ನವದೆಹಲಿ: 2023ರ ಮೇ ತಿಂಗಳಿನಿಂದ 2000 ರೂ.ಗಳ ನೋಟುಗಳನ್ನು (2000 rs Note) ವಾಪಸ್ ಪಡೆಯುವ ನಿರ್ಧಾರ ಕೈಗೊಂಡ ಬಳಿಕ ಶೇಕಡಾ 97.38 ರಷ್ಟು ನೋಟುಗಳು ಮರಳಿವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸೋಮವಾರ ತಿಳಿಸಿದೆ. ಮೇ 19, 2023 ರಂದು ವ್ಯವಹಾರದ ಅಂತ್ಯದ ವೇಳೆಗೆ 3.56 ಲಕ್ಷ ಕೋಟಿ ರೂಪಾಯಿಯ ನೋಟುಗಳು ಚಲಾವಣೆಯಲ್ಲಿ ಇದ್ದವು. ಅವುಗಳಲ್ಲಿ 9,330 ಕೋಟಿ ರೂ.ಗಳು ಇನ್ನೂ ಮರಳಬೇಕಾಗಿದೆ ಎಂಬುದಾಗಿಯೂ ಆರ್ಬಿಐ ಮಾಹಿತಿ ನೀಡಿದೆ.
ಮೇ 19, 2023ರಂದು 2000 ರೂ.ಗಳ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದಾಗ ವ್ಯವಹಾರದ ಕೊನೆಯಲ್ಲಿ 3.56 ಲಕ್ಷ ಕೋಟಿ ರೂಪಾಯಿಗಳು ಚಲಾವಣೆಯಲ್ಲಿದ್ದವು. ಆ ನೋಟುಗಳ ಒಟ್ಟು ಮೌಲ್ಯವು 2023ರ ಡಿಸೆಂಬರ್ 29ರಂದು ವ್ಯವಹಾರದ ಕೊನೆಯಲ್ಲಿ 9,330 ಕೋಟಿ ರೂ.ಗೆ ಇಳಿದಿದೆ. ಹೀಗಾಗಿ, ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2000 ರೂ.ಗಳ ನೋಟುಗಳಲ್ಲಿ ಶೇಕಡಾ 97.38 ರಷ್ಟು ಹಿಂತಿರುಗಿದೆ ಎಂದು ಆರ್ಸಿಬಿ ತಿಳಿಸಿದೆ.
2,000 ರೂ.ಗಳ ನೋಟುಗಳ ವಿನಿಮಯದ ಸೌಲಭ್ಯವು ಮೇ 19, 2023ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 19 ವಿತರಣಾ ಕಚೇರಿಗಳಲ್ಲಿ ತೆರೆದಿದ್ದವು. 2000 ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿಯೇ ಇರುತ್ತವೆ ಎಂದು ಆರ್ಬಿಐ ಇದೇ ವೇಳೆ ಹೇಳಿದೆ.
2000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಕೇಂದ್ರ ಬ್ಯಾಂಕ್ ಘೋಷಿಸಿತ್ತು. 2000 ರೂ.ಗಳ ನೋಟುಗಳ ಠೇವಣಿ ಅಥವಾ ವಿನಿಮಯದ ಸೌಲಭ್ಯವು ಅಕ್ಟೋಬರ್ 07, 2023 ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು.
ಇದನ್ನೂ ಓದಿ : UPI Payment: ಇಂದಿನಿಂದ UPIಗೆ ಹೊಸ ನಿಯಮ; ಏನೇನು ಬದಲಾವಣೆ ನೋಡಿ
ಅಕ್ಟೋಬರ್ 9, 2023 ರಿಂದ, ಆರ್ಬಿಐ ವಿತರಣಾ ಕಚೇರಿಗಳು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ವ್ಯಕ್ತಿಗಳು / ಸಂಸ್ಥೆಗಳಿಂದ 2000 ರೂ.ಗಳ ನೋಟುಗಳನ್ನು ಸ್ವೀಕರಿಸುತ್ತಿವೆ. ಭಾರತೀಯ ನಾಗರಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ದೇಶದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ ಆರ್ಬಿಐ ವಿತರಣಾ ಕಚೇರಿಗಳಿಗೆ 2000 ರೂ.ಗಳ ನೋಟುಗಳನ್ನು ಕಳುಹಿಸುತ್ತಿದ್ದಾರೆ ” ಎಂದು ಆರ್ಬಿಐ ಹೇಳಿದೆ.
ಡಿಸೆಂಬರ್ ತಿಂಗಳ ಜಿಎಸ್ಟಿ ಸಂಗ್ರಹದಲ್ಲಿ ಭರ್ಜರಿ ಪ್ರಗತಿ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದ್ದು,, 2023 ರ ಡಿಸೆಂಬರ್ನಲ್ಲಿ ಒಟ್ಟು ಗಳಿಕೆ ಗಳಿಕೆ ಕಳೆದ ವರ್ಷಕ್ಕಿಂತ ಶೇಕಡಾ 10.3 ರಷ್ಟು ಏರಿಕೆಯಾಗಿದೆ. ಒಟ್ಟು ಸಂಗ್ರಹ 1,64,882 ಕೋಟಿ ರೂಪಾಯಿ ತಲುಪಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು ಜಿಎಸ್ಟಿ ಸಂಗ್ರಹವು ಶೇಕಡಾ 12 ರಷ್ಟು ಬೆಳವಣಿಗೆಯನ್ನು ಕಂಡಿದೆ. 14.97 ಲಕ್ಷ ಕೋಟಿ ರೂ.ಗೆ ತಲುಪಿದೆ/ ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್-ಡಿಸೆಂಬರ್ 2022) ಸಂಗ್ರಹಿಸಿದ 13.40 ಲಕ್ಷ ಕೋಟಿ ರೂ.ಗಳಿಗೆ ಹೋಲಿಕೆ ಮಾಡಿದರೆ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡಿದ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್ಟಿ ಸಂಗ್ರಹವು 1.66 ಲಕ್ಷ ಕೋಟಿ ರೂಪಾಯಿಗಳಾಗಿತ್ತು. 2023 ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ದಾಖಲಾದ ಸರಾಸರಿ 1.49 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ 12 ರಷ್ಟು ಹೆಚ್ಚಳ ಕಂಡು ಬಂದಿದೆ.
2023 ರ ಡಿಸೆಂಬರ್ ತಿಂಗಳಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್ಟಿ ಆದಾಯ 1,64,882 ಕೋಟಿ ರೂಪಾಯಿ. ಇದರಲ್ಲಿ ಕೆಂದ್ರ ಜಿಎಸ್ಟಿ 30,443 ಕೋಟಿ ರೂಪಾಯಿ ಹಾಗೂ ರಾಜ್ಯ ಜಿಎಸ್ಜಿ 37,935 ಕೋಟಿ ರೂಪಾಯಿ. ಐಜಿಎಸ್ಟಿ (ಸಂಯೋಜಿತ ಜಿಎಸ್ಟಿ) 84,255 ಕೋಟಿ ರೂಪಾಯಿಯಾಗಿದೆ. ಇದರಲ್ಲಿ ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 41,534 ಕೋಟಿ ರೂ.ಗಳು ಮತ್ತು 12,249 ಕೋಟಿ ರೂಪಾಯಿ ಸೆಸ್ ಕೂಡ ಸೇರಿದೆ.
ಹಾಲಿ ಹಣಕಾಸು ವರ್ಷದಲ್ಲಿ ಏಳು ತಿಂಗಳು ಜಿಎಸ್ಟಿ ಸಂಗ್ರಹವು 1.60 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.