ಗೋವಾ: ಗೋವಾ ಕಾಂಗ್ರೆಸ್‌ನ ಕೆಲವು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಧಾನಸಭೆ ಅಧಿವೇಶನ ಆರಂಭವಾಗಲು ಒಂದು ದಿನ ಉಳಿದಿರುವಂತೆ ಈ ಬೆಳವಣಿಗೆ ನಡೆದಿದೆ.
ಪ್ರಸ್ತುತ ಗೋವಾ ಕಾಂಗ್ರೆಸ್‌ನಲ್ಲಿ ೧೧ ಶಾಸಕರು ಇದ್ದಾರೆ. ಇವರಲ್ಲಿ 7 ಮಂದಿ ಕಾಂಗ್ರೆಸ್‌ನಿಂದ ಆಚೆ ಕಾಲಿಟ್ಟಿದ್ದು, ಬಿಜೆಪಿಯೊಡನೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಕಳೆದ ವರ್ಷ ಚುನಾವಣೆಯಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ದಿಗಂಬರ ಕಾಮತ್ ಅವರೂ ಇದ್ದಾರೆಂದು ಹೇಳಲಾಗಿದೆ. ಶನಿವಾರ ನಡೆದ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಭಾಗವಹಿಸಿರಲಿಲ್ಲ.
ಇದು ಬಿಜೆಪಿ ಹಬ್ಬಿಸುತ್ತಿರುವ ರೂಮರ್ ಅಷ್ಟೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಹೇಳಿದ್ದಾರೆ. ಸೋಮವಾರದಿಂದ ಎರಡು ವಾರಗಳ ಬಜೆಟ್ ಅಧಿವೇಶನ ನಡೆಯಲಿದೆ.