Site icon Vistara News

ಹಮಾಸ್ ದಾಳಿಗಿಂತ ಸ್ವಲ್ಪ ಮುಂಚೆ ಇಸ್ರೇಲ್‌ನಿಂದ ಬೆಂಗಳೂರಿಗೆ ತೀವ್ರ ಅಸ್ವಸ್ಥ ಮಹಿಳೆ ಏರ್‌ಲಿಫ್ಟ್!

A plane brought a Critically ill woman to Bangalore shortly before the Hamas attack

ನವದೆಹಲಿ: ಚಿಂತಾಜನಕ ಸ್ಥಿತಿಯಲ್ಲಿದ್ದ 57 ವರ್ಷದ ಬೆಂಗಳೂರು ಮಹಿಳೆಯನ್ನು(Critically ill Bengaluru woman), ಹಮಾಸ್ ದಾಳಿ (Hamas Attack) ಮಾಡುವ ಸ್ವಲ್ಪ ಹೊತ್ತಿಗೆ ಮುಂಚೆಯೇ ಇಸ್ರೇಲ್‌ನ ಟೆಲ್‌ ಅವಿವ್ ನಗರದಿಂದ (Tel Aviv City) ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಿದ್ದ ಸುದ್ದಿ ಈಗ ಹೊರ ಬಿದ್ದಿದೆ. ಬೆಂಗಳೂರು ವೈದ್ಯರು ಹಾಗೂ ಸಹಾಯಕ ವೈದ್ಯಾಧಿಕಾರಿ ಜತೆಗೆ ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಹೊತ್ತ ಏರ್ ಆ್ಯಂಬುಲೆನ್ಸ್ ಜೆಟ್ ಟೇಕ್ ಆಫ್ ಕೆಲವೇ ಸಮಯದ ಬಳಿಕ ಹಮಾಸ್ ಬಂಡುಕೋರರು ಇಸ್ರೇಲ್‌ನ ನಗರಗಳ ಮೇಲೆ ಕ್ಷಿಪಣಿಗಳು ಮಳೆಯನ್ನು ಸುರಿಸಿದರು. ಪರಿಣಾಮ, ಸಾಕಷ್ಟು ಸಾವು ನೋವು ಸಂಭವಿಸಿದೆ. ಟೆಲ್ ಅವಿವದಿಂದ ಹೊರಟ ಏರ್‌ ಆಂಬ್ಯುಲೆನ್ಸ್ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ (Bengaluru International Airport) ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆದ ಬಳಿಕ, ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು(Israel Palestine War).

ಟೆಲ್ ಅವಿವ್‌ನಿಂದ ರೋಗಿಯೊಂದಿಗೆ ಏಳು ಆಸನಗಳ ಲಿಯರ್‌ಜೆಟ್ ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಬೆಂಗಳೂರಿಗೆ ಬಂದಿಳಿದಿದೆ. ಇಬ್ಬರು ಪೈಲಟ್‌ಗಳ ಏರ್ ಆಂಬ್ಯುಲೆನ್ಸ್ ಮಹಿಳೆಯನ್ನು ಹೊತ್ತು ತಂದಿದೆ. ಆಕೆಯ ಜೊತೆಯಲ್ಲಿ ವೈದ್ಯರು, ಸಹಾಯಕ ಮತ್ತು ಇನ್ನೊಬ್ಬ ನಾಗರಿಕ ಪ್ರಯಾಣಿಕರಿದ್ದರು. ಟೆಲ್ ಅವಿವ್‌ನಿಂದ ಟೇಕ್ ಆಫ್ ಆದ ನಂತರ ಬೆಂಗಳೂರಿಗೆ ಇಳಿಯಿತು. ಎಂಟು ಗಂಟೆಗಳ ಹಾರಾಟದ ನಂತರ ಬೆಂಗಳೂರು ತಲುಪುವ ಮೊದಲು ಅಬುಧಾಬಿಯಲ್ಲಿ ನಿಲುಗಡೆಯಾಗಿತ್ತು ಎನ್ನಲಾಗಿದೆ.

