ (Nepal Earthquake) ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 6.4 ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 1.9 ಲಕ್ಷ ಜನ ಇರುವ ಜಜರ್‌ಕೋಟ್‌ ಜಿಲ್ಲೆಯಲ್ಲಿ ಭೂಮಿ ನಲುಗಿದ್ದು, 60 ಜನ ಮೃತಪಟ್ಟಿದ್ದಾರೆ. ಇನ್ನು ಈ ಜಿಲ್ಲೆಯ ಪಕ್ಕದಲ್ಲಿರುವ ರುಕುಮ್‌ ಜಿಲ್ಲೆಯಲ್ಲೂ ಭೂಕಂಪನಕ್ಕೆ 68 ಜನ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನೂರಾರು ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಹರಸಾಹಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ನೂರಾರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೇಪಾಳದಲ್ಲಿ ಭೂಕಂಪ ಸೃಷ್ಟಿಸಿದ ಭೀತಿ

ದೆಹಲಿ ಸೇರಿ ಹಲವೆಡೆ ಕಂಪಿಸಿದ ಭೂಮಿ

ನೇಪಾಳದಲ್ಲಿ ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ದೆಹಲಿ, ಬಿಹಾರ, ಉತ್ತರ ಪ್ರದೇಶ, ಗುರುಗ್ರಾಮ ಸೇರಿ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾತ್ರೋರಾತ್ರಿ ಭೂಕಂಪ ಸಂಭವಿಸಿದ ಕಾರಣ ಜನ ಇಡೀ ರಾತ್ರಿ ನಿದ್ದೆ ಮಾಡದೆ, ಮನೆ ಹೊರಗಡೆಯೇ ಕಾಲ ಕಳೆದರು ಎಂದು ತಿಳಿದುಬಂದಿದೆ.

ಕರಾಳ ಅನುಭವ ಬಿಚ್ಚಿಟ್ಟ ನೊಯ್ಡಾ ನಿವಾಸಿ

ಇದನ್ನೂ ಓದಿ: Delhi Earthquake: ದೆಹಲಿ ಸೇರಿ ಹಲವೆಡೆ ಭಾರಿ ಭೂಕಂಪ; ನಿದ್ದೆ ಬಿಟ್ಟು ಕುಳಿತ ಜನ

ಭೂಮಿ ಕಂಪಿಸಿದ ಅನುಭವವಾಗುತ್ತಲೇ ದೆಹಲಿ ಹಾಗೂ ಸುತ್ತಮುತ್ತಲಿನ ನಗರಗಳ ಜನ ಮನೆಯಿಂದ ಹೊರಗೆ ಬಂದರು. ಮನೆಯಲ್ಲಿರುವ ಫ್ಯಾನ್‌ ಸೇರಿ ಹಲವು ವಸ್ತುಗಳು ಅಲುಗಾಡುತ್ತಲೇ ಜನ ಆತಂಕ್ಕೀಡಾದರು. ಹಲವೆಡೆ ಇನ್ನೂ ಒಂದಷ್ಟು ಜನ ಮನೆಯೊಳಗೆ ಹೋಗದೆ, ಚಳಿಯಲ್ಲೂ ಮನೆಯ ಹೊರಗೆಯೇ ಮಲಗಿದರು. ಆದಾಗ್ಯೂ, ಭೂಕಂಪದಿಂದ ಭಾರತದಲ್ಲಿ ಯಾವುದೇ ಆಸ್ತಿ ಪಾಸ್ತಿಗೆ ಹಾನಿಯುಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ. .

ಇದನ್ನೂ ಓದಿ: Afghan Earthquake: ಅಫಘಾನಿಸ್ತಾನದಲ್ಲಿ ಸರಣಿ ಭೂಕಂಪ, ಮೃತರ ಸಂಖ್ಯೆ 2000ಕ್ಕೆ ಏರಿಕೆ

ಕಳೆದ ತಿಂಗಳು ಅಫಘಾನಿಸ್ತಾನದ ಹೆರಾತ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ 2 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿತ್ತು. ತಾಲಿಬಾನ್ (Taliban Administration) ಆಡಳಿತದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಅಫಘಾನಿಸ್ತಾನಕ್ಕೆ ಈ ಭೂಕಂಪವು ಭಾರೀ ಹೊಡೆತ ನೀಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version