ನವದೆಹಲಿ: ಪಿಎಂ ಸೂರ್ಯ ಘರ್ ಯೋಜನೆಯಡಿ ಪ್ರತಿ ಜಿಲ್ಲೆಗೊಂದು ‘ಮಾದರಿ ಸೌರ ಗ್ರಾಮ’ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಮಾದರಿ ಸೌರ ಗ್ರಾಮ ಅನುಷ್ಠಾನಕ್ಕೆ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಿಂದ ಕಾರ್ಯಾಚರಣೆ ಮಾರ್ಗಸೂಚಿ ಸಹ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Tungabhadra Dam: ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ನಿರ್ಮಿಸಲು ಬೊಮ್ಮಾಯಿ ಆಗ್ರಹ
800 ಕೋಟಿ ರೂ. ನಿಗದಿ
ದೇಶಾದ್ಯಂತ ಪ್ರತಿ ಜಿಲ್ಲೆಗೆ ಒಂದು ಮಾದರಿ ಸೌರ ಗ್ರಾಮವನ್ನು ರಚಿಸಲು ಒತ್ತು ನೀಡಿದ್ದು, ಇದಕ್ಕಾಗಿ ಒಟ್ಟು ರೂ. 800 ಕೋಟಿ ಆರ್ಥಿಕ ವೆಚ್ಚವನ್ನು ನಿಗದಿಪಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಮಾದರಿ ಗ್ರಾಮಕ್ಕೆ 1 ಕೋಟಿ ನೆರವು
ಸೌರ ಮಾದರಿ ಗ್ರಾಮದಲ್ಲಿ ಪ್ರತಿ ಜಿಲ್ಲೆಯ ವಿಜೇತ ಗ್ರಾಮವು ಕೇಂದ್ರದಿಂದ ಹಣಕಾಸು ನೆರವಾಗಿ ರೂ. 1 ಕೋಟಿ ಅನುದಾನ ಪಡೆಯುತ್ತದೆ ಎಂದು ಮಾಹಿತಿ ನೀಡಿರುವ ಸಚಿವ ಪ್ರಲ್ಹಾದ್ ಜೋಶಿ, ಸೌರಶಕ್ತಿ ಅಳವಡಿಕೆಯನ್ನು ಉತ್ತೇಜಿಸುವ ಮತ್ತು ಗ್ರಾಮ ಸಮುದಾಯಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಈ ಹೆಜ್ಜೆ ಇರಿಸಿ ಮಾದರಿ ಸೌರ ಗ್ರಾಮ ರಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಸೌರ ಮೇಲ್ಛಾವಣಿಯ ಸೂರ್ಯ ಘರ್ ಯೋಜನೆ 75,021 ಕೋಟಿ ರೂ. ವೆಚ್ಚವನ್ನು ಹೊಂದಿದ್ದು, 2026-27ರ ಆರ್ಥಿಕ ವರ್ಷದವರೆಗೆ ಅನ್ವಯಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಾರ್ಗಸೂಚಿ ವಿವರ
ಮಾದರಿ ಸೌರ ಗ್ರಾಮವೆಂದು ಪರಿಗಣಿಸಲು, ಗ್ರಾಮವು 5,000 (ವಿಶೇಷ ವರ್ಗದ ರಾಜ್ಯಗಳಿಗೆ 2,000) ಜನಸಂಖ್ಯೆಯುಳ್ಳ ಕಂದಾಯ ಗ್ರಾಮವಾಗಿರಬೇಕು.
ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕವಾಗಿದ್ದು, ಅಲ್ಲಿ ಜಿಲ್ಲಾ ಮಟ್ಟದ ಸಮಿತಿಯು (DLC) ಸಂಭಾವ್ಯ ಅಭ್ಯರ್ಥಿಯ ಘೋಷಣೆಯ ನಂತರ 6 ತಿಂಗಳ ನಂತರ ಸ್ಥಾಪಿಸಲಾದ ಒಟ್ಟಾರೆ ವಿತರಿಸಿದ ನವೀಕರಿಸಬಹುದಾದ ಶಕ್ತಿ (RE) ಸಾಮರ್ಥ್ಯದ ಮೇಲೆ ಗ್ರಾಮಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಅತಿ ಹೆಚ್ಚು ಆರ್‌ಇ ಸಾಮರ್ಥ್ಯ ಹೊಂದಿರುವ ಪ್ರತಿ ಜಿಲ್ಲೆಯ ವಿಜೇತ ಗ್ರಾಮಕ್ಕೆ ರೂ.1 ಕೋಟಿ ಕೇಂದ್ರ ಹಣಕಾಸು ನೆರವು ಸಿಗಲಿದೆ.
ಇದನ್ನೂ ಓದಿ: Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ
ಈ ಯೋಜನೆಯ ಅನುಷ್ಠಾನವನ್ನು ರಾಜ್ಯ/UT ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಯು ಜಿಲ್ಲಾ ಮಟ್ಟದ ಸಮಿತಿಯ (DLC) ಮೇಲ್ವಿಚಾರಣೆಯಲ್ಲಿ ಮಾಡುತ್ತದೆ. ಆಯ್ದ ಗ್ರಾಮಗಳು ಸೌರಶಕ್ತಿ-ಚಾಲಿತ ಸಮುದಾಯಗಳಿಗೆ ಪರಿಣಾಮಕಾರಿಯಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತದೆ ಮತ್ತು ದೇಶದಾದ್ಯಂತ ಇತರ ಹಳ್ಳಿಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತದೆ.