Site icon Vistara News

ಗೆದ್ದಲುಗಳಿವು; ಭಾರತವನ್ನೇ ತೆಗಳಿದ್ದ ಪತ್ರಕರ್ತೆ ಸಾಗರಿಕಾ ಘೋಷ್​ ವಿರುದ್ಧ ನಟ ಪರೇಶ್​ ರಾವಲ್​ ಗರಂ

Paresh Rawal

ನವದೆಹಲಿ: ಭಾರತೀಯರೆಲ್ಲರೂ ಏಕಕಾಲಕ್ಕೆ ‘ಮಾಲ್ಡೀವ್ಸ್​​ಗೆ ಬಹಿಷ್ಕಾರ’ (Boycott Maldives) ಅಭಿಯಾನ ನಡೆಸುತ್ತಿದ್ದ ವೇಳೆ ಭಾರತೀಯ ಪ್ರವಾಸೋದ್ಯಮಕ್ಕೆ ‘ರಿಯಾಲಿಟಿ ಚೆಕ್’ ಅಗತ್ಯವಿದೆ ಎಂದು ಹೇಳಿದ್ದ ಪತ್ರಕರ್ತೆ ಸಾಗರಿಕಾ ಘೋಷ್​ ಅವರನ್ನು ಹಿರಿಯ ನಟ ಮತ್ತು ರಾಜಕಾರಣಿ ಪರೇಶ್ ರಾವಲ್ ‘ಗೆದ್ದಲು’ ಎಂದು ಜರೆದಿದ್ದಾರೆ. ಮಾಲ್ಡೀವ್ಸ್​​ನ ಪ್ರೊಗ್ರೆಸಿವ್​ ಪಾರ್ಟಿಯ ಕೌನ್ಸಿಲ್ ಸದಸ್ಯ ಜಾಹಿದ್ ರಮೀಜ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿಯನ್ನು ಅಣಕಿಸಿದ್ದರು. ಅಲ್ಲದೆ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಭಾರತವು ಮಾಲ್ಡೀವ್ಸ್​​ ಜತೆ ಸ್ಪರ್ಧಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಅದಾದ ಬಳಿಕ ಬಾಯ್ಕಾಟ್​ ಮಾಲ್ಡಿವ್ಸ್​ ಶುರುವಾಗಿತ್ತು.

ಟ್ವೀಟ್ ವೈರಲ್ ಆದ ಕೂಡಲೇ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾರತ ಪರ ಹೇಳಿಕೆ ನೀಡಿದ್ದರು. ಅಭಿಮಾನಿಗಳು ಮತ್ತು ಬೆಂಬಲಿಗರಿಗೆ ಭಾರತೀಯ ದ್ವೀಪಗಳನ್ನು ರಜಾ ತಾಣವಾಗಿ ಆಯ್ಕೆ ಮಾಡುವಂತೆ ಸಲಹೆ ಕೊಟ್ಟಿದ್ದರು. ಇದೇ ವೇಳೆ ಅಂದರೆ ಜನವರಿ 8 ರಂದು ಪತ್ರಕರ್ತೆ, ಅಂಕಣಗಾರ್ತಿ ಸಾಗರಿಕಾ ಘೋಷ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ಯಶಸ್ವಿ ಪ್ರವಾಸೋದ್ಯಮಕ್ಕೆ ಉನ್ನತ ದರ್ಜೆಯ ಮೂಲಸೌಕರ್ಯ ಮತ್ತು ಅಂತರ್ಗತ ಸಾಂಸ್ಕೃತಿಕ ವಾತಾವರಣದ ಅಗತ್ಯವಿದೆ ಎಂದು ಬರೆದುಕೊಂಡಿದ್ದರು.

