Site icon Vistara News

Gujarat Summit: 2 ಲಕ್ಷ ಕೋಟಿ ರೂ. ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ; ಅದಾನಿ ಘೋಷಣೆ

Gautam Adani

US probing Indian billionaire Gautam Adani and his group over potential bribery

ಗಾಂಧಿನಗರ: ಗುಜರಾತ್‌ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವೈಬ್ರಂಟ್‌ ಗುಜರಾತ್‌ ಗ್ಲೋಬಲ್‌ ಸಮಿಟ್‌ಗೆ (Vibrant Gujarat Global Summit 2024) ಬುಧವಾರ ಚಾಲನೆ ನೀಡಿದ್ದಾರೆ. ದೇಶ-ವಿದೇಶಗಳ ಗಣ್ಯರು, ಉದ್ಯಮಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಭಾರಿ ಪ್ರಮಾಣದ ಹೂಡಿಕೆ ನಿರೀಕ್ಷಿಸಲಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಅದಾನಿ ಗ್ರೂಪ್‌ (Adani Group) ಚೇರ್ಮನ್‌ ಗೌತಮ್‌ ಅದಾನಿ (Gautam Adani) ಅವರು ಗುಜರಾತ್‌ನಲ್ಲಿ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ.

ಹೂಡಿಕೆದಾರರ ಸಮಾವೇಶದಲ್ಲಿ ಗೌತಮ್‌ ಅದಾನಿ ಮಾತನಾಡಿದರು. “ಗುಜರಾತ್‌ನಲ್ಲಿ ಮುಂದಿನ ಐದು ವರ್ಷಗಳಲ್ಲಿ ಅದಾನಿ ಗ್ರೂಪ್‌ 2 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಇದರಿಂದ 1 ಲಕ್ಷ ಜನರಿಗೆ ನೇರವಾಗಿ ಉದ್ಯೋಗ ದೊರೆಯಲಿದೆ” ಎಂದು ಘೋಷಿಸಿದರು. “ಮರು ನವೀಕರಣ ಸಂಪನ್ಮೂಲದ ಬಳಕೆ, ಸೋಲಾರ್‌ ಪ್ಯಾನೆಲ್‌ಗಳ ಅಳವಡಿಕೆ ಸೇರಿ ಹಲವು ದಿಸೆಯಲ್ಲಿ ಅದಾನಿ ಗ್ರೂಪ್‌ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಬೆಂಬಲ ನೀಡುತ್ತಿದೆ” ಎಂದೂ ಹೇಳಿದರು.

“ಇದಕ್ಕೂ ಮೊದಲು ನಡೆದ ಹೂಡಿಕೆದಾರರ ಸಮಾವೇಶದಲ್ಲಿ ನೀಡಿದ ಭರವಸೆಯಂತೆಯೇ ಗುಜರಾತ್‌ನಲ್ಲಿ ಹೂಡಿಕೆ ಮಾಡಿದ್ದೇವೆ. 2025ರ ವೇಳೆಗೆ ಗುಜರಾತ್‌ನಲ್ಲಿ ಅದಾನಿ ಗ್ರೂಪ್‌ 55 ಸಾವಿರ ಕೋಟಿ ರೂ. ಹೂಡಿಕೆ ಮಾಡುತ್ತದೆ ಎಂದು ಘೋಷಿಸಿದ್ದೆವು. ಈಗಾಗಲೇ ಗುಜರಾತ್‌ನಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆ ಮಾಡಿದ್ದೇವೆ. ಹಾಗೆಯೇ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇದುವರೆಗೆ ರಾಜ್ಯದಲ್ಲಿ 25 ಸಾವಿರ ಉದ್ಯೋಗ ಸೃಷ್ಟಿ ಮಾಡಿದ್ದೇವೆ” ಎಂದು ಗೌತಮ್‌ ಅದಾನಿ ಮಾಹಿತಿ ನೀಡಿದರು.

ಇದನ್ನೂ ಓದಿ: Gautam Adani: ಕೋರ್ಟ್‌ ರಿಲೀಫ್‌ ಬೆನ್ನಲ್ಲೇ ಗೌತಮ್‌ ಅದಾನಿ ದೇಶದ ನಂಬರ್ 1 ಶ್ರೀಮಂತ!

ಮೋದಿ ಕುರಿತು ಅದಾನಿ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕುರಿತು ಗೌತಮ್‌ ಅದಾನಿ ಮೆಚ್ಚುಗೆಯ ಮಾತುಗಳನ್ನಾಡಿದರು. “ನರೇಂದ್ರ ಮೋದಿ ಅವರ ದೂರ ದೃಷ್ಟಿ, ಮಹೋನ್ನತ ಉದ್ದೇಶ, ಉತ್ತಮ ಆಡಳಿತ ಹಾಗೂ ಘೋಷಿಸಿದ್ದನ್ನು ಜಾರಿ ಮಾಡುವ ವೇಗ ಇರುವುದರಿಂದಲೇ ಇಂದು ಗುಜರಾತ್‌ ಸಮಾವೇಶ ಯಶಸ್ವಿಯಾಗಿದೆ. ಅಲ್ಲದೆ, ಅವರು 2014ರಲ್ಲಿ ಪ್ರಧಾನಿಯಾದ ಬಳಿಕ ದೇಶದ ಜಿಡಿಪಿ ಶೇ.185ರಷ್ಟು, ತಲಾದಾಯ ಶೇ.165ರಷ್ಟು ಹೆಚ್ಚಾಗಿದೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದಲ್ಲಿ ಜಿ-20 ಶೃಂಗಸಭೆಯ ಆಯೋಜನೆ, ಕೊರೊನಾ ಬಿಕ್ಕಟ್ಟು ನಿರ್ವಹಣೆ, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಸೇರಿ ಹಲವು ಸಾಧನೆಗಳಿಗೆ ಭಾರತ ಸಾಕ್ಷಿಯಾಗಿದೆ” ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version