Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ - Vistara News

ನೋಟಿಸ್ ಬೋರ್ಡ್

Namma Metro: ಹಸಿರು ಮಾರ್ಗದಲ್ಲಿ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ

Namma Metro: ನಾಗಸಂದ್ರದಿಂದ ಮಾದಾವರ (BIEC)ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ.

VISTARANEWS.COM


on

Namma Metro
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ನಮ್ಮ ಮೆಟ್ರೋ (Namma Metro) ಹಸಿರು ಮಾರ್ಗದ ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಡುವೆ ಆ.13ರಿಂದ 15ರವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ತಿಳಿಸಿದೆ.

ನಾಗಸಂದ್ರದಿಂದ ಮಾದಾವರ (BIEC)ವರೆಗಿನ ರೀಚ್-3ರ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್ ಪರೀಕ್ಷೆಗಳನ್ನು ನಡೆಸಬೇಕಾಗಿರುವುದರಿಂದ, ಪೀಣ್ಯ ಇಂಡಸ್ಟ್ರಿ ಹಾಗೂ ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಮಯದಲ್ಲಿ ವ್ಯತ್ಯಯ ವಾಗಲಿದ್ದು, ಇದರ ವಿವರ ಈ ಕೆಳಕಂಡಂತಿವೆ.

  1. ಆ. 13ರಂದು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.
  2. ಆ. 14ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ ಮತ್ತು ಕೊನೆಯ ರೈಲು ಸೇವೆ ರಾತ್ರಿ 11ಕ್ಕೆ ಬದಲಾಗಿ 10 ಗಂಟೆಯವರೆಗೆ.
  3. ಆ. 15ರಂದು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭ

ನಾಗಸಂದ್ರ ನಿಲ್ದಾಣದಿಂದ ಆ.13 ಮತ್ತು 14 ರಂದು ಕೊನೆಯ ರೈಲು ಸೇವೆಯು ರಾತ್ರಿ 11.05 ಗಂಟೆಯ ಬದಲಾಗಿ 10.00 ಗಂಟೆಗೆ ಕೊನೆಗೊಳ್ಳುತ್ತದೆ. ಆ.14 ಮತ್ತು 15ರಂದು ನಾಗಸಂದ್ರದಿಂದ ಮೊದಲ ರೈಲು ಸೇವೆಯು ಬೆಳಗ್ಗೆ 5ಕ್ಕೆ ಬದಲಾಗಿ 6ಕ್ಕೆ ಪ್ರಾರಂಭವಾಗುತ್ತದೆ.
ಆದಾಗ್ಯೂ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಆ.13 ಮತ್ತು 14ರಂದು ರಾತ್ರಿ 11.12 ಗಂಟೆಯವರೆಗೆ ಕೊನೆಯ ರೈಲು ಸೇವೆ ಲಭ್ಯವಿರುತ್ತದೆ. ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮೊದಲ ರೈಲು ಸೇವೆಯು ಆ.14 ಮತ್ತು 15ರಂದು ಬೆಳಗ್ಗೆ 5ಕ್ಕೆ ಪ್ರಾರಂಭವಾಗುತ್ತದೆ. ನೇರಳೆ ಮಾರ್ಗದ ಮೆಟ್ರೋ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಇದನ್ನೂ ಓದಿ | Namma Metro Ticket Price Hike: ಮೆಟ್ರೋ ಟಿಕೆಟ್‌ ದರದ ಮೇಲೆ ಕೈ ಇಟ್ರೋ! ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ?

ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ನಮ್ಮ ಮೆಟ್ರೋ ಸಾಥ್

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ನಮ್ಮ ಮೆಟ್ರೋ ಸಾಥ್ ನೀಡಿದೆ. ಆಗಸ್ಟ್ 15,17 ಹಾಗೂ 18ರಂದು ಟೋಕನ್ ಬದಲು ರಿಟರ್ನ್ ಜರ್ನಿ ಪೇಪರ್ ಟಿಕೆಟ್ ನೀಡಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. 30 ರೂ. ರಿಟರ್ನ್ ಟಿಕೆಟ್ ಮೂಲಕ ಯಾವುದೇ ನಿಲ್ದಾಣಕ್ಕೂ ಪ್ರಯಾಣದ ಅನುಕೂಲವಾಗಲಿದೆ. ಪ್ರಯಾಣಿಕರು ಟೋಕನ್ ಬದಲಿಗೆ ಪರ್ಯಾಯ ವ್ಯವಸ್ಥೆ ಬಳಸಲು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

