ನವದೆಹಲಿ: ಆಸ್ಟ್ರೇಲಿಯಾದಲ್ಲಿ ಭಾರತೀಯ ನರ್ಸಿಂಗ್ ವಿದ್ಯಾರ್ಥಿನಿ (Indian Nursing Student) ಸಂಬಂಧ ನಿರಾಕರಿಸಿದಳು ಎಂಬ ಕಾರಣಕ್ಕೆ ಪ್ರತೀಕಾರವಾಗಿ ಆಕೆಯನ್ನು ಕಿಡ್ನ್ಯಾಪ್ (Kidnap) ಮಾಡಿ, ಜೀವಂತವಾಗಿ ಸಮಾಧಿ (buried Alive) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಮಾಜಿ ಬಾಯ್‌ಫ್ರೆಂಡ್ (Boy Friend) ತಪ್ಪೊಪ್ಪಿಕೊಂಡಿದ್ದಾನೆ. 2021 ಮಾರ್ಚ್‌ನಲ್ಲಿ ಈ ಕೊಲೆ ಪ್ರಕರಣದ ವಿಚಾರಣೆಯನ್ನು ಬುಧವಾರ ನ್ಯಾಯಾಲಯವು ನಡೆಸಿತು. ಈ ವೇಳೆ, ತನ್ನ ಮಾಜಿ ಪ್ರೇಯಸಿ, ಅಡಿಲೇಡ್ ಸಿಟಿಯ ಜಸ್ಮೀನ್ ಕೌರ್ ಅವರನ್ನು ಜೀವಂತವಾಗಿ ಹೂತು ಹಾಕಿ ಕೊಲೆ ಮಾಡಿರುವುದಾಗಿ ತಾರಿಕ್ಜೋತ್ ಸಿಂಗ್ ಕೋರ್ಟ್‌ನಲ್ಲಿ (Australia) ಒಪ್ಪಿಕೊಂಡಿದ್ದಾನೆ.
2021 ಮಾರ್ಚ್ 5ರಂದು 21 ವರ್ಷದ ಜಸ್ಮೀನ್ ಕೌರ್ ಅವರನ್ನು ಆಕೆ ಕೆಲಸ ಮಾಡುತ್ತಿದ್ದ ಸ್ಥಳದಿಂದಲೇ ಸಿಂಗ್ ಕಿಡ್ನ್ಯಾಪ್ ಮಾಡಿದ್ದ. ಕಾರಿನ ಡಿಕ್ಕಿಯಲ್ಲಿ ಆಕೆಯನ್ನು ಕೇಬಲ್ ಮೂಲಕ ಕಟ್ಟಿ ಹಾಕಿ ಸುಮಾರು 650 ಕಿ.ಮೀ.ವರೆಗೂ ತೆರಳಿದ್ದ. ಕಾರನ್ನು ತನ್ನ ಸ್ನೇಹಿತನಿಂದ ಪಡೆದುಕೊಂಡು ಅದರಲ್ಲಿ ಆಕೆಯನ್ನು ಕಿಡ್ನ್ಯಾಪ್ ಮಾಡಿದ್ದ. 650 ಕಿ.ಮೀ ಕಾರ್ ಓಡಿಸಿದ ಬಳಿಕ ಆಕೆ ಕುತ್ತಿಗೆಯನ್ನು ಲಘವಾಗಿ ಸೀಳಿದ್ದಾನೆ. ಆ ನಂತರ ಜೀವಂತವಾಗಿಯೇ ಆಕೆಯನ್ನು ದಕ್ಷಿಣ ಆಸ್ಟ್ರೇಲಿಯಾದ ಫ್ಲಿಂಡರ್ಸ್ ವ್ಯಾಪ್ತಿಯ ಸಮಾಧಿಯಲ್ಲಿ ಹೂತಿದ್ದಾನೆ ಎಂದು ಆಸ್ಟ್ರೇಲಿಯನ್ ಮಾಧ್ಯಮಗಳು ವರದಿ ಮಾಡಿವೆ.
ಈ ಸುದ್ದಿಯನ್ನೂ ಓದಿ: Apple Watch | ಪತಿಯಿಂದಲೇ ಜೀವಂತ ಸಮಾಧಿಯಾಗಿದ್ದ ಮಹಿಳೆಯನ್ನು ಆತನಿಂದ ರಕ್ಷಿಸಿದ್ದು ಆ್ಯಪಲ್ ವಾಚ್ !
ಈ ಭಯಂಕರ ಪ್ರಕರಣದ ವಿವಾರಗಳು ಆಸ್ಟ್ರೇಲಿಯಾ ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ ಬಹಿರಂಗವಾಗಿವೆ. ಕೌರ್ ಈ ಭಯಾನಕ ಹಿಂಸೆಯನ್ನು ಸಹಿಸಿಕೊಂಡಿದ್ದಳು ಎಂದು ಪ್ರಾಸಿಕ್ಯೂಟರ್ ಕಾರ್ಮೆನ್ ಮ್ಯಾಟಿಯೋ ಅವರು ತಿಳಿಸಿದರು. ಕೊಲೆ ನಡೆದ ಭೀಕರತೆಯನ್ನು ಬಿಚ್ಚಿಟ್ಟ ಮ್ಯಾಟಿಯೋ, ಆಕೆಗೆ ಕೇವಲ ಮಣ್ಣನ್ನು ಉಸಿರಾಡುವ ಮತ್ತು ನುಂಗುವುದನ್ನು ಬಿಟ್ಟು ಬೇರೆಯ ದಾರಿ ಇರಲಿಲ್ಲ. ಅಂಥ ಭಯಾನಕ ಸ್ಥಿತಿಯನ್ನು ಆಕೆ ಅನುಭವಿಸಿ ಕೊಲೆಯಾದಳು. ತಾನು ಸಾಯುವ ಹೊತ್ತಿನಲ್ಲಿ ಆಕೆಯ ಸುತ್ತ ಏನಿದೆ ಎಂಬ ಸಂಪೂರ್ಣ ಮಾಹಿತಿ ಆಕೆಗೆ ಇತ್ತು. ಆಕೆಯನ್ನು ಜೀವಂತವಾಗಿ ಸಮಾಧಿ ಮಾಡಲಾಗಿತ್ತು ಎಂದು ಪ್ರಾಸಿಕ್ಯೂಟರ್ ಅವರು ಕೋರ್ಟ್‌ಗೆ ತಿಳಿಸಿದರು.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.