ನವದೆಹಲಿ: ಐಟಿ ವಲಯದ (IT Sector) ಪ್ರಮುಖ ಕಂಪನಿ ಇನ್ಫೋಸಿಸ್‌ನ (Infosys) ತ್ರೈಮಾಸಿಕ ನಿವ್ವಳ ಲಾಭದಲ್ಲಿ ಶೇ.7.3ರಷ್ಟು ಕುಸಿತವಾಗಿದೆ(Q3 Net Profit Falls). ಆದರೆ, ಆದಾಯದಲ್ಲಿ ಶೇ.1.3ರಷ್ಟು ಏರಿಕೆಯಾಗಿದೆ. 2023ರ ಡಿಸೆಂಬರ್‌ಕ್ಕೆ ಮುಕ್ತಾಯವಾದ ಮೂರನೇ ತ್ರೈಮಾಸಿಕ 6,106 ಕೋಟಿ ರೂ. ನಿವ್ವಳ ಲಾಭ ದಾಖಲಿಸಿದೆ. ಆದಾಗ್ಯೂ, ಆದಾಯವು 1.3 ಶೇಕಡಾ ಏರಿಕೆಯಾಗಿದ್ದು, 38,821 ಕೋಟಿ ರೂ.ಗೆ ಹೆಚ್ಚಳವಾಗಿದೆ(Revenue). ಕಳೆದ ವರ್ಷ 38,318 ಕೋಟಿ ಆದಾಯ ಬಂದಿತ್ತು. ಹಾಗೆಯೇ, ಕಳೆದ ವರ್ಷ ನಿವ್ವಳ ಲಾಭವು 6,586 ಕೋಟಿ ರೂ. ಇತ್ತು.
ಇನ್ಫೋಸಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ತನ್ನ ಆದಾಯದ ಬೆಳವಣಿಗೆಯ ಮಾರ್ಗದರ್ಶನವನ್ನು ಈ ಹಿಂದೆ ಅಂದಾಜಿಸಲಾದ 1-2.5 ಶೇಕಡಾದಿಂದ 1.5-2 ಶೇಕಡಾಗೆ ಪರಿಷ್ಕರಿಸಿದೆ. ಬೆಂಗಳೂರು ಮೂಲದ ಸೆಮಿಕಂಡಕ್ಟರ್ ವಿನ್ಯಾಸ ಸೇವಾ ಪೂರೈಕೆದಾರ ಇನ್‌ಸೆಮಿ ಕಂಪನಿಯನ್ನು ಸುಮಾರು 280 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಮಂಡಳಿಯು ಅನುಮೋದಿಸಿದೆ ಎಂದು ಕಂಪನಿ ತಿಳಿಸಿದೆ. 2024 ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇನ್‌ಸೆಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕಂಪನಿಯು ಷೇರುಪೇಟೆಗೆ ತಿಳಿಸಿದೆ.
ಇನ್ಫೋಸಿಸ್ ಸಹ ಸಂಸ್ಥಾಪಕ ಶಿಬುಲಾಲ್ ಪುತ್ರ, ಸೊಸೆಯಿಂದ ಷೇರು ಮಾರಾಟ
ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಎಸ್‌ಡಿ ಶಿಬುಲಾಲ್ (SD Shibulal) ಅವರ ಪುತ್ರ ಶ್ರೇಯಸ್ ಶಿಬುಲಾಲ್ (Shreyas Shibulal) ಮತ್ತು ಸೊಸೆ ಭೈರವಿ ಮಧುಸೂಧನ್ ಶಿಬುಲಾಲ್ (Bhairavi Madhusudhan Shibulal) ಅವರು ತಮ್ಮ ಪಾಲಿನ ಇನ್ಫೋಸಿಸ್ ಷೇರುಗಳನ್ನು ಮೂರು ತಿಂಗಳ ಹಿಂದೆ ಮಾರಾಟ ಮಾಡಿದ್ದಾರೆ. ಅಕ್ಟೋಬರ್ 19ರಂದು ಮುಕ್ತ ಮಾರುಕಟ್ಟೆಯಲ್ಲಿ 435 ಕೋಟಿ ರೂ. ಮೌಲ್ಯ ಇನ್ಫಿ ಷೇರ್‌ಗಳನ್ನು (Infosys Shares) ಮಾರಿದ್ದಾರೆ ಎಂದು ಇನ್ಫೋಸಿಸ್ ಷೇರುಪೇಟೆಗೆ ತಿಳಿಸಿತ್ತು.
ಷೇರು ಪೇಟೆ ವಿನಿಮಯದಲ್ಲಿರುವ ಮಾಹಿತಿಯ ಪ್ರಕಾರ, ಎಸ್‌ಡಿ ಶಿಬುಲಾಲ್ ಅವರ ಪುತ್ರ ಶ್ರೇಯಸ್ ಶಿಬುಲಾಲ್ ಅವರು 1,433.5168 ರೂ. ಮೌಲ್ಯದ 23,70,435 ಷೇರ್ ಮಾರಾಟ ಮಾಡಿದ್ದಾರೆ. ಅಂದರೆ, 339.80 ಕೋಟಿ ರೂ. ಮೌಲ್ಯದ ಷೇರುಗಳಾಗಿವೆ. ಈ ಷೇರುಗಳನ್ನು ಮಾರಾಟ ಮಾಡುವ ಮೊದಲು, ಶ್ರೇಯಸ್ ಶಿಬುಲಾಲ್ 2,37,04,350 ಷೇರುಗಳನ್ನು ಹೊಂದಿದ್ದರು, ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ ಶೇಕಡಾ 0.64 ರಷ್ಟಿತ್ತು. ಈಗ, ಇನ್ಫೋಸಿಸ್‌ನಲ್ಲಿ ಷೇರುಗಳನ್ನು ಮಾರಾಟ ಮಾಡಿದ ನಂತರ, ಅವರ ಬಳಿ ಈಗ 2,13,33,915 ಇನ್ಫಿ ಷೇರ್ ಹೊಂದಿದ್ದಾರೆ. ಇದು ಕಂಪನಿಯ ಒಟ್ಟು ಪಾವತಿಸಿದ ಬಂಡವಾಳದ 0.58 ಪ್ರತಿಶತವಾಗಿದೆ. ಇದರರ್ಥ, ಎಸ್‌ಡಿ ಶಿಬುಲಾಲ್ ಅವರ ಮಗ ಗುರುವಾರ ಭಾರತೀಯ ಐಟಿ ಮೇಜರ್‌ನಲ್ಲಿ ಶೇಕಡಾ 03.06 ರಷ್ಟು ಪಾಲನ್ನು ಮಾರಾಟ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Infosys: ಕಾಗ್ನಿಜೆಂಟ್‌ಗೆ ಇನ್ಫೋಸಿಸ್ ಅಧಿಕಾರಿಗಳು ಜಂಪ್; ಕಿಡಿ ಕಾರಿದ ಐಟಿ ಕಂಪನಿ