ಹೊಸದಿಲ್ಲಿ: ಆಧಾರ್ ಕಾರ್ಡ್‌ನಲ್ಲಿ (Aadhaar Card) ತಮ್ಮ ವಿವರಗಳನ್ನು ಯಾವುದೇ ಶುಲ್ಕವಿಲ್ಲದೆ ನವೀಕರಿಸಬಹುದಾದ ಕಾಲವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India-UIDAI) ಮತ್ತೊಮ್ಮೆ ವಿಸ್ತರಿಸಿದೆ. ಜೂನ್ 14ರ ತನಕ ನೀವು ಉಚಿತವಾಗಿ ನೀವು ಆಧಾರ್‌ನ ವಿವರ ನವೀಕರಿಸಬಹುದಾಗಿದೆ.
ಈ ಸೇವೆಯು ಹಿಂದಿನಂತೆ ಮೈ ಆಧಾರ್ (myAadhaar) ಪೋರ್ಟಲ್‌ನಲ್ಲಿ ಮಾತ್ರ ಉಚಿತವಾಗಿದ್ದು, ಆಧಾರ್ ಕೇಂದ್ರಗಳಲ್ಲಿ 50 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಮುಂತಾದ ವಿವರಗಳನ್ನು ನವೀಕರಿಸಬಹುದು. 2024ರ ಜೂನ್ 14ರ ನಂತರ ನೀವು ಶುಲ್ಕ ಪಾವತಿಸಿ ಅಪ್‌ಡೇಟ್ ಮಾಡಬೇಕಾಗುತ್ತದೆ ಎಂದು ಯುಐಡಿಎಐ ತಿಳಿಸಿದೆ.
#UIDAI extends free online document upload facility till 14th June 2024; to benefit millions of Aadhaar holders.
— Aadhaar (@UIDAI) March 12, 2024
This free service is available only on the #myAadhaar portal. UIDAI has been encouraging people to keep documents updated in their #Aadhaar pic.twitter.com/eaSvSWLvvt
ಏಕೆ ನವೀಕರಿಸಬೇಕು?
ಆಧಾರ್‌ನ ಆಡಳಿತ ಮಂಡಳಿ ಯುಐಡಿಎಐ, ಪ್ರಜೆಗಳು ತಮ್ಮ ಆಧಾರ್ ವಿವರಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸುವುದನ್ನು ಕಡ್ಡಾಯಗೊಳಿಸಿದೆ. ಡೇಟಾಬೇಸ್‌ನಲ್ಲಿನ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕಿದೆ. ಮದುವೆ, ವಾಸಸ್ಥಾನ ಬದಲಾವಣೆ ಇತ್ಯಾದಿ ಜೀವನ ಘಟನೆಗಳಿಂದ ವ್ಯಕ್ತಿ ಹೆಸರು ಮತ್ತು ವಿಳಾಸದಂತಹ ಮೂಲಭೂತ ಜನಸಂಖ್ಯಾ ವಿವರಗಳನ್ನು ಬದಲಾಯಿಸಬೇಕಾಗಬಹುದು. ವಿಳಾಸ ಮತ್ತು ಮೊಬೈಲ್ ಸಂಖ್ಯೆ ಹೊಸ ಸ್ಥಳಗಳಿಗೆ ವಲಸೆ ಹೋದಾಗ ಬದಲಾಗಬಹುದು. ಇದರ ಜತೆಗೆ ಮಕ್ಕಳ ಆಧಾರ್ ವಿವರಗಳನ್ನು ನವೀಕರಿಸಲು ಸರ್ಕಾರ ಈಗ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಈ ಮಾರ್ಗಸೂಚಿಗಳ ಪ್ರಕಾರ, ಮಗುವಿಗೆ 15 ವರ್ಷ ವಯಸ್ಸಾದಾಗ ನವೀಕರಣಕ್ಕಾಗಿ ಎಲ್ಲ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕು. ಇದು ಮಗುವಿನ ಆಧಾರ್ ಡೇಟಾ ನಿಖರವಾಗಿದೆ ಮತ್ತು ನವೀಕೃತವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ.
ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಮಾಡುವ ವಿಧಾನ
UIDAI ವೆಬ್‌ಸೈಟ್‌ಗೆ ಹೋಗಿ, ಅಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಸೃಷ್ಟಿಸಿಕೊಳ್ಳಿ. ಲಾಗ್ ಇನ್ ಆಗಿ ಅಪ್‌ಡೇಟ್ ವಿನಂತಿ ಸಲ್ಲಿಸಿದರೆ, UIDAI ವಿನಂತಿಯನ್ನು ಪರಿಶೀಲಿಸುತ್ತದೆ ಮತ್ತು 15 ದಿನಗಳಲ್ಲಿ ಆಧಾರ್ ವಿವರಗಳನ್ನು ನವೀಕರಿಸುತ್ತದೆ.
- UIDAI ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ.
- ಬಳಿಕ My Aadhar ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಡ್ರಾಪ್-ಡೌನ್ ಮೆನುವಿನಿಂದ “Update Your Aadhaar” ಆಯ್ಕೆ ಮಾಡಿ.
- `Update Aadhaar Details (Online)” ಪುಟದಲ್ಲಿ, “Proceed to Update Aadhaar” ಕ್ಲಿಕ್ ಮಾಡಿ.
- ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಪರಿಶೀಲನೆ ಕೋಡ್ ಅನ್ನು ನಮೂದಿಸಿ. ನಂತರ “Send OTP” ಕ್ಲಿಕ್ ಮಾಡಿ.
- ನೀವು ಸ್ವೀಕರಿಸಿದ OTP ಅನ್ನು ನಮೂದಿಸಿ ಮತ್ತು “Login” ಕ್ಲಿಕ್ ಮಾಡಿ.
- ಮುಂದಿನ ಪುಟದಲ್ಲಿ, ನೀವು ನವೀಕರಿಸಲು ಬಯಸುವ ವಿವರಗಳನ್ನು ಆಯ್ಕೆ ಮಾಡಿ ಮತ್ತು ಹೊಸ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ, “Submit” ಕ್ಲಿಕ್ ಮಾಡಿ.
- ಅಗತ್ಯವಿರುವ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ ಮತ್ತು “Submit Update Request” ಕ್ಲಿಕ್ ಮಾಡಿ.
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ SMS ಮೂಲಕ ನವೀಕರಣ ವಿನಂತಿ ಸಂಖ್ಯೆ (URN) ಸ್ವೀಕರಿಸುತ್ತೀರಿ. ಟ್ರ್ಯಾಕಿಂಗ್ಗಾಗಿ ಈ URN ಅನ್ನು ಇರಿಸಿಕೊಳ್ಳಿ.
- ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ಪರಿಶೀಲಿಸಲು, myaadhaar.uidai.gov.in/ಗೆ ಭೇಟಿ ನೀಡಿ ಮತ್ತು “Check Enrolment & Update Status” ಕ್ಲಿಕ್ ಮಾಡಿ.
- ನಿಮ್ಮ ನವೀಕರಣ ವಿನಂತಿಯ ಸ್ಥಿತಿಯನ್ನು ವೀಕ್ಷಿಸಲು ನಿಮ್ಮ URN ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ.
ಇದನ್ನೂ ಓದಿ: Aadhaar Card: ಇನ್ನು ಮುಂದೆ ಆಧಾರ್ ಕಾರ್ಡ್ ಮಾಡಿಸುವುದು ಅಷ್ಟು ಸುಲಭವಲ್ಲ! ಕಠಿಣ ನಿಯಮ