ಹಮಾಸ್ ದಾಳಿ ಶುರುವಾಗುವುದಕ್ಕಿಂತ ಮುಂಚೆಯೇ, ಕಡಿಮೆ ಅವಧಿಯಲ್ಲಿ ತೀವ್ರ ಅನಾರೋಗ್ಯ ಪೀಡಿತ ಮಹಿಳೆಯನ್ನು ಟೆಲ್‌ ಅವಿವ್‌ನಿಂದ ಸಾಗಿಸಲಾಯಿತು. ಒಂದು ವೇಳೆ, ಕೊಂಚವೇ ವಿಳಂಬವಾಗಿದ್ದರೂ ಅಸ್ವಸ್ಥ ಮಹಿಳೆ ಬೆಂಗಳೂರಿಗೆ ಬರುವುದು ಕಷ್ಟವಾಗುತ್ತಿತ್ತು. ಯಾಕೆಂದರೆ, ಹಮಾಸ್ ಬಂಡುಕೋರರು ಕ್ಷಿಪಣಿ ದಾಳಿ ಶುರು ಮಾಡುತ್ತಿದ್ದಂತೆ ಇಸ್ರೇಲ್ ತನ್ನೆಲ್ಲ ವಿಮಾನ ನಿಲ್ದಾಣಗಳು ಸ್ಥಗಿತಗೊಳಿಸಿತ್ತು ವಾಯು ಪ್ರದೇಶದ ಮೇಲೆ ನಿರ್ಬಂಧ ಹೇರಿತು.

ಏರ್ ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಬಂದಿಳಿದ ಕ್ರಿಟಿಕಲ್ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಮಣಿಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ. ಮಹಿಳೆ ಚಿಂತಾಜನಕ ಸ್ಥಿತಿಯಲ್ಲಿದ್ದದ್ದು ಹೌದು. ಆದರೆ, ಇತರ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಟಿಒಐ ವರದಿ ಮಾಡಿದೆ.

ಈ ಸುದ್ದಿಯನ್ನೂ ಓದಿ: ಕದನದೋಳ್‌ ಇಸ್ರೇಲ್‌ ಕೆಣಕಿ ಉಳಿದವರಿಲ್ಲ; ಹಮಾಸ್‌ ಕಮಾಂಡರ್‌ನ ಕುಟುಂಬವೇ ಸರ್ವನಾಶ!

2,200 ಜನರ ಸಾವು

ಹಮಾಸ್ ಮತ್ತು ಇಸ್ರೇಲ್ ನಡುವಿನ ಈ ಯುದ್ಧದಲ್ಲಿ ಈ ವರೆಗೆ ಎರಡೂ ಕಡೆಗಳಿಂದ 2,200 ಜನರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಹಮಾಸ್‌ನ ವಾರಾಂತ್ಯದ ದಾಳಿಯು ಇಸ್ರೇಲಿ ಆಕ್ರಮಣದ ಅಡಿಯಲ್ಲಿ ಪ್ಯಾಲೆಸ್ಟೀನಿಯಾದ ಹದಗೆಟ್ಟ ಪರಿಸ್ಥಿತಿಗಳಿಗೆ ಪ್ರತೀಕಾರವಾಗಿದೆ ಎಂದು ಉಗ್ರಗಾಮಿ ಗುಂಪು ಹೇಳಿಕೊಂಡಿದೆ. ದಾಳಿಯು ಏನೂ ಒಳ್ಳೆಯದನ್ನು ಮಾಡಲಿಲ್ಲ ಆದರೆ ಗಾಜಾದಲ್ಲಿ ಗುಂಪಿನ ಹಿಡಿತವನ್ನು ಹತ್ತಿಕ್ಕುವ ಇಸ್ರೇಲ್‌ನ ನಿರ್ಣಯವನ್ನು ಕೆರಳಿಸಿದೆ ಎಂದು ಹೇಳಬಹುದಷ್ಟೇ.

ಶನಿವಾರದ ದಾಳಿಯಿಂದ ಇಸ್ರೇಲ್‌ನಲ್ಲಿ 155 ಸೈನಿಕರು ಸೇರಿದಂತೆ 1,200 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಗಾಜಾದಲ್ಲಿ, 1,050ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಮತ್ತು 5,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ವಿಶ್ವಸಂಸ್ಥೆಯ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಸಂಸ್ಥೆ ಗಾಜಾದಲ್ಲಿ 250,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version