ಲಾಲ್‌ಬಾಗ್ ನಲ್ಲಿ ಆಯೋಜಿಸಲಾಗಿರುವ ತೋಟಗಾರಿಕಾ ಫಲಪುಷ್ಪ ಪ್ರದರ್ಶನದ ಹಿನ್ನಲೆಯಲ್ಲಿ, ನಮ್ಮ ಮೆಟ್ರೋದಿಂದ ಆ. 15, 17 ಮತ್ತು 18ರಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ತ್ವರಿತ ಪ್ರಯಾಣಕ್ಕಾಗಿ ಬೆಳಗ್ಗೆ 10 ರಿಂದ ರಾತ್ರಿ 8ರವರೆಗೆ ಟೋಕನ್‌ಗಳ ಬದಲಿಗೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 30 ರೂ.ಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ | HD Deve Gowda: ದೆಹಲಿ ಮೆಟ್ರೋದಲ್ಲಿ ಸಂಚರಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ

ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಲು ಮಾನ್ಯವಾಗಿರುತ್ತದೆ. ಸಾರ್ವಜನಿಕರು ಟೋಕನ್, ಕಾರ್ಡ್, ಕ್ಯೂಆರ್ ಟಿಕೆಟ್‌ಗಳ ಮೂಲಕ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್‌ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು. ಮೇಲಿನ ದಿನಾಂಕಗಳಲ್ಲಿ ಮತ್ತು ಅವಧಿಯಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ಟಿಕೆಟ್‌ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಬೇಕು ಎಂದು ಬಿಎಂಆರ್‌ಸಿಎಲ್‌ ಮನವಿ ಮಾಡಿದೆ.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    Continue Reading
    Click to comment

    Leave a Reply

    ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

    ಬೆಂಗಳೂರು

    KEA: ನಾಳೆ ಕನ್ನಡ ಕಡ್ಡಾಯ ಪರೀಕ್ಷೆ; ಅ.27ಕ್ಕೆ ಬಿಗಿ ಬಂದೋಬಸ್ತ್ ನಡೆಯಲಿದೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ

    KEA : ಕನ್ನಡ ಕಡ್ಡಾಯ ಪರೀಕ್ಷೆ ಅ.26ಕ್ಕೆ, ಅ.27ಕ್ಕೆ ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆಯು ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ನಡೆಯಲಿದೆ.

    VISTARANEWS.COM


    on

    kea
    ಸಾಂದರ್ಭಿಕ ಚಿತ್ರ

    ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಯ ಒಂದು ಸಾವಿರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅ.27ರಂದು ಮುಖ್ಯ ಪರೀಕ್ಷೆ ನಡೆಸುತ್ತಿದ್ದು ಸಕಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಂಡಿದೆ.

    ವಯೋಮಿತಿ ಸಡಿಲಿಕೆ ನಂತರ ಅರ್ಜಿ ಸಲ್ಲಿಸಿದ ಸುಮಾರು 63 ಸಾವಿರ ಮಂದಿಗೆ ಕನ್ನಡ ಕಡ್ಡಾಯ ಪರೀಕ್ಷೆ, ಅ.26ಕ್ಕೆ ರಾಜ್ಯದ 153 ಕೇಂದ್ರಗಳಲ್ಲಿ ನಡೆಯಲಿದೆ. ಇದರಲ್ಲಿ ಜಿಟಿಟಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ 2,300 ಮಂದಿಯೂ ಸೇರಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ತಿಳಿಸಿದ್ದಾರೆ.

    ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಮುಖ್ಯ ಪರೀಕ್ಷೆ ಅ.27ರಂದು ನಡೆಯಲಿದ್ದು, ಅದನ್ನು ಬರೆಯಲು 4.8 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಈ ಸಲುವಾಗಿ 1,173 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅವರು ವಿವರಿಸಿದರು. ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ವಸ್ತ್ರ ಸಂಹಿತೆ ಕೂಡ ಇದ್ದು, ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

    ಓಎಂಆರ್ ನೋಂದಣಿ ಎಚ್ಚರ

    ಸೆ.26ರಂದು ನಡೆದ ಕಡ್ಡಾಯ ಕನ್ನಡ ಪರೀಕ್ಷೆಯ ಓಎಂಆರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆ‌ ಮತ್ತು ವರ್ಶನ್ ಕೋಡ್ ನಮೂದಿಸುವಾಗ ಸುಮಾರು ಒಂಬತ್ತು ಸಾವಿರ ಮಂದಿ ತಪ್ಪು ಮಾಡಿದ್ದು ಪುನಃ ಆ ರೀತಿ ಆಗಬಾರದು ಎನ್ನುವ ಕಾರಣಕ್ಕೆ ಅಭ್ಯಾಸ ಸಲುವಾಗಿ ಈ ಬಾರಿ ಮಾದರಿ ಓಎಂಆರ್ ಶೀಟ್ ನೀಡಲಾಗಿತ್ತು. ಸರಿಯಾಗಿ ಅಭ್ಯಾಸ ಮಾಡಿಕೊಂಡು ಬನ್ನಿ. ಪುನಃ ತಪ್ಪು ಗಳಾದರೆ ಅದಕ್ಕೆ ಪ್ರಾಧಿಕಾರ ಜವಾಬ್ದಾರಿಯಲ್ಲ.‌ ಮಾದರಿ ಓಎಂಆರ್ ಶೀಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತರುವುದು ಬೇಡ ಎಂದೂ‌ ಅವರು ಸಲಹೆ ನೀಡಿದ್ದಾರೆ.

    Continue Reading

    ತುಮಕೂರು

    Spider detection : ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆ

    Spider detection : ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ ಪತ್ತೆಯಾಗಿದೆ. ಸಂಶೋದಕರು ಜೇಡಕ್ಕೆ ಸ್ಥಳೀಯ ಹೆಸರನ್ನೇ ನಾಮಕರಣ ಮಾಡಿದ್ದು, “ತೆಂಕಣ ಜಯಮಂಗಲಿ” ಜೇಡ ಎಂಬ ಹೆಸರಿಟ್ಟಿದ್ದಾರೆ.

    VISTARANEWS.COM


    on

    Spider detection A new species of spider found on the banks of Jayamangali river

    ಜಯಮಂಗಲಿ ನದಿ ತೀರದಲ್ಲಿ ಹೊಸ ಪ್ರಭೇದದ ಜೇಡ (Spider detection) ಪತ್ತೆಯಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರಾರಂಭವಾದ ಸಂಶೋಧನೆ ವೇಳೆ ಹೊಸ ಪ್ರಭೇದ ಜೇಡ ಪತ್ತೆಯಾಗಿತ್ತು. ತುಮಕೂರು ಜಿಲ್ಲೆಯ ದೇವರಾಯನದುರ್ಗದ ಬಳಿಯ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ ಪತ್ತೆಯಾಗಿತ್ತು. ವೈಲ್ಡ್ ಲೈಫ್ ಅವರ್ನೇಸ್ ನೇಚರ್ ತಂಡ ಮೊದಲಿಗೆ 2023ರ ಏಪ್ರಿಲ್ ತಿಂಗಳಿನಲ್ಲಿ ಪತ್ತೆ ಹಚ್ಚಿತ್ತು. ಸಂಶೋದಕರು ಜೇಡಕ್ಕೆ ಸ್ಥಳೀಯ ಹೆಸರನ್ನೇ ನಾಮಕರಣ ಮಾಡಿದ್ದರು. “ತೆಂಕಣ ಜಯಮಂಗಲಿ” ಜೇಡ ಎಂಬ ಹೆಸರಿಟ್ಟಿದ್ದರು.

    Spider detection A new species of spider found on the banks of Jayamangali river

    ಪ್ರಭೇದವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದಾಗಿದೆ. ದೇವರಾಯನ ದುರ್ಗ ಕೇವಲ ಪುಣ್ಯ ಕ್ಷೇತ್ರವಷ್ಟೆ ಅಲ್ಲದೆ ಜೀವವೈವಿದ್ಯತೆಯ ತಾಣ ಎಂದು ಸಂಶೋಧಕ ಲೋಹಿತ್ ತಿಳಿಸಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಜೈವಿಕ ವಿಜ್ಲಾನ ಕೇಂದ್ರ ಮತ್ತು ಯೂನಿವರ್ಸಿಟಿ ಆಪ್ ಬ್ರಿಟೀಷ್ ಕೊಲಾಂಬಿಯಾ ಲ್ಯಾಬ್ ನ ಸಹಯೊಗದೊಂದಿಗೆ ಹೊಸ ಪ್ರಭೇದ ಗುರುತಿಸುವಿಕೆ ಕಾರ್ಯ ನಡೆದಿದೆ.

    Spider detection A new species of spider found on the banks of Jayamangali river

    ತುಮಕೂರಿನ ದೇವರಾಯನದುರ್ಗದ ಹೊಸ ಜೇಡ ಪ್ರಬೇಧವನ್ನು ಜಯಮಂಗಲಿ ನದಿಯ ಹೆಸರಿನಲ್ಲಿ ಪರಿಚಯಿಸಲಾಗುತ್ತಿದೆ. ಚಿನ್ಮಯ್ ಸಿ ಮಳಿಯೆ, ಲೋಹಿತ್ ವೈ ಟಿ ಮತ್ತು ವೈಲ್ಡ್ ಲೈಫ್ ಅವವೇರ್ನೆಸ್ ನೇಚರ್ ಕ್ಲಬ್ಬಿನ ನಿಶಾ ಬಿ ಜಿ ಕಾಡಿನ ಹುಡುಕಾಟಗಳಲ್ಲಿ ಈ ಜೇಡವು ಸಿಕ್ಕಿದ್ದು ಮತ್ತು ಮೊದಲು ಕಂಡಿದ್ದು ದೇವರಾಯನದುರ್ಗದ ಜಯಮಂಗಲಿ ನದಿ ಉಗಮ ಸ್ಥಾನದ ಬಳಿ, ಏಪ್ರಿಲ್ 2023 ರಲ್ಲಿ.

    ಒಂದೂವರೆ ವರ್ಷಗಳ ಹಿಂದೆ ಶುರುವಾದ ಈ ಸಂಶೋಧನೆ, ಜೀನಸ್ ಕೂಡ ಹೊಸದಾದ ಕಾರಣ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಟೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆ ಮ್ಯಾಡಿಸನ್ ಕೈ ಜೋಡಿಸಿದರು. ಎನ್ ಸಿ ಬಿ ಎಸ್ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ಗಳೊಂದಿಗಿನ ಸಹಯೋಗದಲ್ಲಿ ಮೂಡಿಬಂತು.

    ದೇವರಾಯನದುರ್ಗ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆ ಹೊಲ ಜಾಗದಿಂದ ಜೇಡದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅಂತರಾಷ್ಟ್ರೀಯ ನಿಯತಕಾಲಿಕೆ Zookeys ಈ ಸಂಶೋಧನ ಬರಹವನ್ನು 11 ಅಕ್ಟೋಬರ್ 2024 ರಂದು ಪ್ರಕಟಿಸಿದೆ.

    ಪ್ರಬೇಧವಷ್ಟೇ ಅಲ್ಲದೆ ಇದರ ಜೀನಸ್ ಕೂಡ ವಿಜ್ಞಾನ ಲೋಕಕ್ಕೆ ಹೊಸದು, ಅದನ್ನು ತೆಂಕಣ ಎಂದು ಹೆಸರಿಸಿದ್ದೇವೆ. ಎಷ್ಟೋ ಕೀಟ ಜೇಡಗಳಂತ ಜೀವಿಗಳ ಹೆಸರು ಆಂಗ್ಲ/ ಲ್ಯಾಟಿನ್ ಮಯವಾಗಿದ್ದು ಹೇಳಲು ನೆನಪಿಡಲು ಕಷ್ಟ, ಆ ಕಾರಣ ಇದು ತೆಂಕಣ ಜಯಮಂಗಲಿ.

