Site icon Vistara News

Amanatullah Khan: ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಆಪ್‌ ಎಂಎಲ್‌ಎ ಪುತ್ರನಿಂದ ಹಲ್ಲೆ; ಬಿತ್ತು ಕೇಸ್

Amanatullah Khan

AAP MLA Amanatullah Khan's son attacks petrol pump employees, booked; Watch

ನವದೆಹಲಿ: ರಾಜಕಾರಣಿಗಳು, ರಾಜಕಾರಣಿಗಳ ಮಕ್ಕಳು, ಅವರ ಕುಟುಂಬಸ್ಥರಿಗೊಂದು ದುರಹಂಕಾರ ಇರುತ್ತದೆ. ಹಣ, ಅಧಿಕಾರದ ಮದವು ಅವರನ್ನು ಸಾರ್ವಜನಿಕರೊಂದಿಗೆ ದುರಹಂಕಾರದಿಂದ, ದರ್ಪದಿಂದ ವರ್ತಿಸುವ ಹಾಗೆ ಮಾಡುತ್ತದೆ. ಚುನಾವಣೆ ಸಂದರ್ಭ ಹೊರತುಪಡಿಸಿ ಅವರು ಉಳಿದ ಸಮಯದಲ್ಲಿ ಅಹಂಕಾರದಿಂದಲೇ ವರ್ತಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಆಮ್‌ ಆದ್ಮಿ ಪಕ್ಷದ (Aam Aadmy Party) ಶಾಸಕ ಅಮಾನತುಲ್ಲಾ ಖಾನ್‌ ಅವರ ಪುತ್ರನು ಪೆಟ್ರೋಲ್‌ ಪಂಪ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಆತನ ವಿರುದ್ಧ ಕೇಸ್‌ ದಾಖಲಾಗಿದೆ.

ನೊಯ್ಡಾದ ಸೆಕ್ಟರ್‌ 95 ಪ್ರದೇಶದಲ್ಲಿರುವ ಪೆಟ್ರೋಲ್‌ ಬಕ್‌ನಲ್ಲಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಕಾರಿನ ಡಿಕ್ಕಿಯಿಂದ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗಿ, ಹಲ್ಲೆ ಮಾಡುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಾದ ಬಳಿಕ ಸಿಸಿಟಿವಿ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ವೈರಲ್‌ ಆಗುತ್ತಲೇ ಜನ ಶಾಸಕನ ಪುತ್ರನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

ಅಮಾನತುಲ್ಲಾ ಖಾನ್‌ನ ಪುತ್ರನು ಕಾರಿನಲ್ಲಿ ಪೆಟ್ರೋಲ್‌ ಬಂಕ್‌ಗೆ ಬಂದಿದ್ದಾನೆ. ಆದರೆ, ಹಲವು ವಾಹನಗಳನ್ನು ಸಾಲಿನಲ್ಲಿ ನಿಲ್ಲಿಸಿದ ಕಾರಣ, ಕ್ಯೂ ಬಿಟ್ಟು ಹೋಗಿ, ಮೊದಲು ಪೆಟ್ರೋಲ್‌ ಹಾಕಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಅಲ್ಲಿದ್ದ ಸಾರ್ವಜನಿಕರು, ಪೆಟ್ರೋಲ್‌ ಬಂಕ್‌ ಸಿಬ್ಬಂದಿಯು ಆತನನ್ನು ತಡೆದಿದ್ದಾರೆ. ಇದರಿಂದ ಕುಪಿತಗೊಂಡ ಎಂಎಲ್‌ಎ ಪುತ್ರನು, ಕಾರಿನ ಡಿಕ್ಕಿಯಲ್ಲಿದ್ದ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗಿ ಅಲ್ಲಿನ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಇಷ್ಟೆಲ್ಲ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಂದೆಯೂ ಬಂಕ್‌ಗೆ ಬಂದು ಬೆದರಿಕೆ

ಸಾರ್ವಜನಿಕರ ಜತೆ ಅಸಭ್ಯವಾಗಿ ವರ್ತಿಸಿದ, ಪೆಟ್ರೋಲ್‌ ಬಂಕ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಮಗನಿಗೆ ಬುದ್ಧಿ ಮಾತು ಹೇಳಿ, ಪ್ರಕರಣವನ್ನು ತಣ್ಣಗಾಗಿಸುವ ಬದಲು, ಅಮಾನತುಲ್ಲಾ ಖಾನ್‌ ಅವರೇ ಪೆಟ್ರೋಲ್‌ ಬಂಕ್‌ಗೆ ತೆರಳಿ, ಅಲ್ಲಿನ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿ ವಕ್ಫ್‌ ಬೋರ್ಡ್‌ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳಷ್ಟೇ ಅಮಾನತುಲ್ಲಾ ಖಾನ್‌ ಅವರನ್ನು ಜಾರಿ ನಿರ್ದೇಶನಾಲಯದ ವಿಚಾರಣೆ ನಡೆಸಿದ್ದಾರೆ. ಇವರು ದೆಹಲಿಯ ಓಖ್ಲಾ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದಾರೆ.

ಇದನ್ನೂ ಓದಿ: Harshika Poonacha: ಹಲ್ಲೆ ಪ್ರಕರಣ; ನ್ಯಾಯ ಕೋರಿ ಪ್ರಲ್ಹಾದ ಜೋಶಿ ಭೇಟಿಯಾದ ಹರ್ಷಿಕಾ ಪೂಣಚ್ಚ ದಂಪತಿ

Exit mobile version