Site icon Vistara News

Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Aam Aadmi Party

ನವದೆಹಲಿ: ಲೋಕಸಭೆ ಚುನಾವಣೆ(Lok Sabha Election 2024) ನಡೆಯುತ್ತಿರುವಾಗಲೇ ಆಮ್‌ ಆದ್ಮಿ ಪಕ್ಷ(Aam Aadmi Party) ದಿನಕ್ಕೊಂದು ವಿವಾದಕೀಡಾಗುತ್ತಿದೆ. ಇದೀಗ ಮತ್ತೊಂದು ವಿವಾದವನ್ನು ಆಪ್‌ ಮೈಮೇಲೆ ಎಳೆದುಕೊಂಡಿದೆ. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಬಬ್ಬರ್‌ ಖಾಲ್ಸಾ(BKI) ಮುಖ್ಯಸ್ಥನ ಜೊತೆ ಪಕ್ಷದ ಮುಖಂಡರು ಕಾಣಿಸಿಕೊಳ್ಳುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು, ಆಪ್‌ ಕೆನಾಡಾ ಮೂಲದಿಂದ ದೇಣಿಗೆ ಸಂಗ್ರಹಿಸಲು ಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ.

ಕೆನಡಾದಲ್ಲಿ BKI ಮುಖಂಡ ಹರ್ಜೀತ್‌ ಸಿಂಗ್‌ ಭಜ್ವಾನನ್ನು ಪಂಜಾಬ್‌ನ ಆಪ್‌ ಶಾಸಕ ಕುಲ್ತಾರ್‌ ಸಿಂಗ್‌ ಸಂದ್ವಾನ್‌ ಭೇಟಿ ಆಗಿ ಮಾತುಕತೆ ನಡೆಸಿರುವ ಫೋಟೋವೊಂದು ಬಹಳ ಸದ್ದು ಮಾಡುತ್ತಿದೆ. ಇವರಿಬ್ಬರು 2022 ಸೆಪ್ಟೆಂಬರ್‌ನಲ್ಲಿ ಕೆನಡಾದ ಮಾಂಟ್ರೀಲ್‌ನಲ್ಲಿ ಭೇಟಿ ಆಗಿದ್ದರು. ಇನ್ನು ಪ್ರತ್ಯಕ್ಷದರ್ಶಿಯ ನೀಡಿರುವ ಮಾಹಿತಿ ಪ್ರಕಾರ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮನ್‌ ಮತ್ತು ದಿಲ್ಲಿ ಮುಖ್ಯಮಂತ್ರಿ ಕೂಡ ಆತನ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು ಎಂದು ಹೇಳಲಾಗಿದೆ.

BKI ನಿಂದ ಆಪ್‌ಗೆ 5 ಮಿಲಿಯನ್‌ ಡಾಲರ್‌ ದೇಣಿಗೆ

ಮೂಲಗಳ ಮಾಹಿತಿ ಪ್ರಕಾರ, BKI ಆಮ್‌ ಆದ್ಮಿ ಪಕ್ಷಕ್ಕೆ 5 ಮಿಲಿಯನ್‌ ಡಾಲರ್‌ ದೇಣಿಗೆ ನೀಡಿತ್ತು. ಇದಕ್ಕೆ ಬದಲಾಗಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಅರೆಸ್ಟ್‌ ಮಾಡದಂತೆ ಆಪ್‌ ಸರ್ಕಾರ ಒಪ್ಪಿತ್ತು. ಭಜ್ವಾ ಕೆನಾಡದಲ್ಲಿರುವ ಖಲಿಸ್ತಾನಿ ಪ್ರತ್ಯೇಕತಾವಾದಿಯಾಗಿದ್ದು, ಪ್ರತ್ಯೇಕ ರಾಷ್ಟ್ರಕ್ಕಾಗಿ ಸಿಖ್ಖರನ್ನು ಪ್ರಚೋದಿಸುವುದೇ ಇವನ ಪ್ರಮುಖ ಕೆಲಸವಾಗಿದೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳ ಎದುರು ಈ ಖಲಿಸ್ತಾನಿ ಜಿಂದಾಬಾದ್‌ ಎಂದು ಘೋಷಣೆ ಕೂಗಿ ಗಮನಸೆಳೆದಿದ್ದ.

ಇನ್ನು ಆಪ್‌ ವಿದೇಶಿ ದೇಣಿಗೆ ಪಡೆಯುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (ED) ಕೇಸ್‌ ದಾಖಲಿಸಿಕೊಂಡಿತ್ತು.

2014 ಮತ್ತು 2022 ರ ನಡುವೆ ಚುನಾವಣೆಗೆ ಹಣ ನೀಡಲು ಖಲಿಸ್ತಾನಿ ಗುಂಪುಗಳು ಕೇಜ್ರಿವಾಲ್ ಅವರ ಎಎಪಿಗೆ USD 16 ಮಿಲಿಯನ್ (ಅಂದಾಜು 133.54 ಕೋಟಿ ರೂ.) ನೀಡಿವೆ ಎಂದು ಎಸ್‌ಎಫ್‌ಜೆ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನೂನ್ ಹೇಳಿದ್ದ ವೀಡಿಯೊ ಬಹಳ ಸುದ್ದಿ ಆಗಿತ್ತು. ಈ ಹಣಕಾಸಿನ ನೆರವಿನ ಬದಲಾಗಿ ಶಿಕ್ಷೆಗೊಳಗಾದ ಭಯೋತ್ಪಾದಕ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರನ್ನು ಬಿಡುಗಡೆ ಮಾಡಲು ಕೇಜ್ರಿವಾಲ್‌ ಒಪ್ಪಿದ್ದರು ಎಂದೂ ಆತ ಹೇಳಿದ್ದ. ಭುಲ್ಲರ್ 1993 ರಲ್ಲಿ ದೆಹಲಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದನು, ಆ ದಾಳಿ ಒಂಬತ್ತು ಜನರನ್ನು ಬಲಿ ತೆಗೆದುಕೊಂಡಿತು ಮತ್ತು 31 ಜನರು ಗಾಯಗೊಂಡಿದ್ದರು.

ಇದನ್ನೂ ಓದಿ:Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

ಪನ್ನುನ್ ಪ್ರಕಾರ, ವಿದೇಶಿ ದೇಣಿಗೆ ಸಂಗ್ರಹಿಸಲು ಕೇಜ್ರಿವಾಲ್ ಮೂರು ತಂಡಗಳನ್ನು ಹೊಂದಿದ್ದು, ಅದರ ಪ್ರಮುಖ ಕಿಂಗ್‌ ಪಿನ್‌ ಸ್ವತಃ ಅವರೇ ಆಗಿದ್ದಾರೆ. ಇನ್ನುಳಿದಂತೆ ತಂಡ 1 ರಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹಿಂದಿನ ಎಎಪಿ ನಾಯಕ ಗುರುಪ್ರೀತ್ ಘುಗ್ಗಿ ಇದ್ದಾರೆ. ಘುಗ್ಗಿ ಅವರು ಬಬ್ಬರ್ ಖಾಲ್ಸಾ ಅಂತರಾಷ್ಟ್ರೀಯ ಕಾರ್ಯಕರ್ತ ರಾಜಿಂದರ್ ಸಿಂಗ್ ಅವರನ್ನು ಭೇಟಿಯಾಗಿದ್ದರು

Exit mobile version