    ದೇವರಾಯನದುರ್ಗ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿದೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಕಾಡಿನ ಕಣಜದಲ್ಲಿ ಇವೆ. ದೇವರಾಯನದುರ್ಗವನ್ನು ಕೇವಲ ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡಲು ಸಾಧ್ಯವಿಲ್ಲ, ಇದು ಜೀವವೈವಿಧ್ಯತೆಯ ತಾಣವೂ ಹೌದು.

    Continue Reading

    ಬೆಂಗಳೂರು

    Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

    Namma Metro : ಸಿಲಿಕಾನ್‌ ಸಿಟಿ ಬೆಂಗಳೂರು ಮಂದಿಗೆ ಮತ್ತೊಂದು ಶಾಕ್‌ ಕಾದಿದೆ. ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯಾಗುವ ಸಾಧ್ಯತೆ ಇದೆ.

    VISTARANEWS.COM


    on

    Namma metro ticket prices will be hiked soon
    ಸಾಂದರ್ಭಿಕ ಚಿತ್ರ

    ಬೆಂಗಳೂರು: ಈಗಾಗಲೇ ಬೆಲೆ ಏರಿಕೆಯಿಂದ ಕಂಗಲಾಗಿರುವ ಸಿಟಿ ಮಂದಿಗೆ ಮತ್ತೊಂದು ಬರೆ ಬೀಳಲಿದೆ. ಬೆಂಗಳೂರಿನಲ್ಲಿ ಶೀಘ್ರದಲ್ಲೇ ನಮ್ಮ ಮೆಟ್ರೋ‌ (Namma Metro) ಟಿಕೆಟ್ ದರ ಶೇ.15-20ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. 2017ರ ನಂತರ ಇದೀಗ ಮೆಟ್ರೋ ದರ ಏರಿಕೆಗೆ ತೀರ್ಮಾನ ಮಾಡಲಾಗಿದೆ.

    ಎಷ್ಟು ದರ ಏರಿಕೆ ಮಾಡಬೇಕೆಂದು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಕ್ಕೆ ಸಾರ್ವಜನಿಕರನೊಳಗೊಂಡ ಕಮಿಟಿ ರಚನೆ ಮಾಡಲಾಗಿದೆ. ಅಧಿಕೃತವಾಗಿ ಬಿಎಂಆರ್‌ಸಿಎಲ್ ಜಾಹೀರಾತು ನೀಡಿದೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

    ಹಾಲಿ ನಮ್ಮ ಮೆಟ್ರೋದ ಟಿಕೆಟ್ ದರ ಕನಿಷ್ಠ ದರ 10 ರೂ. ಆಗಿದ್ದು, ಗರಿಷ್ಠ ದರ 60 ರೂ. ಆಗಿದೆ. ಈಗ 15 ರಿಂದ 20 ರಷ್ಟು ಟಿಕೆಟ್ ದರ ಏರಿಕೆ ಆಗಿದೆ. ಮುಂದಿನ ತಿಂಗಳಿಂದ ಹೊಸ ದರ ಜಾರಿ ಆಗಲಿದೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರವಾಗಿ ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚೌಹಾನ್ ಪ್ರತಿಕ್ರಿಯಿಸಿದ್ದಾರೆ.

    ದರ ಏರಿಕೆ ಬಗ್ಗೆ ಕಮಿಟಿ ಆಗಿದ್ದು, ಒಂದು ಸಭೆ ಕೂಡಾ ಆಗಿದೆ. ಕಮಿಟಿ ಶೀಘ್ರದಲ್ಲೇ ವರದಿ ನೀಡಲಿದ್ದು, ವರದಿ ಆಧಾರದ ಮೇಲೆ ದರ ಏರಿಕೆ ಮಾಡಲಾಗುತ್ತದೆ. ರಾಜ್ಯ ಹಾಗೂ ಕೇಂದ್ರದ ಹಿರಿಯ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡ ಕಮಿಟಿ ಇದಾಗಿದೆ. ಕಮಿಟಿಯು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮಾಡಿದೆ. ನಮ್ಮ ಖರ್ಚು- ವೆಚ್ಚ ನೋಡಿಕೊಂಡು ದರ ಏರಿಕೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಬೆಂಗಳೂರು

    Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತ; ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ

    Water supply: ಟ್ರಾನ್ಸಫಾರ್ಮರ್‌ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.ಇದರಿಂದಾಗಿ ಬೆಂಗಳೂರಿಗೆ ಇಂದು ನೀರಿನ ಸಮಸ್ಯೆ ಎದುರಾಗಲಿದೆ.

