Site icon Vistara News

Adani-Hindenburg case: ಅದಾನಿ ಷೇರು ವ್ಯವಹಾರ ತನಿಖೆ ಪೂರ್ಣ! ಸುಪ್ರೀಂಗೆ ಸೆಬಿ ಮಾಹಿತಿ, ಕೆಲವು ಕೇಸ್‌ನಲ್ಲಿ ಕ್ರಮ ಸಾಧ್ಯತೆ!

Supreme Court

ನವದೆಹಲಿ: ಉದ್ಯಮಿ ಗೌತಮ್ ಅದಾನಿ (billionaire Gautam Adani) ನೇತೃತ್ವದ ಕಂಪನಿಗಳ ಷೇರು ವ್ಯವಹಾರಕ್ಕೆ (Share Market Business) ಸಂಬಂಧಿಸಿದಂತೆ ತನಿಖೆಯನ್ನು (Probe Completed) ಪೂರ್ಣಗೊಳಿಸಿರುವುದಾಗಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ (SEBI) ಸುಪ್ರೀಂ ಕೋರ್ಟ್‌ಗೆ ಆಗಸ್ಟ್ 25, ಶುಕ್ರವಾರ ಮಾಹಿತಿ ನೀಡಿದೆ(Supreme Court). ಗೌತಮ್ ಅದಾನಿ ಅವರ ಕಂಪನಿಯು ಷೇರು ಮಾರುಕಟ್ಟೆ ಕಾನೂನುಗಳನ್ನು ಉಲ್ಲಂಘಿಸಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆಯನ್ನು ಪೂರ್ಣಗೊಳಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಕ್ರಮಕ್ಕೆ ಶಿಫಾರಸು ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಷೇರು ಪೇಟೆಯಲ್ಲಿ ಲಿಸ್ಟ್ ಆಗಿರುವ ಅದಾನಿ ಸಮೂಹದ ಕಂಪನಿಗಳು ಒಳಗೊಂಡಿರುವ 24 ವಹಿವಾಟುಗಳನ್ನು ತನಿಖೆ ಮಾಡಲಾಗಿದ್ದು, ಈ ಪೈಕಿ 22 ವಹಿವಾಟುಗಳು ಅಂತಿಮ ಸ್ವರೂಪದಲ್ಲಿವೆ ಎಂದು ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 29ರಂದು ನಡೆಸಲಿದೆ. ತನಿಖೆಯ ಆಧಾರದ ಮೇಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಸೆಬಿ ಹೇಳಿದೆ.

ಇದಕ್ಕೂ ಮೊದಲು ಆಗಸ್ಟ್ 14ರಂದು, ಅದಾನಿ ಗ್ರೂಪ್ ಕುರಿತಾದ ತನಿಖೆಯನ್ನು ಪೂರ್ಣಗೊಳಿಸಲು ಹದಿನೈದು ದಿನಗಳ ಕಾಲಾವಕಾಶವನ್ನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿತ್ತು. 24 ವಹಿವಾಟುಗಳ ಪೈಕಿ 17 ವಹಿವಾಟುಗಳ ತನಿಖೆಯನ್ನು ಪೂರ್ಣಗೊಳಿಸಲಾಗಿದೆ. ಉಳಿದ ವಹಿವಾಟುಗಳ ತನಿಖೆಗೆ ಸಮಯ ಬೇಕಾಗಿದೆ ಎಂದು ಕೇಳಿಕೊಂಡಿತ್ತು.

ಅಮೆರಿಕ ಮೂಲದ ಹಿಂಡೇನ್‌ಬರ್ಗ್ ರಿಸರ್ಚ್ ಸಂಸ್ಥೆಯು, ಅದಾನಿ ಗ್ರೂಪ್ ಕಂಪನಿಗಳು ಷೇರು ಮಾರುಕಟ್ಟೆಯ ನಿಯಮಗಳನ್ನು ಉಲ್ಲಂಘಿಸಿ ವ್ಯವಹಾರ ಮಾಡುತ್ತಿವೆ ಎಂದು ವರದಿ ನೀಡಿತ್ತು. ಬಳಿಕ ಕಂಪನಿಗೆ ಸುಮಾರು 100 ಶತಕೋಟಿ ಡಾಲರ್ ನಷ್ಟ ಉಂಟಾಗಿತ್ತು.

ಈ ಸುದ್ದಿಯನ್ನೂ ಓದಿ: LIC : ಹಿಂಡೆನ್‌ಬರ್ಗ್‌ನಿಂದ ವಿಚಲಿತವಾಗದ ಎಲ್‌ಐಸಿಯಿಂದ, ಅದಾನಿ ಎಂಟರ್‌ಪ್ರೈಸಸ್‌ನ 3.5 ಲಕ್ಷ ಷೇರು ಖರೀದಿ

ಈ ಪ್ರಕರಣದ ಬಳಿಕ ಸುಪ್ರೀಂ ಕೋರ್ಟ್, ಷೇರು ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅದಾನಿ ಕಂಪನಿಯ ಕುರಿತು ತನಿಖೆ ಮಾಡುವಂತೆ ಸೆಬಿಗೆ ಸೂಚಿಸಿತ್ತು. ಅಲ್ಲದೇ, ಮಾರ್ಚ್ ತಿಂಗಳಲ್ಲಿ ರಚಿಸಲಾದ, ಹಿರಿಯ ಬ್ಯಾಂಕರ್ಸ್ ಹಾಗೂ ನಿವೃತ್ತ ನ್ಯಾಯಾಧೀಶರ ಇರುವ ಜನರ ಸಮಿತಿಗೆ ವರದಿಯನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು.

ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ತನ್ನ ತನಿಖೆಯನ್ನು ಮುಕ್ತಾಯಗೊಳಿಸಲು ಸೆಬಿಗೆ ಆಗಸ್ಟ್ 14 ರವರೆಗೆ ಕಾಲಾವಕಾಶವನ್ನು ವಿಸ್ತರಿಸಿತ್ತು. ಆದಾಗ್ಯೂ, ಈ ವಿಸ್ತರಣೆಯು ತನಿಖೆಯನ್ನು ಪೂರ್ಣಗೊಳಿಸಲು ಮಾರುಕಟ್ಟೆ ನಿಯಂತ್ರಕರಿಂದ ಕೇಳಿದ ಆರು ತಿಂಗಳ ಸಮಯಕ್ಕಿಂತ ಕಡಿಮೆಯಾಗಿದೆ ಎನ್ನಲಾಗಿದೆ.

ವಾಣಿಜ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version