ನವದೆಹಲಿ: “ಯಶಸ್ಸಿಗೆ ಪರಿಶ್ರಮದ ಹೊರತಾಗಿ ಯಾವುದೇ ಅಡ್ಡ ದಾರಿ ಇಲ್ಲ” ಎಂಬ ಮಾತಿದೆ. ಪರಿಶ್ರಮದ ಹೊರತಾಗಿಯೂ ಕೆಲವೊಮ್ಮೆ ವೈಫಲ್ಯ ಎನ್ನುವುದಕ್ಕಿಂತ ಹಿನ್ನಡೆ ಅನುಭವಿಸುತ್ತೇವೆ. ಆ ಹಿನ್ನಡೆಗಳನ್ನೂ ಮೆಟ್ಟಿ ನಿಂತು ಶ್ರಮ ವಹಿಸಿದರೆ, ಮರಳಿ ಯತ್ನವ ಮಾಡಿದರೆ ಖಂಡಿತವಾಗಿಯೂ ಯಶಸ್ಸು ನಮ್ಮದಾಗುತ್ತದೆ. ಈ ಮಾತಿಗೆ ಉದಾಹರಣೆ ಎಂಬಂತೆ ದೆಹಲಿಯ ಯುವಕನೊಬ್ಬ (Vatsal Nahata) ಸತತವಾಗಿ ವಿಶ್ವ ಬ್ಯಾಂಕ್ (World Bank)ಗೆ 600 ಮೇಲ್‌ಗಳನ್ನು ಮಾಡಿ, 80 ಬಾರಿ ಕರೆ ಮಾಡಿ, ಕೊನೆಗೂ ವಿಶ್ವ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾನೆ.
ಹಾಗಂತ, ದೆಹಲಿ ಮೂಲದ, 23 ವರ್ಷದ ವತ್ಸಲ್ ನಹಾತ ಅವರು ಬರೀ ಇ-ಮೇಲ್ಸ್ ಹಾಗೂ ಪದೇಪದೆ ಕರೆ ಮಾಡುವ ಮೂಲಕ ಉದ್ಯೋಗ ಗಿಟ್ಟಿಸಿಕೊಂಡಿಲ್ಲ. ಅಮೆರಿಕದ ಯಾಲೆ ವಿಶ್ವವಿದ್ಯಾಲಯದಲ್ಲಿ 2020ರಲ್ಲಿ ಪದವಿ ಪಡೆದಿದ್ದಾರೆ. ಆದರೆ, ಕೊರೊನಾ ಬಿಕ್ಕಟ್ಟು ಉಂಟುಮಾಡಿದ ಕಾರಣ ಇವರಿಗೆ ಉದ್ಯೋಗ ಪಡೆಯುವುದು ಕಷ್ಟವಾಗಿತ್ತು. ಆದರೆ, ವಿಶ್ವ ಬ್ಯಾಂಕ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವ ದಿಸೆಯಲ್ಲಿ ಸತತವಾಗಿ ಕರೆ, ಇ-ಮೇಲ್ ಮಾಡಿ ಕೊನೆಗೂ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
“ಯಾಲೆ ವಿವಿಯಲ್ಲಿ ಪದವಿ ಪಡೆದ ನನಗೆ ಸುಲಭವಾಗಿ ಉದ್ಯೋಗ ಸಿಗುವ ಭರವಸೆ ಇತ್ತು. ಅದರಲ್ಲೂ, ವಿಶ್ವ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುವ ಕನಸಿತ್ತು. ಆದರೆ, ಕೊರೊನಾ ಬಿಕ್ಕಟ್ಟು ನನ್ನ ಕನಸಿಗೆ ತಡೆಯೊಡ್ಡಿತು. ಇದರಿಂದ ನನಗೆ ರಾತ್ರಿ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ವಿಶ್ವಬ್ಯಾಂಕ್ ಹಾಗೂ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಅಧಿಕಾರಿಗಳಿಗೆ ಕರೆ ಮಾಡುವುದು, ಮೇಲ್ ಮಾಡುತ್ತಿದ್ದೆ. ನನ್ನಲ್ಲಿರುವ ಕೌಶಲಗಳ ಬಗ್ಗೆ ಮನವರಿಕೆ ಮಾಡುತ್ತಿದ್ದೆ. ಕೊನೆಗೂ ನನಗೆ ಈಗ ವಿಶ್ವ ಬ್ಯಾಂಕ್‌ನಲ್ಲಿ ಕೆಲಸ ಸಿಕ್ಕಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ | Success guide | ಯಶಸ್ಸೆಂದರೇನು? ವಾರೆನ್ ಬಫೆಟ್‌ನ ಸರಳ ವ್ಯಾಖ್ಯಾನ