    VISTARANEWS.COM


    on

    Power cut off due to a technical problem in the transformer Bengaluru faces water crisis today
    ಸಾಂದರ್ಭಿಕ ಚಿತ್ರ

    ಬೆಂಗಳೂರು: ಇಂದು ಗುರುವಾರ ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ (Water supply) ಎದುರಾಗಲಿದೆ. ನಿನ್ನೆ ಬುಧವಾರ ಸುರಿದ ಮಳೆಗೆ ಹಾರೋಹಳ್ಳಿ ಹಾಗೂ ಟಿ.ಕೆ ಹಳ್ಳಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಆಗಿದೆ. ಟ್ರಾನ್ಸಫಾರ್ಮರ್‌ಗಳಲ್ಲಿ ತಾಂತ್ರಿಕ ಸಮಸ್ಯೆ, ವಿದ್ಯುತ್ ಸಂಪರ್ಕ ಕಡಿತ ಉಂಟಾಗಿದೆ. ಹೀಗಾಗಿ ಪಂಪಿಂಗ್ ಸ್ಟೇಷನ್‌ಗಳಿಗೆ ವಿದ್ಯುತ್ ಸಂಪರ್ಕ‌ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಇಲ್ಲದೆ ನಗರಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಕೆಪಿಟಿಸಿಎಲ್ ಕಡೆಯಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಮರುಸ್ಥಾಪನೆಯವರೆಗೂ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಮಾಹಿತಿ ನೀಡಿದ್ದಾರೆ.

    ಬೆಸ್ಕಾಂ ಆನ್‌ಲೈನ್‌ ಸೇವೆ ಸ್ಥಗಿತ!

    ಅಕ್ಟೋಬರ್ 5, 6ಕ್ಕೆ ಬೆಸ್ಕಾಂ ಸಾಫ್ಟ್‌ವೇರ್‌ ಉನ್ನತೀಕರಣ ಹಿನ್ನೆಲೆಯಲ್ಲಿ ಆನ್‌ಲೈನ್‌ ಸೇವೆ ಅಲಭ್ಯವಾಗಿರಲಿದೆ. ಅಕ್ಟೋಬರ್ 4ರ ರಾತ್ರಿ 9 ರಿಂದ 7ರ ಬೆಳಗ್ಗೆ 6 ಗಂಟೆವರೆಗೂ ಅಪ್ಲಿಕೇಶನ್‌ ಡೌನ್‌ಟೈಮ್ ನಿಗದಿ ಮಾಡಲಾಗಿದೆ. ವಿದ್ಯುತ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ ಎನ್ನಲಾಗಿದೆ. ಸೇವೆಯ ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಬೆಸ್ಕಾಂ ಈ ಕಾರ್ಯಕ್ಕೆ ಮುಂದಾಗಿದೆ.

    ಸ್ಥಗಿತದ ಸಮಯದಲ್ಲಿ ಈ ಸೇವೆಗಳು ಅಲಭ್ಯ:

    -ಹೊಸ ಸಂಪರ್ಕಗಳ ಪ್ರಕ್ರಿಯೆ, ಹೆಸರು ಮತ್ತು ಸುಂಕ ಬದಲಾವಣೆಗಳು, ಹೆಸರು ವರ್ಗಾವಣೆ ಮತ್ತು ತಾತ್ಕಾಲಿಕ ಸಂಪರ್ಕಗಳಂತಹ ಕಾರ್ಯಾಚರಣೆಗಳಿಗೆ ‘ಆರ್‌ಎಪಿಡಿಆರ್‌ಪಿ’ ಅಪ್ಲಿಕೇಶನ್‌ ಲಭ್ಯವಿರುವುದಿಲ್ಲ.

    -ಬೆಸ್ಕಾಂ ಕ್ಯಾಶ್ ಕೌಂಟರ್‌ಗಳಲ್ಲಿ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ.

