Site icon Vistara News

Madhya Pradesh: 2 ವರ್ಷದ ಹಿಂದೆ ಕೋವಿಡ್‌ನಿಂದ ಸತ್ತ ವ್ಯಕ್ತಿ, ಜೀವಂತವಾಗಿ ಪ್ರತ್ಯಕ್ಷ! ಮುಂದೆ ಏನಾಯ್ತು?

A man who died of covid 2 years ago, is alive in Madhya Pradesh

ನವದೆಹಲಿ: ಎರಡು ವರ್ಷದ ಹಿಂದೆ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾನೆಂದು (dead due to Covid) ಘೋಷಿಸಲಾದ ವ್ಯಕ್ತಿ ಈಗ ಜೀವಂತವಾಗಿ ಪ್ರತ್ಯಕ್ಷನಾಗಿದ್ದಾನೆ! ಹೌದು, 2021ರಲ್ಲಿ 30 ವರ್ಷದ ವ್ಯಕ್ತಿ ಕಮಲೇಶ್ ಪಾಟಿದಾರ್ ಕೋವಿಡ್‌ನಿಂದ ಸತ್ತಿದ್ದಾನೆಂದು ಘೋಷಿಸಲಾಗಿತ್ತು. ಈಗ ಅದೇ ವ್ಯಕ್ತಿ ಗುಜರಾತ್‌ನ ಅಹಮದಾಬಾದ್‌ನಿಂದ ಮಧ್ಯಪ್ರದೇಶಕ್ಕೆ (Madhya Pradesh) ಹಿಂದಿರುಗಿದ್ದಾನೆ!

ಕಮಲೇಶ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ಕೊರೊನಾವೈರಸ್‌ನಿಂದಾಗಿ ಮೃತನಾಗಿದ್ದಾನೆಂದು ಘೋಷಿಸಲಾಗಿತ್ತು. ಆತನ ಶವವನ್ನು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳ (SOPs) ಪ್ರಕಾರ ಕುಟುಂಬಕ್ಕೆ ಹಸ್ತಾಂತರಿಸಲಾಗಿರಲಿಲ್ಲ. ಅಧಿಕಾರಿಗಳಿಂದಲೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿತ್ತು ಎಂದು ಪೌರ ಅಧಿಕಾರಿಗಳು ಹೇಳಿದ್ದಾರೆ.

ಮೃತ ಎಂದು ಘೋಷಣೆಯಾದ ಎರಡು ವರ್ಷದ ಬಳಿಕ ನಂತರ ಮರಳಿ ಬಂದಿರುವುದು ಅವರ ಕುಟುಂಬ ಸದಸ್ಯರನ್ನೂ ಒಳಗೊಂಡಂತೆ ಎಲ್ಲರನ್ನೂ ದಂಗುಬಡಿಸಿದೆ. ವಾಪಸ್ ಮನೆಗೆ ಆಗಮಿಸಿರುವ ವ್ಯಕ್ತಿ ಶಾಕ್‌ನಲ್ಲಿದ್ದಾನೆ. ಅಹಮದಾಬಾದ್‌ನಲ್ಲಿ ಗ್ಯಾಂಗ್‌ನೊಂದಿಗೆ ಇದ್ದೆ. ದಿನ ಬಿಟ್ಟು ದಿನ ನನಗೆ ಡ್ರಗ್ಸ್ ಇಂಜೆಕ್ಟ್ ಮಾಡಲಾಗುತ್ತಿತ್ತು ಎಂಬ ಮಾಹಿತಿಯನ್ನು ಹೊರ ಹಾಕಿದ್ದಾನೆ ಕಮಲೇಶ್. ಹೆಂಡತಿ ಮತ್ತು ಕುಟುಂಬದ ಸದಸ್ಯರು ಕಮಲೇಶ್‌ ಅವರು ಗುರುತಿಸಿದ್ದಾರೆ. ಧಾರ್ ಜಿಲ್ಲಾ ಪೊಲೀಸ್ ಕಮಲೇಶ್ ಅವರ ‘ಕೋವಿಡ್ ಸಾವು’ ಘೋಷಣೆ ಮತ್ತು ಅಹಮದಾಬಾದ್‌ನ ಬೆಳವಣಿಗೆ ಕುರಿತು ತನಿಖೆ ಆರಂಭಿಸಿದ್ದಾರೆ.

ಕೋವಿಡ್‌ನಿಂದ ಮೆದುಳು ಸಮಸ್ಯೆ

ಜಪಾನ್‌ನಲ್ಲಿ ಕೋವಿಡ್‌-19ರ (Coronavirus) ಸೋಂಕಿಗೆ ಗುರಿಯಾದ ಮಕ್ಕಳಲ್ಲಿ, ತೀವ್ರ ತೆರನಾದ ಮೆದುಳಿನ ಸಮಸ್ಯೆಗೆ ಗುರಿಯಾಗಿದ್ದವರ ಪೈಕಿ ಶೇ. 10ರಷ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಆ ದೇಶದ ಆರೋಗ್ಯ ಸಚಿವಾಲಯದ ಸಮೀಕ್ಷಾ ವರದಿ ತಿಳಿಸಿದೆ.

ಇದನ್ನೂ ಓದಿ: Covid 19 Updates: ಕೋವಿಡ್ ಹೊಸ ಅಲೆ ಇಲ್ಲ, ಆತಂಕ ಬೇಡ: ಕೇಂದ್ರ ಕೋವಿಡ್ ಪ್ಯಾನೆಲ್ ಮುಖ್ಯಸ್ಥರ ಅಭಯ

ಜನವರಿ 2020 ಮತ್ತು ಮೇ 2022ರ ನಡುವಿನ ಅವಧಿಯಲ್ಲಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದ 18 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ 34 ಮಂದಿ ತೀವ್ರವಾದಂಥ ಮೆದುಳಿನ ಸಮಸ್ಯೆಗೆ ತುತ್ತಾಗಿದ್ದರು. ಇವರಲ್ಲಿ 31 ಮಂದಿಗೆ ಸೋಂಕಿನ ಪೂರ್ವದಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲವಾದ್ದರಿಂದ, ಸೋಂಕಿನ ಅಡ್ಡ ಪರಿಣಾಮವಿದು ಎನ್ನುವುದು ಖಚಿತವಾಗಿದೆ. ಈ 31 ಮಕ್ಕಳಲ್ಲಿ 19 ಜನ ಸಂಪೂರ್ಣ ಚೇತರಿಸಿಕೊಂಡಿದ್ದರೆ, ನಾಲ್ವರು ಮೃತಪಟ್ಟು, ಎಂಟು ಮಂದಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Exit mobile version