ಭಾರತದಲ್ಲಿನ ಪ್ರವಾಸೋದ್ಯಮದ ಸ್ಥಿತಿಯ ಬಗ್ಗೆ ಸಮಗ್ರ ಮೌಲ್ಯಮಾಪನ ಬೇಕೆಂದು ಅವರು ಹೇಳಿದ್ದರು. ಮಾಲ್ಡೀವ್ಸ್ ಸುಮಾರು 170 ಉನ್ನತ ದರ್ಜೆಯ ರೆಸಾರ್ಟ್​​ಗಳು ಮತ್ತು 900 ಅತಿಥಿ ಗೃಹಗಳನ್ನು ಹೊಂದಿದೆ. ಲಕ್ಷದ್ವೀಪವು ಬೆರಳೆಣಿಕೆಯಷ್ಟು ಫೈವ್ ಸ್ಟಾರ್ ವರ್ಗಕ್ಕೆ ಸೇರದ ಹೋಟೆಗಳನ್ನು ಹೊಂದಿದೆ. ಕಳೆದ ಬಾರಿ ಲಕ್ಷದ್ವೀಪದಲ್ಲಿ ಲೆಫ್ಟಿನೆಂಟ್ ಗವರ್ನರ್ ಗೋಮಾಂಸ ನಿಷೇಧಕ್ಕೆ ಶಿಫಾರಸು ಮಾಡಿದಾಗ ಸುದ್ದಿಯಾಗಿತ್ತು. ಪ್ರವಾಸೋದ್ಯಮವು ಗುಣಮಟ್ಟದ, ಮೂಲಸೌಕರ್ಯ ಮತ್ತು ಮುಕ್ತ ಸಂಸ್ಕೃತಿಯನ್ನು ಬಯಸುತ್ತದೆ. ಮಾಲ್ಡೀವ್ಸ್ ಅನ್ನು ಬಹಿಷ್ಕರಿಸುವ ಬದಲು ಭಾರತೀಯ ಪ್ರವಾಸೋದ್ಯಮದ ರಿಯಾಲಿಟಿ ಚೆಕ್ ಮಾಡೋಣ ಸಾಗರಿಕಾ ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ : Boycott Maldives: `ಭಾರತವೇ ನಮ್ಮ 911′ ಎಂದ ಮಾಲ್ಡೀವ್ಸ್ ಮಾಜಿ ಸಚಿವೆ

ಅವರ ಪೋಸ್ಟ್​​ಗೆ ಪ್ರತಿಕ್ರಿಯಿಸಿರುವ ಪರೇಶ್ ರಾವಲ್, “ಸಾಗರಿಕಾ ಕಲ್ಪನೆಯೂ ಕರುಣಾಜನಕವಾಗಿದೆ! ನಿರೀಕ್ಷಿಸಿದಂತೆ ಗೆದ್ದಲುಗಳು ಮರದಿಂದ ಹೊರಬರುತ್ತಿವೆ. ಎಂದು ಪ್ರತಿಕ್ರಿಯಿಸಿದ್ದಾರೆ.

ಲಕ್ಷ್ಮ ದ್ವೀಪಕ್ಕೆ ಹೋಗಲು ಸೆಲೆಬ್ರಿಟಿಗಳ ಸಲಹೆ

ಅಮಿತಾಬ್ ಬಚ್ಚನ್, ರಣವೀರ್ ಸಿಂಗ್, ಶ್ರದ್ಧಾ ಕಪೂರ್, ವರುಣ್ ಧವನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಕಂಗನಾ ರನೌತ್, ಜಾನ್ ಅಬ್ರಹಾಂ ಮತ್ತು ಇತರರು ಇಂಡಿಯನ್ ಐಲ್ಯಾಂಡ್ಸ್ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ‘ವಿಸಿಟ್ ಲಕ್ಷದ್ವೀಪ ಅಭಿಯಾನ’ ನಡೆಸಿದ್ದರು. ತಮ್ಮ ಬೆಂಬಲಿಗರು ಮತ್ತು ಸಾಮಾಜಿಕ ಜಾಲಗಾಣಗಳ ಅನುಯಾಯಿಗಳಿಗೆ ಭಾರತೀಯ ದ್ವೀಪಗಳಿಗೆ ಭೇಟಿ ನೀಡುವಂತೆ ಹೇಳಿದ್ದರು.

ಅದಕ್ಕಿಂತ ಮೊದಲು ಪ್ರಧಾನಿ ಮೋದಿಯವರ ಲಕ್ಷದ್ವೀಪ ಭೇಟಿಯ ಬಗ್ಗೆ ಪ್ರತಿಕ್ರಿಯಿಸಿದ ಮಾಲ್ಡೀವ್ಸ್ ನಾಯಕ ಜಾಹಿದ್ ರಮೀಜ್, “ಈ ಕ್ರಮವು ಉತ್ತಮವಾಗಿದೆ. ಆದಾಗ್ಯೂ, ನಮ್ಮೊಂದಿಗೆ ಸ್ಪರ್ಧಿಸುವ ಕಲ್ಪನೆ ಭ್ರಮೆಯಾಗಿದೆ. ನಾವು ನೀಡುವ ಸೇವೆಯನ್ನು ನೀವು ಹೇಗೆ ಒದಗಿಸಬಹುದು? ಅವರು ಅಷ್ಟು ಸ್ವಚ್ಛವಾಗಿರಲು ಹೇಗೆ ಸಾಧ್ಯ? ಕೋಣೆಗಳಲ್ಲಿನ ವಾಸನೆಯೇ ದೊಡ್ಡದು ಎಂದಿದ್ದರು.

Exit mobile version