ಬೆಂಗಳೂರು: ಉತ್ತರ ಪ್ರದೇಶ ಸೇರಿ ಐದು ರಾಝೈಘಳ ಚುನಾವಣೆ ಬಳಿಕ ಏರಿಕೆ ಕಾಣಲು ಆರಂಭಿಸಿದ ಪೆಟ್ರೋಲ್ ಹಾಗೂ ಡೀಸೆಲ್ ದರ ಇದೀಗ ಮತ್ತೆ ಹೆಚ್ಚಳ ಕಂಡಿದೆ. ಪೆಟ್ರೋಲ್ ದರವನ್ನು ತೈಲ ಮಾರಾಟ ಕಪನಿಗಳು ಪ್ರತಿ ಲೀಟರ್‌ಗೆ 80 ಪೈಸೆ ಹೆಚ್ಚಳ ಮಾಡುವುದಾಗಿ ತಿಳಿಸಿವೆ. ಕಳೆದ ಒಂಭತ್ತು ದಿನದಲ್ಲಿ ಸತತ ಎಂಟನೇ ಬಾರಿಗೆ ಏರಿಕೆ ಕಂಡಂತಾಂಗಿದೆ.
ಪೆಟ್ರೋಲ್ 80 ಪೈಸೆ ಹೆಚ್ಚಳವಾಗಿದ್ದರೆ ಡೀಸೆಲ್ ಪ್ರತಿ ಲೀಟರ್‌ಗೆ 70 ಪೈಸೆ ಏರಿಕೆ ಕಂಡಿದೆ. ಇದರ ಮೂಲಕ ಕಳೆದೊಂದು ವಾರದಲ್ಲಿ ಪೆಟ್ರೋಲ್ ದರ 4.80 ರೂ. ಏರಿಕೆ ಕಂಡಂತಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ಗೆ 100.21 ರೂ. ಅದರೆ, ಬೆಂಗಳೂರಿನಲ್ಲಿ 105.62 ರೂ. ಆಗಲಿದೆ.(ಕೆಲ ಪ್ರದೇಶಗಳಲ್ಲಿ ದರ ವ್ಯತ್ಯಾಸ ಇರುತ್ತದೆ).
ಕರೊನಾ ಸೋಂಕಿನಿಂದ ಎರಡು ವರ್ಷ ತತ್ತರಿಸಿ ಇದೀಗತಾನೆ ಸಹಜತೆಯತ್ತ ಮರಳುತ್ತಿರುವ ಜನತೆಗೆ ಇಂಧನ ದರ ಏರಿಕೆ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಇತ್ತೀಚೆಗೆ ಯೂಕ್ರೇನ್ ಹಾಗೂ ರಷ್ಯಾ ಯುದ್ಧದ ಸಂದರ್ಭದಲ್ಲೂ ಬೆಲೆ ಹೆಚ್ಚಳದ ಮಾತುಗಳು ಕೇಳಿಬಂದಿದ್ದವು. ಆದರೆ ಈ ಸಮಯದಲ್ಲಿ ಬೆಲೆ ಏರಿಕೆ ಆಗಿರಲಿಲ್ಲ. ಉತ್ತರ ಪ್ರದೇಶ, ಪಂಜಾಬ್, ಗೋವಾ ಸೇರಿ ಐದು ರಾಜ್ಯಗಳ ಚುನಾವಣೆ ಇದ್ದದ್ದರಿಂದ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿಲ್ಲ, ಚುನಾವಣೆ ನಂತರ ಬೆಲೆ ಏರುತ್ತದೆ ಎಂಬ ಚರ್ಚೆಗಳು ನಡೆದಿದ್ದವು. ಅದಕ್ಕೆ ಅನುಗುಣವಾಗಿ ಇದೀಗ ಬೆಲೆ ಹೆಚ್ಚಳವಾಗುತ್ತಿದೆ. ಈ ಹಿಂದೆ 75-80 ರೂ. ಆಸುಪಾಸಿನಲ್ಲಿದ್ದ ತೈಲದರ ನಿರಂತರ ಏರಿಕೆ ಕಂಡು 100 ರೂ. ಆಸುಪಾಸಿನಲ್ಲಿ ಬಂದು ನಿಂತಿತ್ತು. ಇದೀಗ ಮತ್ತೆ ಇಂಧನ ಏರಿಕೆ ರ‍್ಯಾಲಿ ಆರಂಭವಾಗಿದ್ದು, ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಕಾದುನೋಡಬೇಕಿದೆ.