Site icon Vistara News

Sunny Leone: ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಸನ್ನಿ ಲಿಯೋನ್;‌ ಸಾಕ್ಷಿ ಇಲ್ಲಿದೆ!

Sunny Leone

Actor Sunny Leone's photo appears on Uttar Pradesh Police recruitment exam admit card

ಲಖನೌ: ಮಾದಕ ನಟಿ ಸನ್ನಿ ಲಿಯೋನ್‌ ಅವರಿಗೆ ಅಭಿಮಾನಿಗಳು ಮಾತ್ರವಲ್ಲ, ‘ಆರಾಧಕರು’ ಕೂಡ ಇದ್ದಾರೆ. ಸನ್ನಿ ಲಿಯೋನ್‌ (Sunny Leone) ಅವರು ಕೂಡ ಅಷ್ಟೇ, ತಮ್ಮ ಮಾದಕತೆ ಮೂಲಕವೇ ಅಭಿಮಾನಿಗಳ ಮನರಂಜಿಸುತ್ತಾರೆ. ಇನ್ನು ಸನ್ನಿ ಲಿಯೋನ್‌ ಅವರ ಅಭಿಮಾನಿಗಳು ಕೆಲವೊಮ್ಮೆ ಚಿತ್ರ ವಿಚಿತ್ರವಾಗಿ ಅಭಿಮಾನ ಪ್ರದರ್ಶಿಸುತ್ತಾರೆ. ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ (Uttar Pradesh Police Constable Recruitment) ಸನ್ನಿ ಲಿಯೋನ್‌ ಹೆಸರಲ್ಲಿ ಅರ್ಜಿ ಹಾಕಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಹೌದು, ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿಯ ಹಾಲ್‌ ಟಿಕೆಟ್‌ನಲ್ಲಿ ಸನ್ನಿ ಲಿಯೋನ್‌ ಅವರ ಫೋಟೊ ಕಾಣಿಸಿಕೊಂಡಿದ್ದು, ಇದೀಗ ವೈರಲ್‌ (Viral News) ಆಗಿದೆ.

ಸನ್ನಿ ಲಿಯೋನ್‌ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿಯೇ ಉತ್ತರ ಪ್ರದೇಶ ಪೊಲೀಸ್‌ ನೇಮಕಾತಿ ಪರೀಕ್ಷೆಗೆ ಅರ್ಜಿ ಹಾಕಿದ್ದಾನೆ. ಈಗ ರಾಜ್ಯ ಸರ್ಕಾರವು ಸನ್ನಿ ಲಿಯೋನ್‌ ಹೆಸರಿನಲ್ಲಿ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದ್ದು, ಅವವರಿಗೆ ಕನೌಜ್‌ ಜಿಲ್ಲೆಯ ತಿರ್ವಾದಲ್ಲಿರುವ ಶ್ರೀಮತಿ ಸೋನೆಶ್ರೀ ಮೆಮೋರಿಯಲ್‌ ಗರ್ಲ್ಸ್‌ ಕಾಲೇಜ್‌ಅನ್ನು ಪರೀಕ್ಷಾ ಕೇಂದ್ರವನ್ನಾಗಿ ನೀಡಲಾಗಿದೆ. ಸಿಂಪಲ್‌ ಮ್ಯಾನ್‌ ಎಂಬ ಎಕ್ಸ್‌ ಖಾತೆಯಿಂದ ಸನ್ನಿ ಲಿಯೋನ್‌ ಫೋಟೊ ಇರುವ ಹಾಲ್‌ಟಿಕೆಟ್‌ ಫೋಟೊ ವೈರಲ್‌ ಅಪ್‌ಲೋಡ್‌ ಮಾಡಲಾಗಿದೆ.

ಹಾಲ್‌ಟಿಕೆಟ್‌ನಲ್ಲಿ ನೋಂದಣಿಯಾದ ಮೊಬೈಲ್‌ ಸಂಖ್ಯೆಗೆ ಹಿಂದುಸ್ತಾನ್‌ ಟೈಮ್ಸ್‌ ಕರೆ ಮಾಡಿದಾಗ, ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ಮೊಬೈಲ್‌ ಸಂಖ್ಯೆ ನೋಂದಣಿಯಾಗಿದೆ. ಇನ್ನು, ನೋಂದಣಿಗೆ ಮುಂಬೈ ವಿಳಾಸ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸನ್ನಿ ಲಿಯೋನ್‌ ಹೆಸರಿನಲ್ಲಿ ಅರ್ಜಿ ಹಾಕಿದವರು ಫೆಬ್ರವರಿ 17ರಂದು ಪರೀಕ್ಷೆ ಬರೆಯಬೇಕಿತ್ತು. ಆದರೆ, ಯಾರೂ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿಯು ಮಾಹಿತಿ ನೀಡಿದೆ.

ಇದನ್ನೂ ಓದಿ: Sunny Leone: ರೆಡ್‌ ಕಟ್‌ ಡ್ರೆಸ್‌ನಲ್ಲಿ ಸಖತ್‌ ಸೆಕ್ಸಿಯಾಗಿ ಕಂಡ ಸನ್ನಿ ಲಿಯೋನ್!

‌ವೈರಲ್‌ ಆಗಿರುವ ಪೋಸ್ಟ್‌ಗೆ ಹತ್ತಾರು ಜನ ಪ್ರತಿಕ್ರಿಯಿಸಿದ್ದಾರೆ. ‘ಇದೆಂಥ ಕರ್ಮ’ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ‘ಮೊದಲೇ ಗೊತ್ತಾಗಿದ್ದರೆ, ನಾನು ಕೂಡ ಅದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದೆ’ ಎಂದು ಮತ್ತೊಬ್ಬ ಅಭಿಮಾನಿ ಆಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದಕ್ಕೂ ಮೊದಲು ಕೂಡ ಸನ್ನಿ ಲಿಯೋನ್‌ ಅವರ ಫೋಟೊವನ್ನು ಪರೀಕ್ಷೆಯ ನೋಂದಣಿಗೆ ಬಳಸಲಾಗಿತ್ತು. ಈಗ ಮತ್ತೊಮ್ಮೆ ಸನ್ನಿ ಲಿಯೋನ್‌ ಫೋಟೊ ಬಳಸಲಾಗಿದೆ. ಆದರೆ, ಆ ಅಭಿಮಾನಿ ಯಾರು ಎಂಬುದು ಇದುವರೆಗೆ ಗೊತ್ತಾಗಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version