Site icon Vistara News

₹ 76,390 ಕೋಟಿ ಬೆಲೆಯ ದೇಶಿ ತಯಾರಿಯ ರಕ್ಷಣಾ ಸಾಮಗ್ರಿ ಖರೀದಿ

defence

ನವ ದೆಹಲಿ: ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಭಾರತದಲ್ಲಿ ತಯಾರಾದ ರಕ್ಷಣಾ ಸಾಮಗ್ರಿಗಳು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ಖರೀದಿಸುವ ₹ 76,390 ಕೋಟಿ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ.

ಕಠಿಣ ಭೂಪ್ರದೇಶದಲ್ಲಿ ಸಂಚರಿಸುವ ಫೋರ್ಕ್‌ಲಿಫ್ಟ್ ಟ್ರಕ್‌ಗಳು, ಸೇತುವೆ ರಚಿಸುವ ಟ್ಯಾಂಕ್‌ಗಳು, ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿಗಳು, ಶಸ್ತ್ರಾಸ್ತ್ರ ಪತ್ತೆ ಮಾಡುವ ರಾಡಾರ್‌ಗಳನ್ನು ಭಾರತೀಯ ಸೇನೆಗಾಗಿ ಖರೀದಿಸಲಾಗುತ್ತಿದೆ. ಇದೆಲ್ಲದರಲ್ಲೂ ಸ್ಥಳೀಯ ವಿನ್ಯಾಸ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ಸೇರಿದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ), ಸಶಸ್ತ್ರ ಪಡೆಗಳ ₹ 76,390 ಕೋಟಿ ಮೌಲ್ಯದ ಖರೀದಿ ಪ್ರಸ್ತಾವನೆಯನ್ನು ಅಂಗೀಕರಿಸಿತು. ʼಆತ್ಮನಿರ್ಭರ ಭಾರತ’ ಅಭಿಯಾನಕ್ಕೆ ಉತ್ತೇಜನ ನೀಡುವ ʼಬೈ ಆಂಡ್‌ ಮೇಕ್‌ ಇಂಡಿಯನ್‌ʼ ಹಾಗೂ ʼಬೈ ಇಂಡಿಯನ್‌ʼ ವಿಭಾಗಗಳಲ್ಲಿ ಈ ಖರೀದಿ ನಡೆದಿದೆ.

ಇದನ್ನೂ ಓದಿ: INS VIKRANT ಆಪರೇಷನ್‌ಗೆ ರೆಡಿ, 26 ಯುದ್ಧ ವಿಮಾನ ಖರೀದಿಗೆ ಮುಂದಾದ ಭಾರತ

ಭಾರತೀಯ ನೌಕಾಪಡೆಗೆ ಸುಮಾರು ₹36,000 ಕೋಟಿಗಳ ಅಂದಾಜು ವೆಚ್ಚದಲ್ಲಿ ಮುಂದಿನ ಪೀಳಿಗೆಯ ಕಾರ್ವೆಟ್‌ಗಳ (ಇವು ಕಣ್ಗಾವಲು ನೌಕೆಗಳು) ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಇವು ಬಹುಮುಖ ಕಾರ್ಯಕ್ಕೆ ಒದಗುತ್ತವೆ. ಕಣ್ಗಾವಲು ಕಾರ್ಯಾಚರಣೆಗಳು, ಬೆಂಗಾವಲು ಕಾರ್ಯಾಚರಣೆಗಳು, ಶತ್ರುನೌಕೆಗಳ ತಡೆಗಟ್ಟುವಿಕೆ ಕಾರ್ಯಾಚರಣೆ, ಶೋಧ ಮತ್ತು ದಾಳಿ, ಕರಾವಳಿ ರಕ್ಷಣೆ ಇವುಗಳ ಕಾರ್ಯ. ಹಡಗು ನಿರ್ಮಾಣದ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತೀಯ ನೌಕಾಪಡೆಯ ಹೊಸ ಆಂತರಿಕ ಅಗತ್ಯಗಳಿಗಾಗಿ ಈ NGC ಗಳನ್ನು ನಿರ್ಮಿಸಲಾಗುತ್ತಿದೆ. ಇದು ಸರ್ಕಾರದ ʼSAGARʼ (ಪ್ರಾಂತೀಯ ಸರ್ವರಿಗೂ ಭದ್ರತೆ ಮತ್ತು ಬೆಳವಣಿಗೆ) ಉಪಕ್ರಮಕ್ಕೆ ಮತ್ತಷ್ಟು ಕೊಡುಗೆ ನೀಡಲಿದೆ.

ನವರತ್ನ ಸಿಪಿಎಸ್‌ಇ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ ತಯಾರಿಯ ಡೋರ್ನಿಯರ್ ವಿಮಾನಗಳು ಮತ್ತು Su-30 MKI ಏರೋ-ಎಂಜಿನ್‌ಗಳ ತಯಾರಿಕೆಗೆ ಸಹ ಒಪ್ಪಿಗೆ ನೀಡಲಾಗಿದೆ. ವಿಶೇಷವಾಗಿ ಏರೋ-ಎಂಜಿನ್‌ಗಳಲ್ಲಿ ಸ್ವದೇಶಿಕರಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಭಾರತೀಯ ನೌಕಾದಳ ವಿಶ್ವದಲ್ಲೇ ಅತ್ಯಂತ ಸಶಕ್ತ: ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್

ರಕ್ಷಣಾ ಕ್ಷೇತ್ರದಲ್ಲಿ ಡಿಜಿಟಲ್ ಸುಧಾರಣೆ ಆಗಬೇಕು ಎಂಬ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ, ‘ಬೈ ಇಂಡಿಯನ್‌ʼ ವರ್ಗದಡಿಯಲ್ಲಿ ʼಡಿಜಿಟಲ್ ಕೋಸ್ಟ್ ಗಾರ್ಡ್’ ಯೋಜನೆಯನ್ನು DAC ಅನುಮೋದಿಸಿದೆ. ಈ ಯೋಜನೆಯ ಅಡಿಯಲ್ಲಿ, ವಿವಿಧ ಭೂ, ವಾಯು ಕಾರ್ಯಾಚರಣೆಗಳು, ಸಾಗಣೆ, ಹಣಕಾಸು ಮಾನವ ಸಂಪನ್ಮೂಲ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆಯೂ ಇದರಲ್ಲಿ ಅಡಕವಾಗಿದೆ.

Exit mobile version