Site icon Vistara News

Viral Video: 70ನೇ ವಯಸ್ಸಲ್ಲೂ ಛತ್ತೀಸ್‌ಗಢ ಸಚಿವ ಟಿ.ಎಸ್‌.ಸಿಂಗ್‌ ದೇವ್‌ ಸಾಹಸ, ಆಸ್ಟ್ರೇಲಿಯಾದಲ್ಲಿ ಸ್ಕೈಡೈವ್

70-year-old Chhattisgarh minister goes skydiving in Australia, Video Goes Viral

70-year-old Chhattisgarh minister goes skydiving in Australia, Video Goes Viral

ಕ್ಯಾನ್‌ಬೆರಾ: ವಯಸ್ಸು ಕೇವಲ ನಂಬರ್‌ (Age Is Just A Number) ಎಂಬ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ. ಎಷ್ಟೇ ವಯಸ್ಸಾದರೂ ಮನಸ್ಸನ್ನು ಯುವಕನಂತೆ ಇಟ್ಟುಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಈ ಮಾತಿಗೆ ವಿರುದ್ಧ ಎಂಬಂತೆ ಛತ್ತೀಸ್‌ಗಢ ಸಚಿವ ಟಿ.ಎಸ್‌.ಸಿಂಗ್‌ ದೇವ್‌ ಅವರು ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್‌ (Viral Video) ಮಾಡುವ ಮೂಲಕ ವಯಸ್ಸು ಕೇವಲ ನಂಬರ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಹೌದು, ಛತ್ತೀಸ್‌ಗಢ ಆರೋಗ್ಯ ಸಚಿವರಾದ ಟಿ.ಎಸ್‌.ಸಿಂಗ್‌ ದೇವ್‌ ಅವರು ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್‌ ಮಾಡಿದ್ದು, ಈ ವಿಡಿಯೊ ಈಗ ವೈರಲ್‌ ಆಗಿದೆ. 70ನೇ ವಯಸ್ಸಿನಲ್ಲೂ ಇಂತಹ ಸಾಹಸ ಮಾಡಿದ ಸಚಿವರ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನುರಿತ ಸ್ಕೈಡೈವ್‌ ತಜ್ಞ, ಮಾರ್ಗದರ್ಶಕರೊಬ್ಬರ ಜತೆ ಸಾವಿರಾರು ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಿಂದ ಸ್ಕೈಡೈವ್‌ ಮಾಡಿದ್ದು ಮೈನವಿರೇಳಿಸುವಂತಿದೆ.

ಸಾಹಸದ ವಿಡಿಯೊ ನೋಡಿ

ಸ್ಕೈಡೈವಿಂಗ್‌ ಮಾಡಿದ ವಿಡಿಯೊ ಹಂಚಿಕೊಂಡಿರುವ ಟಿ.ಎಸ್‌.ಸಿಂಗ್‌ ದೇವ್‌, “ನನಗೆ ಆಸ್ಟ್ರೇಲಿಯಾದಲ್ಲಿ ಸ್ಕೈಡೈವಿಂಗ್ ಮಾಡುವ ಅದ್ಭುತ ಅವಕಾಶ ದೊರೆಯಿತು. ಇದೊಂದು ರೋಮಾಂಚನಕಾರಿ ಸಾಹಸವಾಗಿತ್ತು. ಹೊಸ ಅನುಭವ ಪಡೆದ ಖುಷಿ ನನ್ನದಾಯಿತು” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: ಹಣೆಯ ಮೇಲೆ ಗಂಡನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಬೆಂಗಳೂರು ಮಹಿಳೆ, True Love ಎಂದ ಜನ

ವಾವ್‌ ಎಂದ ಛತ್ತೀಸ್‌ಗಢ ಸಿಎಂ

ಟಿ.ಎಸ್‌.ಸಿಂಗ್‌ ದೇವ್‌ ಅವರ ಸಾಹಸವನ್ನು ಕಂಡು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಅವರು ವಾವ್‌ ಎಂದಿದ್ದಾರೆ. “ವಾಹ್‌ ಮಹಾರಾಜ ಸಾಹೇಬ್.‌ ನೀವು ಅದ್ಭುತ ಸಾಹಸ ಮಾಡಿದ್ದೀರಿ. ಆ ಮೂಲಕ ನಿಮ್ಮ ಸ್ಫೂರ್ತಿ ಎತ್ತರದಲ್ಲಿದೆ ಎಂಬುದನ್ನು ಸಾಬೀತುಪಡಿಸಿದ್ದೀರಿ. ನಿಮಗೆ ಶುಭವಾಗಲಿ” ಎಂದು ಟ್ವೀಟ್‌ ಮಾಡಿದ್ದಾರೆ. ಅಂದಹಾಗೆ. ಟಿ.ಎಸ್‌.ಸಿಂಗ್‌ ದೇವ್‌ ಅವರನ್ನು ಸುರ್ಗುಜಾದ ಮಹಾರಾಜ ಎಂದೇ ಕರೆಯಲಾಗುತ್ತದೆ.

Exit mobile version