    -ಹೊಸ ಸಂಪರ್ಕಗಳು, ಹೆಸರು ಮತ್ತು ವಿಳಾಸ ಬದಲಾವಣೆ ಸೇರಿದಂತೆ ಇನ್ನಿತರ ಸೇವೆಗಳಿಗಾಗಿ ಗ್ರಾಹಕ ಪೋರ್ಟಲ್ ಲಭ್ಯವಿರುವುದಿಲ್ಲ.

    -ಗ್ರಾಹಕ ಪೋರ್ಟಲ್ ಮತ್ತು ಥರ್ಡ್ ಪಾರ್ಟಿ ಪಾವತಿ ಚಾನಲ್‌ಗಳ ಮೂಲಕ ಆನ್‌ಲೈನ್ ಬಿಲ್ ಪಾವತಿಗಳು ಅಕ್ಟೋಬರ್ 4ರ ರಾತ್ರಿ 9ರಿಂದ ಅಕ್ಟೋಬರ್ 5ರ ಬೆಳಗ್ಗೆ 11ರವರೆಗೆ ಲಭ್ಯವಿರುವುದಿಲ್ಲ. ಅಕ್ಟೋಬರ್ 5ರ ಬೆಳಗ್ಗೆ 11ರ ನಂತರ ಬಿಲ್ ಪಾವತಿ ಕಾರ್ಯವನ್ನು ಮಾತ್ರ ಪುನರಾರಂಭಿಸಲಾಗುತ್ತದೆ.

    -ಆರ್‌ಎಪಿಡಿಆರ್‌ಪಿ’ ಸೇವೆ ಇಲ್ಲದ ಕಾರಣ, ಮೊಬೈಲ್ ಅಪ್ಲಿಕೇಶನ್‌ಗಳ‌ ಸೇವೆಯೂ ಅಲಭ್ಯ.

    -ಡಬ್ಲ್ಯುಎಎಂಎಸ್ ಮೂಲಕ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

      ಯಾವ ನಗರಗಳಲ್ಲಿ ಆನ್‌ಲೈನ್ ಸೇವೆ ಇರುವುದಿಲ್ಲ?

      ಬೆಸ್ಕಾಂ: ಬೆಂಗಳೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ, ಕನಕಪುರ, ರಾಮನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಸಿರಾ, ಚನ್ನಪಟ್ಟಣ, ಆನೇಕಲ್, ಮುಳುಬಾಗಿಲು, ಬಂಗಾರಪೇಟೆ, ಹೊಸಕೋಟೆ, ದೊಡ್ಡಬಳ್ಳಾಪುರ, ಕೆ.ಜಿ.ಎಫ್, ಚಳ್ಳಕೆರೆ, ಕುಣಿಗಲ್, ಹರಪ್ಪನಹಳ್ಳಿ, ಹರಿಹರ, ಹಿರಿಯೂರು,ತಿಪಟೂರು ಹಾಗೂ ಗೌರಿಬಿದನೂರು.

      ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

      Continue Reading
      Advertisement
      Latest2 ಗಂಟೆಗಳು ago

      ಹೆಣ್ಣು ಮಗುವಿನ ತಂದೆಯಾದ ಖ್ಯಾತ ನಿರ್ದೇಶಕ ಅಟ್ಲಿ; ಅಭಿನಂದನೆಗಳ ಮಹಾಪೂರ

      Latest3 ಗಂಟೆಗಳು ago

      ಮಹಿಳಾ ಮೀಸಲು ಮಸೂದೆ ಕಾಂಗ್ರೆಸ್‌ ಪಕ್ಷದ ಕನಸು ಮತ್ತು ಕೂಸು: ಡಿ.ಕೆ.ಶಿವಕುಮಾರ್

      ಅವಿಭಾಗೀಕೃತ3 ಗಂಟೆಗಳು ago

      ಕಾಶ್ಮೀರ: ಕಂದಕಕ್ಕೆ ಉರುಳಿದ ಬಸ್; 15 ಸಾವು, ಹಲವರ ಸ್ಥಿತಿ ಗಂಭೀರ

      ದೇಶ3 ಗಂಟೆಗಳು ago

      ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

      Latest3 ಗಂಟೆಗಳು ago

      ಗ್ಯಾಂಗ್‌ಸ್ಟರ್ ಸಿನಿಮಾ ಎಂಬ ಭ್ರಮೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಯಶ್; ‘ಟಾಕ್ಸಿಕ್’ ಹಿಂದಿದೆ ಬೇರೆಯದೇ ಪ್ಲ್ಯಾನ್‌!

