Site icon Vistara News

ಟ್ರಕ್‌ ಡಿಕ್ಕಿಯಾದ ತೀವ್ರತೆಗೆ ಆಟೋ ಅಪ್ಪಚ್ಚಿ; ಸ್ಥಳದಲ್ಲೇ 9 ಮಂದಿ ದುರ್ಮರಣ

Bihar Accident

8 killed, several injured after autorickshaw hit by another vehicle in Bihar

ಪಟನಾ: ಬಿಹಾರದಲ್ಲಿ ಬುಧವಾರ ಬೆಳಗಿನ ಜಾವ ಭೀಕರ ಅಪಘಾತ (Bihar Accident) ಸಂಭವಿಸಿದ್ದು, 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 5 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಲಾಖಿಸರಾಯ್‌ (Lakhisarai District) ಜಿಲ್ಲೆಯಲ್ಲಿ ಸಿಎನ್‌ಜಿ ಆಟೋ ಹಾಗೂ ಟ್ರಕ್‌ ಡಿಕ್ಕಿಯಾಗಿದ್ದು, ಆಟೋದಲ್ಲಿದ್ದ ೫ ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಾಮಗಢ ಪೊಲೀಸ್‌ ಠಾಣೆ ವ್ಯಾಪ್ತಿಯ ಜುಲೋನಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 30ರ ಬಳಿ ಅಪಘಾತ ಸಂಭವಿಸಿದೆ. “ನನ್ನ ಸಂಬಂಧಿಯಾದ ಮನೋಜ್‌ ಕುಮಾರ್‌ ಆಟೋ ಚಾಲಕನಾಗಿದ್ದು, ಆತ ಹಲ್ಸಿಯಿಂದ ಲಾಖಿಸರಾಯ್‌ಗೆ ಕೆಲ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ. ಜುಲೋನಾ ಗ್ರಾಮದ ಬಳಿ ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಆಟೋಗೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಆಟೋ ನಜ್ಜುಗುಜ್ಜಾಗಿದ್ದು, 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ” ಎಂದು ಆಟೋ ಚಾಲಕನ ಸಂಬಂಧಿ ಅನಿಲ್‌ ಮಿಸ್ರಿ ಎಂಬುವರು ಮಾಹಿತಿ ನೀಡಿದ್ದಾರೆ.

ಗಾಯಗೊಂಡಿರುವ 5 ಜನರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಪಟನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಡೆಪ್ಯುಟಿ ಸೂಪರಿಂಟೆಂಡೆಂಟ್‌ ಅಮಿತ್‌ ಕುಮಾರ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಘಾತದ ಬಳಿಕ ಟ್ರಕ್‌ ಚಾಲಕನು ಪರಾರಿಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Road Accident : ಟ್ರ್ಯಾಕ್ಟರ್‌- ಬಸ್‌ ನಡುವೆ ಭೀಕರ ಅಪಘಾತ; ಒಬ್ಬ ಸಾವು, 6 ಮಂದಿ ಗಂಭೀರ

ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುರಲಗುಂಜಿ ರಸ್ತೆಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ (Road Accident) ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ರಾಮಲಿಂಗ್ ಮುತ್ಗೇಕರ್ (20) ಹನುಮಂತ ಪಾಟೀಲ್ (20) ಮೃತ ಯುವಕರು ಎಂದು ಗುರುತಿಸಲಾಗಿತ್ತು. ನಂದಿಹಾಳ ಗ್ರಾಮಕ್ಕೆ ಸೈನಿಕ ತರಬೇತಿ ಪಡೆಯಲು ಈ ಯುವಕರು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಮೃತ ಯುವಕರಿಬ್ಬರೂ ಬೇಕ್ವಾಡ ಗ್ರಾಮದ ನಿವಾಸಿಗಳಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version