ನವದೆಹಲಿ: ಅನಾಮಧೇಯ ವ್ಯಕ್ತಿಗಳಿಂದ ಬರುವ ಕರೆಗಳಿಗೆ ಒಟಿಪಿ ನೀಡಬಾರದು, ಕ್ರೆಡಿಟ್ ಕಾರ್ಡ್, ಎಟಿಎಂ ಕಾರ್ಡ್‌ಗಳ ವಿವರ ನೀಡಬಾರದು ಎಂದು ಜಾಗೃತಿ ಮೂಡಿಸಿದರೂ ಜನ ಲಕ್ಷಾಂತರ ರೂ. ಕಳೆದುಕೊಳ್ಳುತ್ತಾರೆ. ಪಾಸ್‌ವರ್ಡ್‌ಗಳ (Password) ಜಮಾನದಲ್ಲಿ ನಮ್ಮ ಪಾಸ್‌ವರ್ಡ್ (Password Leak) ಪ್ರಮುಖವಾಗಿರುತ್ತದೆ. ಆದರೆ, ಜಗತ್ತಿನಾದ್ಯಂತ ಸುಮಾರು 995 ಕೋಟಿ ಪಾಸ್‌ವರ್ಡ್‌ಗಳ ಮಾಹಿತಿ ಸೋರಿಕೆಯಾಗಿದ್ದು, ಇದು ಇತಿಹಾಸದಲ್ಲಿಯೇ ಬೃಹತ್ ಪಾಸ್‌ವರ್ಡ್ ಲೀಕ್ ಎಂಬ ಕುಖ್ಯಾತಿ ಗಳಿಸಿದೆ.
ಸೈಬರ್ ನ್ಯೂಸ್ ಪ್ರಕಾರ, ರಾಕ್‌ಯು2024.txt ಎಂಬ ಫೈಲ್‌ನಲ್ಲಿರುವ ಸುಮಾರು 9,948,575,739 ಪಾಸ್‌ವರ್ಡ್‌ಗಳು ಸೋರಿಕೆಯಾಗಿದೆ. ಹ್ಯಾಕರ್‌ಗಳು ಇಷ್ಟೆಲ್ಲ ಪಾಸ್‌ವರ್ಡ್‌ಗಳನ್ನು ಕಳ್ಳತನ ಮಾಡಲಾಗಿದೆ. ಇದರಿಂದ ಭಾರತ ಸೇರಿ ಜಗತ್ತಿನಾದ್ಯಂತ ಕೋಟ್ಯಂತರ ಜನರ ಪಾಸ್‌ವರ್ಡ್ ಸೋರಿಕೆಯಾದಂತಾಗಿದ್ದು, ಇಷ್ಟೇ ಜನರಿಗೆ ಆತಂಕ ಎದುರಾಗಿದೆ.
2021ರಲ್ಲಿಯೂ ರಾಕ್‌ಯು2021 ಎಂಬ ಫೈಲ್ ಮೂಲಕ ಸುಮಾರು 840 ಕೋಟಿ ಪಾಸ್‌ವರ್ಡ್‌ಗಳ ಸೋರಿಕೆಯಾಗಿತ್ತು. ಇದಕ್ಕೂ ಕೆಲ ದಿನಗಳ ಮೊದಲು 150 ಕೋಟಿ ಪಾಸ್‌ವರ್ಡ್‌ಗಳ ಸೋರಿಕೆಯಾಗಿತ್ತು. ಆದರೆ, ಇದುವರೆಗೆ ಪಾಸ್‌ವರ್ಡ್ ಸೋರಿಕೆಯಿಂದ ಏನೆಲ್ಲ ನಕಾರಾತ್ಮಕ ಪರಿಣಾಮ ಆಗಿದೆ, ಯಾರಿಗೆಲ್ಲ ನಷ್ಟವಾಗಿದೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
“ಜಗತ್ತಿನಾದ್ಯಂತ ಜನರು ವೈಯಕ್ತಿಕ ಕಾರಣಗಳಿಗಾಗಿ ಬಳಸುವ ಪಾಸ್‌ವರ್ಡ್‌ಗಳು ರಾಕ್‌ಯು2024 ಫೈಲ್‌ನಲ್ಲಿವೆ. ಸೈಬರ್ ಹ್ಯಾಕ್ ಮೂಲಕ ಇವುಗಳನ್ನು ಸೋರಿಕೆ ಮಾಡಲಾಗಿದೆ. ಯಾರು ಹ್ಯಾಕ್ ಮಾಡಿದ್ದಾರೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಇವುಗಳು ಸೈಬರ್ ಅಟ್ಯಾಕ್ ಸೇರಿ ಹಲವು ರೀತಿಯಲ್ಲಿ ಅಪಾಯಕಾರಿಯಾಗಿವೆ” ಎಂಬುದಾಗಿ ಸೈಬರ್ ನ್ಯೂಸ್ ಸಂಶೋಧಕರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: NTA Website: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಎನ್‌ಟಿಎ ವೆಬ್‌ಸೈಟ್ ಹ್ಯಾಕ್? ಸಂಸ್ಥೆ ಹೇಳೋದಿಷ್ಟು