Site icon Vistara News

Adhir Ranjan: ಟಿಎಂಸಿ ಬದಲು ಬಿಜೆಪಿಗೆ ಮತ ಹಾಕೋದೇ ಬೆಸ್ಟ್‌ ಎಂದ ಕಾಂಗ್ರೆಸ್‌ ನಾಯಕ!

Adhir Ranjan

Adhir Ranjan Chowdhury says 'better to vote for BJP than Trinamool', Congress reacts

ಕೋಲ್ಕೊತಾ: ಬೇಸಿಗೆಯ ರಣಬಿಸಿಲಿಗಿಂತ ಲೋಕಸಭೆ ಚುನಾವಣೆ (Lok Sabha Election 2024) ಕಾವು ದಿನೇದಿನೆ ಜಾಸ್ತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ನೂರಾರು ಗಣ್ಯರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಅಬ್ಬರದ ಪ್ರಚಾರದ ಜತೆಗೆ ಭಾರಿ ಭಾಷಣವನ್ನೂ ಮಾಡುತ್ತಿದ್ದಾರೆ. ಒಂದು ಪಕ್ಷದ ಅಭ್ಯರ್ಥಿಗಳು, ನಾಯಕರು ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, “ಟಿಎಂಸಿಗೆ ಮತ ಹಾಕುವುದಕ್ಕಿಂತ ಬಿಜೆಪಿಗೆ ಮತ ನೀಡುವುದೇ ವಾಸಿ” ಎಂಬುದಾಗಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ (Adhir Ranjan) ಅವರು ಹೇಳಿರುವುದು ಅಚ್ಚರಿ ಮೂಡಿಸಿದೆ. ಹಾಗೆಯೇ, ಅವರು ಹೇಳಿದ ವಿಡಿಯೊ (Viral Video) ಭಾರಿ ವೈರಲ್‌ ಆಗಿದೆ.

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಆಯೋಜಿಸಿದ್ದ ಚುನಾವಣೆ ರ‍್ಯಾಲಿಯಲ್ಲಿ ಅಧೀರ್‌ ರಂಜನ್‌ ಚೌಧರಿ ಮಾತನಾಡಿದ್ದಾರೆ. “ಲೋಕಸಭೆ ಚುನಾವಣೆಯಲ್ಲಿ 400ಕ್ಕಿಂತ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಪ್ರಧಾನಿಯವರ ಕನಸು ನನಸಾಗುವುದಿಲ್ಲ. ಈಗಾಗಲೇ ಮೋದಿ ಅವರ ಕೈಯಿಂದ 100 ಕ್ಷೇತ್ರಗಳು ಹಾರಿ ಹೋಗಿವೆ. ಕಾಂಗ್ರೆಸ್‌ ಹಾಗೂ ಸಿಪಿಎಂ ಅಭ್ಯರ್ಥಿಗಳ ಗೆಲುವು ಮುಖ್ಯವಾಗಿದೆ. ಹಾಗೊಂದು ವೇಳೆ ನೀವು ಗೆಲ್ಲಿಸುವುದೇ ಆದರೆ, ಟಿಎಂಸಿಗಿಂತ ಬಿಜೆಪಿಗೇ ಮತ ಹಾಕುವುದು ಒಳಿತು” ಎಂದು ಹೇಳಿದ್ದಾರೆ.

ಅಧೀರ್‌ ರಂಜನ್‌ ಚೌಧರಿ ಅವರು ನೀಡಿದ ಹೇಳಿಕೆಯ ವಿಡಿಯೊ ವೈರಲ್‌ ಆಗುತ್ತಲೇ ಬಿಜೆಪಿ ನಾಯಕರು ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ಪ್ರತಿಪಕ್ಷಗಳಿಗೆ ಗುರಿಯೂ ಇಲ್ಲ, ಉದ್ದೇಶವೂ ಇಲ್ಲ. ಇನ್ನು, ಇಂಡಿಯಾ ಒಕ್ಕೂಟಕ್ಕೆ ಜನರನ್ನು ಇಬ್ಭಾಗ ಮಾಡುವುದು, ಭ್ರಷ್ಟಾಚಾರ ಎಸಗುವುದು ಹಾಗೂ ಜನರಲ್ಲಿ ಗೊಂದಲ ಮೂಡಿಸುವುದೇ ಕಾಯಕವಾಗಿದೆ. ಇವರ ಮಧ್ಯೆಯೇ, ಬಿಜೆಪಿಗೆ ಮತ ನೀಡಿ ಎಂಬುದಾಗಿ ಕಾಂಗ್ರೆಸ್‌ ನಾಯಕ ತಿಳಿಸಿದ್ದಾರೆ. ಟಿಎಂಸಿಗೆ ಮತ ನೀಡುವ ಬದಲು ಬಿಜೆಪಿಯೇ ಬೆಸ್ಟ್‌ ಎಂಬುದಾಗಿ ಅವರು ಹೇಳಿದ್ದಾರೆ” ಎಂದು ಬಿಜೆಪಿ ನಾಯಕ ಶೆಹಜಾದ್‌ ಜೈ ಹಿಂದ್‌ ಪೋಸ್ಟ್‌ ಮಾಡಿದ್ದಾರೆ.

ಸ್ಪಷ್ಟನೆ ಕೊಟ್ಟ ಕಾಂಗ್ರೆಸ್‌

ಅಧೀರ್‌ ರಂಜನ್‌ ಚೌಧರಿ ನೀಡಿದ ಹೇಳಿಕೆ ಕುರಿತು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಸ್ಪಷ್ಟನೆ ನೀಡಿದರು. “ಅಧೀರ್‌ ರಂಜನ್‌ ಚೌಧರಿ ಅವರು ಯಾವ ಅರ್ಥದಲ್ಲಿ ಹಾಗೆ ಹೇಳಿದ್ದಾರೋ ಗೊತ್ತಿಲ್ಲ ಹಾಗೂ ನಾನು ಆ ವಿಡಿಯೊವನ್ನು ನೋಡಿಲ್ಲ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಸ್ಥಾನಗಳ ಸಂಖ್ಯೆಯು ಈ ಬಾರಿ ಗಣನೀಯವಾಗಿ ಕುಸಿಯುವಂತೆ ಮಾಡುವುದು ಕಾಂಗ್ರೆಸ್‌ನ ಗುರಿಯಾಗಿದೆ” ಎಂದು ಹೇಳಿದರು. ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿಯು ಫಲಿಸಿಲ್ಲ. ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿದೆ.

ಇದನ್ನೂ ಓದಿ: Shyam Rangeela: ಮೋದಿಯನ್ನು ಮಿಮಿಕ್ರಿ ಮಾಡಿ ಖ್ಯಾತಿಯಾದ ಕಲಾವಿದ ಈಗ ಪ್ರಧಾನಿ ವಿರುದ್ಧವೇ ಕಣಕ್ಕೆ!

Exit mobile version