      ಅವಿಭಾಗೀಕೃತ3 ಗಂಟೆಗಳು ago

      ಅಹಿಂದ ರಕ್ಷಣೆ ಹೊಣೆ ಹೊತ್ತ ಸಚಿವ ಜಾರಕಿಹೊಳಿ: ಇದರ ಮರ್ಮವೇನು?

      Latest4 ಗಂಟೆಗಳು ago

      ಸಾಧ್ವಿ ಸೈಲ್ ಮಿಸ್ ವರ್ಲ್ಡ್ ಪ್ರಶಸ್ತಿ ಗೆಲ್ಲಲಿ: ಸಿಎಂ ಸಿದ್ದರಾಮಯ್ಯ ಆಶಯ

      Latest4 ಗಂಟೆಗಳು ago

      ಮೋದಿ-ಸಿದ್ದರಾಮಯ್ಯ ಗುಸುಗುಸು: ಇಬ್ಬರೂ ಮಾತನಾಡಿದ ವಿಷಯ ಬಹಿರಂಗ

      Latest5 ಗಂಟೆಗಳು ago

      ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಪರವಾಗಿಲ್ಲ: ಸಿಎಂ ಸಿದ್ದರಾಮಯ್ಯ ಟೀಕೆ

      Latest5 ಗಂಟೆಗಳು ago

      ಬಸವಣ್ಣನವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು: ಸಚಿವ ಸತೀಶ್‌ ಜಾರಕಿಹೊಳಿ

      galipata neetu
      ಕಿರುತೆರೆ2 ವರ್ಷಗಳು ago

      Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

      Kannada Serials
      ಕಿರುತೆರೆ3 ವರ್ಷಗಳು ago

      Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

      Sharmitha Gowda in bikini
      ಕಿರುತೆರೆ3 ವರ್ಷಗಳು ago

      Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

      Kannada Serials
      ಕಿರುತೆರೆ3 ವರ್ಷಗಳು ago

      Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

      Bigg Boss- Saregamapa 20 average TRP
      ಕಿರುತೆರೆ3 ವರ್ಷಗಳು ago

      Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

      Kannada Serials
      ಕಿರುತೆರೆ3 ವರ್ಷಗಳು ago

      Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

      Bigg Boss' dominates TRP; Sita Rama fell to the sixth position
      ಕಿರುತೆರೆ2 ವರ್ಷಗಳು ago

      Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

      geetha serial Dhanush gowda engagement
      ಕಿರುತೆರೆ2 ವರ್ಷಗಳು ago

      Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

      Kannada Serials
      ಕಿರುತೆರೆ3 ವರ್ಷಗಳು ago

      Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

      varun
      ಕಿರುತೆರೆ2 ವರ್ಷಗಳು ago

      Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

      Action Prince Dhruva Sarja much awaited film Martin to hit the screens on October 11
      ಸಿನಿಮಾ2 ವರ್ಷಗಳು ago

      Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

      Sudeep's birthday location shift
      ಸ್ಯಾಂಡಲ್ ವುಡ್2 ವರ್ಷಗಳು ago

      Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

      Actor Darshan
      ಸ್ಯಾಂಡಲ್ ವುಡ್2 ವರ್ಷಗಳು ago

      Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

      ಮಳೆ2 ವರ್ಷಗಳು ago

      Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

      karnataka Weather Forecast
      ಮಳೆ2 ವರ್ಷಗಳು ago

      Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

      Bellary news
      ಬಳ್ಳಾರಿ2 ವರ್ಷಗಳು ago

      Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

      Maravoor bridge in danger Vehicular traffic suspended
      ದಕ್ಷಿಣ ಕನ್ನಡ2 ವರ್ಷಗಳು ago

      Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

      Wild Animals Attack
      ಚಿಕ್ಕಮಗಳೂರು2 ವರ್ಷಗಳು ago

      Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

      Karnataka Weather Forecast
      ಮಳೆ2 ವರ್ಷಗಳು ago

      Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

      assault case
      ಬೆಳಗಾವಿ2 ವರ್ಷಗಳು ago

      Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

      ಟ್ರೆಂಡಿಂಗ್‌