Site icon Vistara News

ಡ್ರಗ್ಸ್‌ ಮತ್ತಲ್ಲಿ ರಸ್ತೆ ಮೇಲೆ ಹೊರಳಾಡಿದ ಯುವತಿಯರು; ನಟನಿಂದ ‘ಉಡ್ತಾ ಪಂಜಾಬ್’ ಎಚ್ಚರಿಕೆ

Young Girls

Actor-Director Ramesh Pardeshi Raises Alarm on Pune’s Drug Issue After Recent Seizure

ಮುಂಬೈ: ಮಾದಕವಸ್ತು ನಿಯಂತ್ರಣಕ್ಕಾಗಿ ಮಾದಕವಸ್ತು ನಿಯಂತ್ರಣ ಬ್ಯೂರೋ (NCB) ಎಷ್ಟೇ ಕ್ರಮ ತೆಗೆದುಕೊಂಡರೂ ದೇಶದ ಹಲವೆಡೆ ಸುಲಭವಾಗಿ ಯುವಕ-ಯುವತಿಯರ ಕೈಗೆ ಡ್ರಗ್ಸ್‌ ಸಿಗುತ್ತಿದೆ. ಇದರಿಂದಾಗಿ ಯುವಕ-ಯುವತಿಯರು ಮಾದಕವಸ್ತುಗಳ ದಾಸರಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಪುಣೆಯಲ್ಲಿರುವ ವೆತಾಲ್‌ ಹಿಲ್‌ನಲ್ಲಿ (Vetal Hill) ಇತ್ತೀಚೆಗೆ ಇಬ್ಬರು ಯುವತಿಯರು ಡ್ರಗ್ಸ್‌ ಸೇವಿಸಿದ ಮತ್ತಿನಲ್ಲಿ ರಸ್ತೆ ಮೇಲೆಯೇ ಹೊರಳಾಡಿದ್ದಾರೆ. ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೇ ನಟ, ನಿರ್ದೇಶಕ ರಮೇಶ್‌ ಪರ್ದೇಶಿ (Ramesh Pardeshi) ಅವರು ಡ್ರಗ್ಸ್‌ ಜಾಲದ ಕುರಿತು ಎಚ್ಚರಿಕೆ ನೀಡಿದ್ದಾರೆ.

“ಇತ್ತೀಚೆಗೆ ಪುಣೆಯ ವೆತಾಲ್‌ ಹಿಲ್‌ ಪ್ರದೇಶದಲ್ಲಿ ಸಾರ್ವಜನಿಕವಾಗಿ ಇಬ್ಬರು ಯುವತಿಯರು ಬಿಯರ್‌, ಡ್ರಗ್ಸ್‌ ಮತ್ತಿನಲ್ಲಿ ಹೊರಳಾಡಿದ್ದಾರೆ. ರಸ್ತೆ ಮೇಲೆಯೇ ಅವರು ಬಿದ್ದು ಹೊರಳಾಡಿದ್ದಾರೆ. ಇಂತಹ ಪ್ರಕರಣಗಳು ಯುವಕ-ಯುವತಿಯರು ಎತ್ತ ಸಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಯುವತಿಯರು ಶ್ರೀಮಂತ ಹಾಗೂ ಶಿಕ್ಷಣವಂತ ಕುಟುಂಬಕ್ಕೆ ಸೇರಿದವರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಆದರೆ, ಡ್ರಗ್ಸ್‌ ಜಾಲವು ಅವರು ಸಾರ್ವಜನಿಕವಾಗಿ ಹೀಗೆ ವರ್ತಿಸುವಂತೆ ಮಾಡಿದೆ” ಎಂದು ತಿಳಿಸಿದ್ದಾರೆ.

“ದೇಶದ ಯುವಕ-ಯುವತಿಯರು ಯಾವುದೇ ಕಾರಣಕ್ಕೂ ಮಾದಕವಸ್ತುಗಳ ವ್ಯಸನಿಗಳಿಗೆ ದಾಸರಾಗಬಾರದು. ನಾನು, ನೀವು, ಎಲ್ಲ ಸಹೋದರ-ಸಹೋದರಿಯರು ಕೂಡಿ ಮಾದಕವಸ್ತುಗಳ ವಿರುದ್ಧ ಹೋರಾಡಬೇಕು. ಪುಣೆ ಸೇರಿ ಇಡೀ ಮಹಾರಾಷ್ಟ್ರವು ಸಿರಿವಂತ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರಗಳನ್ನು ಹೊಂದಿದೆ. ಹಾಗಾಗಿ, ಯುವಕ-ಯುವತಿಯರು ಡ್ರಗ್ಸ್‌ ವಿರುದ್ಧ ಹೋರಾಡಬೇಕೇ ಹೊರತು, ಅವುಗಳ ದಾಸರಾಗಬಾರದು. ನಾವೆಲ್ಲರೂ ಒಗ್ಗೂಡಿ ಪುಣೆಯನ್ನು ‘ಉಡ್ತಾ ಪಂಜಾಬ್’‌ ಆಗಿ ಮಾಡಬಾರದು” ಎಂದು ಕೋರಿದ್ದಾರೆ.

ಇದನ್ನೂ ಓದಿ: ನೀರಾ ಕುಡಿದಾಗ ನನಗೆ ಅಮಲಾಗಲಿಲ್ಲ: ಅನುಭವ ಮೆಲುಕು ಹಾಕಿದ ಡಿಸಿಎಂ ಡಿ.ಕೆ.ಶಿವಕುಮಾರ್

ಕೆಲ ದಿನಗಳ ಹಿಂದಷ್ಟೇ, ದೆಹಲಿ ಹಾಗೂ ಪುಣೆಯಲ್ಲಿ ಸುಮಾರು 3 ಸಾವಿರ ಕೋಟಿ ರೂ.ಗಿಂತ ಅಧಿಕ ಮೌಲ್ಯದ ಮೆಫೆಡ್ರೋನ್‌ (Mephedrone) (ಮಿಯಾಂವ್‌ ಮಿಯಾಂವ್) ಮಾದಕವಸ್ತುವನ್ನು ಜಪ್ತಿ (Drugs Seized) ಪೊಲೀಸರು ಜಪ್ತಿ ಮಾಡಿದ್ದರು. ಸೋಮವಾರ (ಫೆಬ್ರವರಿ 21) ಸಂಜೆಯೇ ಅಧಿಕಾರಿಗಳು ಹಾಗೂ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದು, ಎರಡು ದಿನಗಳಲ್ಲಿ ಬೃಹತ್‌ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕುರುಕುಂಭ ಎಂಐಡಿಸಿಯಲ್ಲಿಯೇ ಪೊಲೀಸರು ಸುಮಾರು 1,400 ಕೋಟಿ ರೂ. ಮೌಲ್ಯದ 700 ಕೆ.ಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version